ಬಾಲ್ಯದ ಒಂದು ಘಟನೆ

ಬಾಲ್ಯದ ಒಂದು ಘಟನೆ

ನಾನ್ ಆವಾಗ 3ನೇ ತರಗತಿಯಲ್ಲಿ ಓದುತಿದ್ದೆ, ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಬಂದಿತ್ತು. ರಜೆ ಬಂತೆಂದರೆ ಸಂತಸದ ಮನೆಗೆ ಏಣಿ ಹಾಕುತ್ತಿದ್ದಂತ ಕಾಲವದು ಬೆಳಗ್ಗೆ ಮನೆ ಬಿಟ್ಟರೆ ಸಂಜೆಯೋ ಇಲ್ಲ ರಾತ್ರಿನೋ ಮತ್ತೆ ಮನೆ ಸೇರುತ್ತಿದ್ದು.

ಕ್ರಿಕೆಟ್ ಆಡೋದು, ಚಿನ್ನಿದಾಂಡು ಆಡೋದು, ಈಜಾಡೋದು, ಮಾವಿನಕಾಯಿ, ಗೋಡುಂಬಿ ಹಣ್ಣುಗಳನ್ನು ಅವರಿವರ ಮರಗಳಲ್ಲಿ ಕಿತ್ತು ತಿನ್ನೊದು, ಇವೇ ರಜೆಯಲ್ಲಿ ನಮ್ಮ ದಿನನಿತ್ಯದ ಕೆಲಸಗಳಾಗಿರುತ್ತಿದ್ದವು. ವಿಶೇಷವಾಗಿ ಊರಿನಲ್ಲಿ ಏನೇ ತರಲೆ ಕೆಲಸಗಳು ನೆಡೆದಿದ್ದರೆ ಅದರ ಹಿಂದೆ ನಮ್ಮ ಗ್ಯಾಂಗಿನ ಸದಸ್ಯರುಗಳ ಕೈವಾಡವಿರುತಿತ್ತು.
ನಮ್ಮೂರು ಮೊದಲೇ ಹೇಳಿಕೇಳಿ ಚಿಕ್ಕದಾದ ಊರು ಏನಾದರೂ ಘಟನೆಗಳು ನೆಡೆದರೆ ಬಹುಬೇಗನೆ ವಿಷಯ ಊರ ತುಂಬೆಲ್ಲಾ ಹರಡುತ್ತಿತ್ತು. ಅಂತಹ ಅನೇಕ ಘನಂಧಾರಿ ಕೆಲಸಗಳಿಗೆ ನಾವುಗಳು ಆಗಾಗ ಕಾರಣರಾಗುತ್ತಿದ್ದೆವು. ಓಮ್ಮೆ ಕ್ರಿಕೆಟ್ ಆಡಿ ದಣಿದು ಬಿರುಬಿಸಿಲ ದಾಹ ನೀಗಿಸಿಕೊಳ್ಳಲು ನಮ್ಮ ಗ್ಯಾಂಗ್ ಲೀಡ್ರು ಪರಮೇಶಿ ಜೊತೆ ಸೇರಿ ಅಪಾಯಕಾರಿ ಯೋಜನೆಯೊಂದನ್ನು ಎಲ್ಲರೂ ನಿರ್ಧರಿಸಿ, ಅದರಂತೆ ನಮ್ಮೂರ ರೇವೇಗೌಡ್ರ ತೆಂಗಿನ ತೋಟದಲ್ಲಿ ಒಬ್ಬರಿಗೆ ತಲಾ ಎರಡೆರಡರಂತೆ ಹನ್ನೆರಡು ಎಳನೀರನ್ನು ನಮ್ಮತ್ತೆ ಮಗ ಮಂಜ ಮರ ಏರಿ ಕಿತ್ತುಹಾಕಿದ. ಆಸೆ ದುರಾಸೆಯಾಗಿ ತೆಂಗಿನಕಾಯಿಯನ್ನು ಸಹ ಮರದಿಂದ ಕಿತ್ತುಹಾಕಲು ನಾವುಗಳು ಅವನಿಗೆ ಆದೇಶ ಕೊಟ್ಟೆವು. ಕಂಠಪೂರ್ತಿ ಎಳನೀರನ್ನು ಕುಡಿದು, ತೆಂಗಿನಕಾಯಿಯನ್ನು ಚನ್ನಬಸವಯ್ಯನವರ ಅಂಗಡಿಗೆ ಹಾಕಲು ಹೊರಟೆವು. ಆಗಲೇ ನಮ್ಮ ಈ ಸತ್ಕಾರ್ಯದ ವಿಷಯ ಊರಲ್ಲೆಲ್ಲಾ ಹರಡಿತ್ತು!

