ಇತ್ತೀಚಿನ ಬರಹಗಳು

ಎಣಿಸುವುದು, ಮಾಹಿತಿ ಸಂಗ್ರಹಿಸುವುದು, ಲೆಕ್ಕ ಹಾಕುವುದು, ಅಂಕಿ ಸಂಖ್ಯೆ ದಾಖಲಿಸುವುದು, ವಿಷಯ ಕಲೆ ಹಾಕುವುದು ಮುಂತಾದ ಅರ್ಥಗಳನ್ನು ಒಳಗೊಂಡಿರುತ್ತದೆ. ಇದೀಗ ಜನಗಣತಿ, ಜಾತಿಗಣತಿ, ಉಪಜಾತಿ ಗಣತಿ, ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ, ಆರ್ಥಿಕ ಮತ್ತು ಲಿಂಗ ಗಣತಿ ಮುಂತಾದ ಗಣತಿಗಳ ಸರಣಿ ಪ್ರಾರಂಭವಾಗಿದೆ.


ಮಳೆಗಾಲದ ಸುಂದರವಾದ ದಿನಗಳು ನಮ್ಮ ಜೊತೆಗಿವೆ. ನಾವಿಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಡಾಕ್ಟರ್ ವಾರಿಜಾ ನಿರ್ಬೈಲ್ ರವರ ಮನೆಗೆ ಹೋಗೋಣ. ಅವರು ನಿವೃತ್ತರಾದರೂ ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡವರು. ಸಂಗೀತ, ಗಮಕ, ಇಂಗ್ಲೀಷ್ ವ್ಯಾಕರಣ ಇತ್ಯಾದಿಗಳನ್ನು ಕಲಿಸುವ ಜೊತೆಗೆ ಗಿಡಗಳ ಬಗ್ಗೆ ಸಾಕಷ್ಟು ಆಸಕ್ತಿ ವಹಿಸುವವರು.

ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ ಯುವತಿಯರು, ವಿದ್ಯಾರ್ಥಿಗಳು ಹೃದಯಘಾತದಿಂದ ದಿಢೀರನೆ ಯಾವುದೇ ಪೂರ್ವ ಮುನ್ಸೂಚನೆ ಇಲ್ಲದೆ ಸಾಯುತ್ತಿರುವುದು ಹೆಚ್ಚಾಗುತ್ತಿದೆ. ಅದಕ್ಕೆ ಹಲವಾರು ಕಾರಣಗಳು ಇರಬಹುದು. ಅದನ್ನು ವೈದ್ಯಕೀಯ ಸಂಶೋಧನಾ ಕ್ಷೇತ್ರ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ ಮತ್ತು ಸರ್ಕಾರವು ಆ ನಿಟ್ಟಿನಲ್ಲಿ ಪ್ರಯತ್ನ ಪಡಲಿ.

ತಾನು ಕೈಗೆತ್ತಿದ ಕಾರ್ಯವು ಯಶಸ್ವಿಯಾಗಬೇಕೆಂಬುದು ಎಲ್ಲರ ಅಪೇಕ್ಷೆ. ಹೊಸದಾದ ಕೆಲಸವನ್ನು ಕೈಗೆತ್ತಿಕೊಳ್ಳುವಾಗ ಹಿರಿಯರ ಶುಭಾಶೀರ್ವಾದ ಬೇಡುವುದು, ಗಣಪತಿ ಹವನ ಅಥವಾ ಇನ್ನಿತರ ಪೂಜೆಗಳ ಮೂಲಕ ಭಗವಂತನಲ್ಲಿ ಕಾರ್ಯಕ್ರಮದ ಯಶಸ್ಸಿಗಾಗಿ ಪ್ರಾರ್ಥನೆ ಮಾಡುವುದು ಭಾರತೀಯರ ಸಂಸ್ಕಾರ. ಏನಿಲ್ಲೆಂದರೂ ದೀಪವನ್ನಾದರೂ ಹಚ್ಚಿಟ್ಟು ಭಗವದನುಗ್ರಹ ಬೇಡುತ್ತೇವೆ.

