ತಪ್ಪಿ ನಡೆಸ ಸರ್ಕಾರ

ತಪ್ಪಿ ನಡೆಸ ಸರ್ಕಾರ

ಬರಹ

ಇದು ಖಂಡಿತಾ ನಾಚಿಕೆಗೇಡಿತನದ ವಿಚಾರ. ಯಡಿಯೂರಪ್ಪ ಸರ್ಕಾರಕದಕೆ ಕಿಂಚಿತ್ತೂ ರೈತರ ಮೇಲೆ ಪ್ರೀತಿ ಅಷ್ಟೇಕೆ ಸಾಮಾನ್ಯ ಜವಾಬ್ದಾರಿ ಕೂಡ ಇಲ್ಲ. ಮತದಾರ ಪ್ರಭುವಿನ ತೀರ್ಮಾನಕ್ಕೆ ಇದು ಛಡಿಯೇಟು ಅಲ್ಲದೆ ಮತ್ತೇನು...

ಹೌದು ನಾನು ಕರ್ನಾಟಕದ ಅತೀವೃಷ್ಠಿಗೆ ಸ್ಪಂದಿಸದೆ ಅಕ್ಕಗಾಗಿ ಹೊರಟಿರುವ ಸವಾರಿ ಕಂಡು ಹೀಗೆನ್ನಬೇಕಾಯಿತು. ಒಂದೆಡೆ ಅಕ್ಕ ಸಂಸ್ಥೆಯಿಂದ ಅಧಿಕೃತ ಆಹ್ವಾನ ಬಂದಿರುವ ಕಲಾವಿದರ ಪಡೆ ಒಂದೆಡೆಯಾದರೆ, ಪುಕ್ಕಟೆಯಾಗಿ ವಿದೇಶ ರೌಂಡ್ ಹೊಡೆಯಲು ಹಾತೊರೆಯುತ್ತಿರುವರೇ ಹೆಚ್ಚಾಗಿದ್ದಾರೆ. ತೀವ್ರ ಟೀಕೆಗೆ ಓಳಗಾಗಿ ಮಾತು ಬದಲಿಸಿದ ಮುಖ್ಯಮಂತ್ರಿ ಕ್ಷಣ ಮಾತ್ರದಲ್ಲೇ ಅದನ್ನು ಬದಲಾಯಿಸಿದು ತಲೆ ತಗ್ಗಿಸಬೇಕಾದ ವಿಚಾರ.

ಇಲ್ಲಿ ಮೂಲಭೂತ ವಿಚಾರವಾಗಿ ಒಂದು ಎದುರಾಗುತ್ತೆ. ಚುನಾವಣಾ ಟಿಕೆಟ್ ಗಿಟ್ಟಿಸುವುದರಿಂದ ಹಿಡಿದು, ಗುಂಡು ತುಂಡು ಸೇರಿದಂತೆ ಕೋಟ್ಯಾಂತರ ರೂಪಾಯಿ ವ್ಯಯಿಸಲು ತುಯಾರಿರುತ್ತಾರೆ. ಆದರೆ ಅಧಿಕಾರ ಸಿಕ್ಕ ಮೇಲೆ ಸ್ವಂತ ಖರ್ಚಿನಲ್ಲಿ ಪ್ರವಾಸ ಇವರು ಯಾಕೆ ಕೈಗೊಳ್ಳಲಲ್ಲ. ಹೋ ಹೀಗಿರಬೇಕು ಪುಕ್ಕಟೆಯಾಗಿ ಬರುವುದಾದದರೆ ನನಗೂ ನಮ್ಮಪ್ಪನಿಗೂ ಇರಲಿ ಅನ್ನುವ ಮನೋಭಾವ ಇವರದ್ದಾಗಿರಬೇಕು ಅಲ್ಲವೇ.!

ಈ ಹಿಂದೆಯೇ ಸಾವಿರ ರೈತರನ್ನು ಚೀನಾ ಪ್ರವಾಸ ಕೈಗೊಳ್ಳಲು ಹಣಕಾಸು ಒದಗಿಸಲು ಸರ್ಕಾರ ನಡೆಸಿದೆ ಎಂಬ ಸುದ್ದಿ. ಖಂಡಿತ ಪ್ರವಾಸ ಕೈಗೊಳ್ಳುವ ಯಾರು ಕೂಡ ರೈತನಾಗಿರುವುದಿಲ್ಲ. ಇವರೆಲ್ಲಾ ಪಕ್ಷದ ಕಾರ್ಯಕರ್ತರಲ್ಲದೆ ಬೇರಾರಿಗೂ ಅವಕಾಶ ದುರ್ಲಭ. ಯಾರಿಗೆ ಪಕ್ಷದ ಪರ ಒಲವು ಹಾಗೂ ಅನುಚೇಷ್ಟೆಗಳು ಹೊಂದಿದ್ದಾರೋ ಅವರಿಗೆ ಮಾತ್ರ ಈ ಸುವರ್ಣಾವಕಾಶ.