ವಿಷಯ ಸೋರಿಕೆ ಮಾಡಿದವನು ನಮ್ಮ ಗ್ಯಾಂಗಿನ ಸದಸ್ಯ ಸತಿ. ಒಂದು ಎಳನೀರನ್ನು ಅವನಿಗೆ ಕಡಿಮೆ ಕೊಟ್ಟಿದ್ದಕ್ಕೆ ಸಿಡಿದ್ದೆದ್ದು ನಮಗೆ ಮುಳುವಾಗಿದ್ದನು. ಬೇರೆಯವರ ತೋಟದಲ್ಲಿ ತೆಂಗಿನ ಕಾಯಿಯನ್ನು ಮರದಿಂದ ಕೆಡವುದು ಇರಲಿ, ಬಿದ್ದ ಒಂದು ಕಾಯಿಯನ್ನು ತೆಗೆದು ಕೊಂಡರೆ ಐವತ್ತು ರೂಪಾಯಿ ದಂಡ ತೆರಬೇಕಾದ ನಿಯಮ ನಮ್ಮೂರಲ್ಲಿ ಇತ್ತು. ಇನ್ನೂ ನಾವುಗಳು ಮಾಡಿದ್ದು ಮಹಾಪರಾಧವೇ ಆಗಿತ್ತು. ಆದರೆ ಅರಿವಿಲ್ಲದ ಹುಡುಗರು ಎಂಬ ಶ್ರೀರಕ್ಷೆ ನಮ್ಮನ್ನು ಕಾಪಾಡಿತ್ತು. ನಿಯಮದ ಪ್ರಕಾರ ನಮಗೆ ಶಿಕ್ಷೆ ಕೊಟ್ಟಿದ್ದರೆ ಎರಡುದಿನ ಕತ್ತಲೆ ಕೋಣೆಯಲ್ಲಿ ನಮ್ಮನ್ನು ಕೂಡಿಹಾಕಬೇಕಿತ್ತು!

ಕಾಲಚಕ್ರ ಉರುಳಿದೆ. ಅಂದು ನಮ್ಮೂರಿನ ಜನರೆದರು ಖಳನಾಯಕರಾಗಿದ್ದ ನಮ್ಮ ಗುಂಪಿನ ಗೆಳೆಯರೆಲ್ಲ ಇಂದು ನಾಡಿನ ಸತ್ ಪ್ರಜೆಗಳಾಗಿದ್ದಾರೆ. ನನ್ನ ಬಾಲ್ಯ ಸ್ನೇಹಿತ ಸತಿ ಸದ್ಯ ಹೆಬ್ರಿ (ಆಗುಂಬೆ ಹತ್ತಿರ) ಎಂಬಲ್ಲಿ ಅಧ್ಯಾಪಕನಾಗಿ ಕೆಲಸ ನಿರ್ವಹಿಸುತ್ತಿದ್ದಾನೆ. ಹೈಸ್ಕೂಲ್ ಅಧ್ಯಾಪಕರ ಆಯ್ಕೆಗೆ ಕರ್ನಾಟಕ ಸರಕಾರ ನೆಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಇಡೀ ಜಿಲ್ಲೆಗೇ ಎರಡನೇ ಸ್ಥಾನ ಪಡೆದ ಹಿರಿಮೆ ಈತನದು. ನಮ್ಮ ಗ್ಯಾಂಗ್ ಲೀಡ್ರು ಪರಮೇಶಿ ಮನೆಯಲ್ಲಿ ಆರ್ಥಿಕ ವ್ಯವಸ್ಥೆ ಸರಿಯಾಗಿಲ್ಲದ್ದರಿಂದ ಕಷ್ಟಪಟ್ಟು ದುಡಿದು ತಂಗಿಯನ್ನು ಅಧ್ಯಾಪಕಿಯನ್ನಾಗಿಸಿ, ತನ್ನ ಸ್ವಂತ ಖರ್ಚಿನಿಂದ ಅವಳ ಮದುವೆ ಮಾಡಿದಂತಹ ಸಾಧಕ ಅವನು. ಇನ್ನೂ ನಮ್ಮತ್ತೆ ಮಗ ಮಂಜ ಇವನಿಗೆ ಸರಿಯಾದ ಮಾರ್ಗದರ್ಶನ ಮತ್ತು ಆರ್ಥಿಕ ವ್ಯವಸ್ಥೆ ಇದ್ದಿದ್ದರೆ ಇಂಡಿಯಾ ಕ್ರಿಕೆಟ್ ಟೀಮಿನಲ್ಲಿ ಅಲ್ಲದಿದ್ದರೂ ರಣಜಿ ಮಟ್ಟದಲ್ಲಿನ ಕ್ರಿಕೆಟ್ ತಂಡದ ಖಾಯಂ ಸದಸ್ಯನಾಗುವ ಪ್ರತಿಭೆ ಈತನದು. ಅಷ್ಟು ಸೊಗಸಾಗಿ ಕ್ರಿಕೆಟ್ ಆಡುತ್ತಾನೆ. ಅವನ ಆಟದ ಶೈಲಿಯನೊಮ್ಮೆ ನೋಡುವಾಸೆ ಇದ್ದರೆ ನನ್ನ ಜೊತೆ ಒಂದುಸಲ ನಮ್ಮೂರಿಗೆ ಹೋಗುವ ಬನ್ನಿ. - ನಿಮ್ಮ ಸುನಿಲ್ ಮಲ್ಲೇನಹಳ್ಳಿ

