Loving together ನಿಂದ Living together ವರೆಗೆ!!!
ಕವನ
ಅಂದು:
ನೆನಪಿನೋಲೆಯ ಓದಲು ಬೇಕು
ಒಂದು ಸುಮಧುರ ಮನಸ್ಸು,
ಅಂತೆಯೇ ಅದನ್ನು ಬಿಚ್ಚಲೂ ಬೇಕು
ಒಂದು ರಸಮಯ ಸಂಜೆ.
ಶಾಂತ ಸಾಗರದಾಚೆ ಬಂಗಾರದೊಕುಳಿಯ
ಚೆಲ್ಲಿ ರವಿ ತಾ ಲೀನನಾಗುವಾಗ,
ರಂಗೇರಿತು ಈ ಇಳೆ ನಮ್ಮೆಲ್ಲ
ನೆನಪುಗಳಿಗೆ ಬಣ್ಣ ಚೆಲ್ಲಿ.......
ಇಂದು:
ಇರುವಷ್ಟುದಿನ ಬದುಕಿಬಿಡು ಗೆಳತಿ
ಮದರ ಥೆರೆಸ್ಸಾ, ಗಾಂಧೀಜಿಯ ಹಾಗೆ,,!!
ಕೋಪಗೊಳ್ಳ ಬೇಡ dear
ನನಗೂ ಗೊತ್ತು ಹೇಳುವಷ್ಟು ಸುಲಭವಲ್ಲ
ಹಾಗೇ ಬದುಕುವುದು ಎಂದು,
ಆದರೇನು ಮಾಡಲಿ? ನಾನು
ಕೂಡಾ ಈ ಶತಮಾನದವನೇ,
ಇಂದಿನ ಕಾಲದಲ್ಲಿ ನಮ್ಮಂತವರಿಂದ
ಪುಕ್ಕಟ್ಟೆಯಾಗಿ ಸಿಗುವುದು ಉಪದೇಶ ಒಂದೇ...!!
ಅದು ಕೂಡಾ ವೀಕೆಂಡ್ ನಲ್ಲಿ ಮಾತ್ರ.....!!!
(ಕಾಲಾಯ ತಸ್ಮಯೇ ನಮಃ)