ಅಕ್ಕಮಹಾದೇವಿ ವಚನದಲ್ಲಿ ನಿರಾಕಾರ ನಿರ್ಗುಣೋಪಾಸನೆ

ಅಕ್ಕಮಹಾದೇವಿ ವಚನದಲ್ಲಿ ನಿರಾಕಾರ ನಿರ್ಗುಣೋಪಾಸನೆ

ಬರಹ

ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ!
ಎಡೆಯಿಲ್ಲದ ಕಡೆಯಿಲ್ಲದ ತೆಱಹಿಲ್ಲದ ಕುಱುಹಿಲ್ಲದ
ಚೆಲುವಂಗಾನೊಲಿದೆನವ್ವ!
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ!
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ!
ಇದು ಕಾರಣ ಚೆನ್ನಮಲ್ಲಿಕಾರ್ಜುನ ಚೆಲುವಗಂಡನೆನಗೆ!
ಈ ಸಾವ ಕೆಡುವ ಗಂಡರನೊಯ್ದು ಒಲೆಯೊಳಗಿಕ್ಕು ತಾಯೆ!

ಎಡೆಯಿಲ್ಲದ= ಅವನಿರುವ ಸ್ಥಳಬಿಟ್ಟು ಬೇಱೆ ಸ್ಥಳವಿಲ್ಲದ (ಸರ್ವಾಂತರ್ಯಾಮಿ)
ತೆಱಹು=ತೆಱವು=ಅವಕಾಶ=ಖಾಲಿಜಾಗ ಶಿವನು ಸರ್ವವ್ಯಾಪಿ ಮತ್ತು ಓತಪ್ರೋತ
ಕುಱುಹು=ಗುಱುತು=ನಿರ್ದಿಷ್ಟರೂಪ. ಶಿವನಿಗೆ ನಿರ್ದಿಷ್ಟ ರೂಪವಿಲ್ಲ. (ನಿರಾಕಾರಿ)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet