Life is short'ನ ಸುತ್ತಮುತ್ತ

Life is short'ನ ಸುತ್ತಮುತ್ತ

Life is shortನ ಸುತ್ತಮುತ್ತ

Life is short  ...ಕುಣೀರಿ, ಕುಡೀರಿ, ಗುದ್ದಾಡಿ, ಒದ್ದಾಡಿ, ಒದೀರಿ, ಒದೆಸಿಕೊಳ್ಳಿ ಅಂತೆಲ್ಲ  ಈ ಫೇಸ್ಬುಕ್ಕು, ವ್ಯಾಟಾಪ್, ಟ್ವಿಟ್ಟರ್’ನಲ್ಲಿ ಓದುತ್ತಾ ಇರ್ತೀನಿ ... ನೀವೂ ಓದಿರ್ತೀರ, ಹಂಚಿಕೊಂಡಿರ್ತೀರಾ ... ಅಲ್ವೇ?

ನನಗೆ ಅದು ಅರ್ಥವಾಗೋಲ್ಲ ...ಅದೇನೋ ಗೊತ್ತಿಲ್ಲ ... ನಾನಂತೂ ಕನಿಷ್ಟ ಒಂದು ಮುನ್ನೂರು ವರ್ಷ ಇಲ್ಲಿ ಇರೋಕ್ಕೇ ಬಂದಿರೋದು ...

ಅಲ್ಲಾ, Life is short ಅಂತ ಬಿದ್ಗೊಂಡೇ ಇರೋಕ್ಕಾಗುತ್ಯೇ? ... ಕರ್ತವ್ಯ ಅಂತ ಒಂದಿರುತ್ತೆ ... ಹಾಗಾಗಿ ಜಸ್ಟ್ ರಿಲ್ಯಾಕ್ಸ್ ಅನ್ನೋದು ಸುಳ್ಳು !

ಅಲ್ಲಾ, Life is short ಅಂದುಕೊಂಡು ’ಅಪ್ಪ, ಅಮ್ಮ ನನ್ನನ್ನು ಶಾಲೆಗೆ ಸೇರಿಸಿಬೇಡಿ’ ಅಂತ ಹೇಳಿದ್ವಾ? ಸುಮ್ನಿರಿ ಸದ್ಯ ... ತೆಗೆದು ನಾಲ್ಕು ಬಿಟ್ಟಿರೋವ್ರು ... ಇಂಜಿನೀರಿಂಗ್, ಮೆಡಿಕಲ್ ಅಂತ ಮಣ್ಣು ಹೊತ್ತೋವ್ರಿಗೆ ಗೊತ್ತು, life was not short .. every semester was quite long u know.

allaa, Life is short ಅಂತ ಅಂದುಕೊಂಡು ಮದುವೆ ಆಗದೇ ಹಾಗೇ ಇದ್ವಾ? ಇಲ್ವೇ? 

ಈಗಿನವರ ವಿಚಾರ ಬಿಡಿ ...ಮದುವೆಗೆ ತಾವು ರೆಡಿ ಇಲ್ಲ ಅಂತ ಐದು ವರ್ಷ ಲಿವ್-ಇನ್ ಮಾಡಿದ ಮೇಲೆ ಹೇಳ್ತಾರೆ ... ಮಕ್ಕಳು ಮರಿ ಜಂಜಟ್ಟೇ ಬೇಡ ಅಂತ ಸುಮ್ಮನೆ ಇದ್ದು ಬಿಡುವ ಐಟಿ ಸಂಸಾರಿಗಳು ಇದ್ದಾರೆ ...ತಮ್ಮ ಕರಿಯರ್’ಗೆ ತೊಂದರೆಯಾಗುತ್ತೆ ಅಂತ ಮದುವೇನೇ ಆಗದೇ ಇರುವವರೂ ಇದ್ದಾರೆ.‘ Life is short ಸುಮ್ನೆ ಇರೋಷ್ಟು ದಿನ ಜಂಜಟ್ಟೇಕೇ ಅಂತ ...

ಅಲ್ಲಾ, Life is short ಅಂತ ಅಂದುಕೊಂಡೇ ಇರೋಷ್ಟು ದಿನ ದಿಲ್ದಾರ್ ಆಗಿ ಬದುಕೋಣ ಅಂತ ಕೈಲಿ long ಹಿಡಿದರೇ ಕೆಲವರು ? ಅದೇನೋ ಗೊತ್ತಿಲ್ಲಪ್ಪ !