ಮಳೆಗಾಲ ಪ್ರಾರಂಭವಾಗಿ ಬರೋಬರಿ ಒಂದು ತಿಂಗಳಾಗುತ್ತಾ ಬಂತು. ಬೇಸಿಗೆ ಕಾಲಕ್ಕಿಂತಲೂ ಮಳೆಗಾಲದ ಸಮಯದಲ್ಲಿ ಸೊಳ್ಳೆಗಳ ಕಾಟ ಬಹಳ. ಈ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆ ಅಧಿಕ. ಸೊಳ್ಳೆಗಳ ಕಾಟವನ್ನು ತಪ್ಪಿಸಲು ನಾವು ರಾಸಾಯನಿಕ ವಸ್ತುಗಳಿಂದ ತಯಾರಿಸಿದ ವಿಕರ್ಷಕಗಳನ್ನು ಬಳಸುತ್ತೇವೆ.

ರಾಜ್ಯದಲ್ಲಿ ಈ ವರ್ಷ - ಗರಿಷ್ಟ ಗರಿಷ್ಠ ಪ್ರಮಾಣದಲ್ಲಿ ಪ್ರಮಾಣದಲ್ಲಿ ದ್ವಿದಳ ದ್ವಿದಳ ಧಾನ್ಯಗಳನ್ನು, ಅದರಲ್ಲೂ ವಿಶೇಷವಾಗಿ ತೊಗರಿಯನ್ನು ಬೆಳೆಯುವ ಮೂಲಕ ದೇಶದಲ್ಲಿ ದೇಶದಲ್ಲಿ ಆಗ್ರಸ್ಥಾನಕ್ಕೇರಲು ಗುರಿಯನ್ನು ಹಾಕಿಕೊಳ್ಳಲಾಗಿದೆ. ದೇಶದಲ್ಲಿ ಪ್ರಸ್ತುತ ಮಹಾರಾಷ್ಟ್ರವು ದ್ವಿದಳ ಧಾನ್ಯಗಳ ಉತ್ಪಾದನೆಯಲ್ಲಿ ಮುಂದಿದೆ.

ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ "ವಿಪ್ರ ವಾಣಿ"

ಕೆಲವರ ಬಗ್ಗೆ ಹಲವು ಉದಾಹರಣೆಗಳು. ಇದು ಆ ರೀತಿಯ ಜನಗಳಿಗೆ ಮಾತ್ರ ಅನ್ವಯ.

ಒಂದು ದಿನ ಬಸ್ ನಲ್ಲಿ ಪ್ರಯಾಣ ಹೊರಟಿದ್ದೆ. ಮಧ್ಯಾಹ್ನದ ಊಟಕ್ಕಾಗಿ ಬಸ್ ಹೈವೇ ಹತ್ತಿರದ ಹೋಟೆಲ್ ಒಂದರ ಬಳಿ ನಿಂತಿತು. ನನಗೂ ಬಹಳ ಹಸಿವೆಯಾದ್ದರಿಂದ ಇಳಿದು ಬೇಗನೇ ಊಟ ಮುಗಿಸಿದೆ. ಇನ್ನೂ ಹಲವಾರು ಮಂದಿ ಪ್ರಯಾಣಿಕರು ಊಟ ಮಾಡುತ್ತಿದ್ದರು. ನಾನು ಮತ್ತೆ ಬಂದು ಬಸ್ಸಿನಲ್ಲಿ ನನ್ನ ಸೀಟಿನಲ್ಲಿ ಕುಳಿತುಕೊಂಡೆ. ಬಸ್ ನಿಂತ ಜಾಗದ ಆ ಕಡೆಗೆ ರಸ್ತೆಯ ಒಂದು ಬದಿ ಪೂರ್ತಿ ಗದ್ದೆಗಳು.