ಖ್ಯಾತ ಕಾದಂಬರಿಕಾರ ಎಸ್‌ ಎಲ್ ಬೈರಪ್ಪ ಒಂದು ನಿದರ್ಶನದ ಮೂಲಕ ಇದನ್ನು ಸೂಚ್ಯವಾಗಿ ಖಂಡಿಸಿದ್ದಾರೆ. ( ವಿಕ ಪತ್ರಿಕೆ) ಆದರೂ ನಮ್ಮದು ಚಂಡಿ ಕಂಡ ನಾಡಲ್ಲವೇ... ಹೇಳಿದ್ದನ್ನು ಬಿಟ್ಟು, ಮಾಡಬೇಕಿದ್ದನ್ನು ಬಿಟ್ಟು ಬೇರೆಲ್ಲಾ ಮಾಡುವ ಜಾಯಮಾನ.

ರೈತರ ಹೆಸರಲ್ಲಿ ಹಸಿರು ಶಾಲು ಹೊದ್ದು ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಇಂದು ಅವರ ಮಗ್ಗುಲಿಗೆ ಒದೆಯಲಾರಂಭಿಸಿದ್ದಾರೆ. ಉತ್ತರ ಕರ್ನಾಟಕದ ಜನತೆ ಪ್ರವಾಹದ ನೀರಲ್ಲಿ ಕಣ್ಣೀರಿಡುತ್ತಿದ್ದಾರೆ. ಇದು ಸಿಎಂಗಾಗಲೀ ಸ್ಥಳೀಯ ಜನಪ್ರತಿನಿಧಿಗಳಿಗಾಗಲಿ ಗೊತ್ತಿಲ್ಲವೇ. ಅಥವಾ ಅಧಿಕಾರ ಬಂದೊಡನೆ ಮತದಾರರ ಚಿಂತೆ ಯಾಕೆ ಅನ್ನುತ್ತಿದ್ದಾರ.. ಅಥವಾ ಚುನಾವಣೆ ಸಮೀಪಿಸಿದಾಗ ಮತದಾರ ಪ್ರಭುಗಳನ್ನು ಓಲೈಸಿಕೊಂಡ್ರೆ ಆಯಿತು ಬಿಡು ಅಂತೀದಾರ...

ಅದರಲ್ಲೂ ಒಂದು ವಿಶೇಷ ಅಥವಾ ತಮಾಷೆಯ ಏನಾದರು ಅಂದುಕೊಳ್ಳಿ. ಅಕ್ಕ ಪ್ರಿಯ ಅಮೇರಿಕನ್ನರಿಗೆ ತಿರುಪತಿಯ ಲಾಡು ಕೂಡ ರವಾನೆಯಗುತ್ತಿದೆ. ಅದು ಐದು ಸಾವಿರ ಲಾಡುಗಳು ಅಮೇರಿಕಾಕ್ಕೆ ಸಿದ್ದವಾಗಿವೆ. ಅದು ಸಿಎಂ ಜೊತೆಗೆಯೇ.

ಮಾನ್ಯ ಯಡಿಯೂರಪ್ಪನವರೇ ಅನ್ನದಾತ ಮರೆತು ಅಧಿಕಾರ ಚುಕ್ಕಾಣಿ ನಡೆಸಿದ ಅನೇಕ ಸರ್ಕಾರಗಳು ನೆಲ ಕಚ್ಚಿವೆ. ಅದು ನಿಮ್ಮ ನೆನಪಿನಲ್ಲಿರಲಿ. ಬಹು ಉತ್ಸಾಹದಿಂದ ಕಾರ್ಯಾರಂಭ ಮಾಡಿದ್ರಿ ನಿಜ. ಅನೇಕ ರೀತಿಯ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದೀರಾ.. ಆದರೆ ಈಗೇಕೆ ನಿಮ್ಮ ಬುದ್ದಿ ಕೈಕೊಟ್ಟಿತ್ತೋ ಗೊತ್ತಿಲ್ಲ.

ಮುಂದಿನ ವರ್ಷಗಳಲ್ಲಿ ನಿಮ್ಮ ಆಪ್ತೇಷ್ಟರ ಹಾಗೂ ನಾಯಕರ ಹಸಿವು ತಣಿಸುವಂತರಾಗಿ. ಪ್ರವಾಹ, ಅತೀವೃಷ್ಠಿ ಹಾಗೂ ಬೆಂಗಳೂರಿನಂತಹ ಸರಣಿ ಬಾಂಬ್‌ಗಳ ವಿಚಾರಕ್ಕೆ ಮೊದಲ ಆದ್ಯತೆ ನೀಡಿ. ಅದು ಬಿಟ್ಟು ಕ್ಷಣ ಕ್ಷಣಕ್ಕೆ ಅಕ್ಕಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ನೀಡುವುದು ಬಿಟ್ಟು ಬಿಡಿ. ಬೂಕನೆಕೆರೆ ಯಡಿಯೂರಪ್ಪನವರೇ ನೀವು ರೈತರು. ಹಾಗೆ ಪ್ರವಾಹ ಹಾಗೂ ಅತೀವೃಷ್ಠಿಗೆ ಒಳಗಾದ ಜನರೂ ರೈತರೇ.. ಈಗಲಾದ್ರು ಒಮ್ಮೆ ಯೋಚಿಸಿ ಅವಶ್ಯಕತೆ ಹಾಗೂ ಆಹ್ವಾನವಿದ್ದವರನ್ನು ಮಾತ್ರ ಕರೆದೊಯ್ಯುವಂತರಾಗಿ ಮಾನ್ಯ ಮುಖ್ಯಮಂತ್ರಿಗಳೇ..
- ಬಾಲರಾಜ್ ಡಿ.ಕೆ

ಪ್ರಚಲಿತ