Life is short ಅಂತ ಅನ್ವಯಿಸುವುದು ಇಂದಿನ ಎಲೆಕ್ಟ್ರಾನಿಕ್ಸ್’ಗೆ ಮಾತ್ರ ಅನ್ನಿಸುತ್ತೆ. ತೊಗೊಂಡ್ ಎರಡು ವರ್ಷ ಆಗಿರೋಲ್ಲ, ಸೇಬಿನ ಅಂಗಡಿಯವನು ಇನ್ನೊಂದು ಹೊಸಾ ಮಾಡಲ್ ಬಿಟ್ಟಾ ಅಂದ್ರೆ, ಹಿಂದಿನ ಮಾಡಲ್ ಐ-ಫೋನ್ ಕೆಲಸವೇ ಮಾಡೋದಿಲ್ರೀ ! ಕೊಂಡಾಗ ಒಂದು ವರ್ಷ ವಾರಂಟಿ ಹೊತ್ಕೊಂಡ್ ಬರೋ ಪ್ರಿಂಟರ್ ವಾರಂಟಿ ಮುಗಿದ ಮಾರನೆಯ ದಿನ ಆತ್ಮಹತ್ಯೆ ಮಾಡಿಕೊಂಡಿರುತ್ತೆ ...ತೊಗೊಂಡ್ ಎರಡು ವರ್ಷಕ್ಕೇ ಲ್ಯಾಪ್ಟಾಪು ಎತ್ತಿನ ಗಾಡಿಯಂತೆ ಓಡುತ್ತೆ ...ತೊಗೊಂಡಾಗಿನ ೨ ಜಿಬಿ ರಾಮ ನಂತರ ಯಾತಕ್ಕೂ ಬೇಡವಾಗಿ ಜುಜುಬಿ ಆಗ್ತಾನೆ. Life is short you know

Life is short ಅಂತ ಅನ್ವಯಿದೇ ಇರುವುದು ವೈನ್’ಗೆ ಮಾತ್ರ ಅನ್ನಿಸುತ್ತೆ? ವಯಸ್ಸಾದಷ್ಟು ರುಚಿ ಅಂತೆ ... ಅದಕ್ಕೇ ಇರಬೇಕು ಯಾವುದಾದರೂ ಸಕತ್ತಾಗಿರೋ ಪದಾರ್ಥಕ್ಕೋ, ಜೀವಿಗೋ ’ವೈನಾಗೈತೆ’ ಅನ್ನೋದು ... ಬಲ್ಲವರೇ ಬಲ್ಲರು ವೈನಿನ ಸವಿಯ ... ನನಗೇನು ಗೊತ್ತು?

Life is short ... ಇರಬಹುದು ... ಮೊನ್ನೆ ಹೀಗೇ ಒಬ್ಬರು ತಮ್ಮ ಮುತ್ತಜ್ಜಿಯನ್ನು ಕಳೆದುಕೊಂಡಿದ್ದಕ್ಕೆ ದು:ಖ ವ್ಯಕ್ತಪಡಿಸಿದರು. ಅವರ ಮುತ್ತಜ್ಜಿ, ಅವರು ದು:ಖಿಸಿದರು ಎಲ್ಲ ಸರಿ ...ಆದರೆ, ’ತೊಂಬತ್ತಾಗಿತ್ತು ಅಷ್ಟೇ’ ಅಂದ ಡೈಲಾಗ್ ಹೊಡೆದಾಗ ಅನ್ನಿಸಿದ್ದು ’Life is short ... but how short is it? ಅಂತ ...

ಕೊನೇ ಗುಟುಕು ...ವೈನ್’ಅಲ್ಲ ಮಾರಾಯ್ರೇ ... ಈ Life is short ಅಂತಾರಲ್ಲ, ಇದಕ್ಕೆ ಮಾನದಂಡ ಏನು ಅಂತ? 

ಏನು ಮಾನದಂಡ ಅಂತ ಪ್ರಶ್ನೆ ಕೇಳಿದ ನನ್ನ ’ಮಾನ’ ದಂಡ ಆಗದೇ ಇದ್ರೆ ಸಾಕು ಬಿಡಿ ...ಈ ನಡುವೆ ಅದೂ ಇಲ್ಲ ...ಮಾನದಂಡ ಅಂತ ಅನ್ನಿಸಿದರೆ ಸಾಕು ಕೈಗೆ ಕೋವಿ ತೆಗೆದುಕೊಂಡು ಹೊಡೀತಾರೆ ಗುಂಡ !!! ಥತ್ !

Comments

Submitted by kavinagaraj Fri, 01/09/2015 - 13:57

:) Life is short ಅಂತ long ಉದಾಹರಣೆಗಳನ್ನೆ ಕೊಟ್ಟಿದ್ದೀರಿ. ನಿಜ, ನಮ್ಮನ್ನು ಬಿಟ್ಟು ಉಳಿದೆಲ್ಲದರದ್ದೂ Life is short!! ಈ short, longಗಳ ವ್ಯಾಪ್ತಿ ಮತ್ತು ವಿವರಣೆ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ!!

Submitted by ಗಣೇಶ Sun, 01/11/2015 - 22:56

:) :)
>>ವಾರಂಟಿ ಮುಗಿದ ಮಾರನೆಯ ದಿನ ಆತ್ಮಹತ್ಯೆ ಮಾಡಿಕೊಂಡಿರುತ್ತೆ..:) ನನ್ನ ಕಾರ್ಬನ್ ಮೊಬೈಲ್ ಸಹ ಹೀಗೇ ಆತ್ಮಹತ್ಯೆ ಮಾಡಿತು. :(
wife ಜತೆಯಲ್ಲಿದ್ದರೆ life is short ಅಂತ ಅನಿಸುವುದಿಲ್ಲ ಅಂತಾರೆ ಕೆಲವರು...
ನನ್ನ ಪ್ರಕಾರ short ಲೈಫೂ sweet ಅನಿಸುವುದು.... wife ಜತೆಗಿದ್ದರೆ..