ನಮ್ಮ GM
ನಮ್ಮ GM
ಮೊನ್ನೆ ಮೊನ್ನೆ ಜನರಲ್ ಮೋಟರ್ಸ್ ಎನ್ನುವ US ಕಂಪನಿ ದಿವಾಳಿತನಗೊಂಡ ಬಗ್ಗೆ ನಾವೆಲ್ಲರೂ ಟಿವಿ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಸಾಕಷ್ಟು ವರದಿಗಳನ್ನು ಆಲಿಸಿದ್ದೇವೆ. ನಿಮ್ಮೆಲ್ಲರಿಗೂ ಆ ಕಂಪನಿಯ ಬಗ್ಗೆ ವಿಸೃತ ಮಾಹಿತಿ ಹಾಗು ಆ ಕಂಪನಿಯೊಡನೆ ನನ್ನ ನಂಟು ಇವುಗಳನ್ನು ತಿಳಿಸುವುದಕ್ಕಾಗಿ ಬರೆದ ಲೇಖನವಿದು ಸಮಯ ಸಿಕ್ಕಾಗ ತಪ್ಪಿಸದೇ ಓದಿ.

General Motors (GM)! ವಿಶ್ವದ ಎಲ್ಲಾ ಆಟೋಮೊಬೈಲ್ ತಯಾರಿಕ ಕಂಪನಿಗಳ ಹಿರಿಯಣ್ಣ. 20ರ ದಶಕದಿಂದಲೂ ಬರಿ ಅಮೇರಿಕೆಯಲ್ಲಿ ಅಲ್ಲದೆ ವಿಶ್ವದಾದ್ಯಂತ GMಯೆಂದರೆ ಹೆಸರುವಾಸಿ ಅಮೇರಿಕದಲಂತೂ ಮನೆಮಾತು.

ವಿಲಿಯಂ ಸಿ. ಡುರಂತ್ ನ ನೇತೃತ್ವದಲ್ಲಿ 1908ರಲ್ಲಿ ಅಸ್ತಿತ್ವಕ್ಕೆ ಬಂದ ಜನರಲ್ ಮೋಟರ್ಸ್.1931ನೇ ಇಸವಿಯ ಹೊತ್ತಿಗೆ ಆಟೋಮೊಬೈಲ್ ತಯಾರಿಕ ಕಂಪನಿಗಳಲ್ಲಿ ಅಗ್ರಸ್ಥಾನವನ್ನು ವಹಿಸಿಕೊಂಡು 2007ರ ವರೆಗೂ ಅಂದರೆ ಸುಮಾರು ೭೬ ವರುಷಗಳವರೆಗೆ ಆ ಸ್ಥಾನವನ್ನು ಕಾಯ್ದುಕೊಂಡು ಬಂತು. ಇದರ ಕೇಂದ್ರ ಕಚೇರಿ "Automobile City" Detroit ನಗರಿಯಲ್ಲಿದೆ.

Cadillac, Chevrolet, Hummer, Opel, Buick ಹೀಗೆ ಹದಿನೈದಕ್ಕೂ ಹೆಚ್ಚು ಬ್ರಾಂಡಿನ ಕಾರು, ಟ್ರಕ್ ಹಾಗು ಇನ್ನಿತರ ಮಾದರಿಯ ವಾಹನಗಳನ್ನು ೧೯೦೮ರಿನ್ದಲೇ ತಯಾರಿಸುತ್ತಾ ಬಂದಿದೆ. ಇದರ ಒಂದೊಂದು ಬ್ರಾಂಡಿನ ಹಿಂದೆಯೂ ಅಗಾಧವಾದ ಚರಿತ್ರೆನೇ ಇದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ಹಲವಾರು ಮೈಲುಗಲ್ಲುಗಳನ್ನು, ಸಂಶೋಧನೆಗಳನ್ನು ಮೊದಲು ಮಾಡಿದ ಖ್ಯಾತಿ ಜನರಲ್ ಮೋಟರ್ಸ್ಗೆ ಇದೆ. GMನ ಹಲವಾರು ಮಾದರಿಯ ಕಾರುಗಳು ವಿಶ್ವದಾದ್ಯಂತ ಬಹಳ ಹೆಸರುವಾಸಿ ಹಾಗು ಮನ್ನಣೆ ಪಡೆದುಕೊಂಡಿವೆ. ಬಹಳಷ್ಟು ಅಮೇರಿಕೆಯ ಅಧ್ಯಕ್ಷರುಗಳು ಈವರೆಗೆ ಅಧಿಕೃತವಾಗಿ ಉಪಯೋಗಿಸಿರುವುದು ಮತ್ತು ಉಪಯೋಗಿಸುತ್ತಿರುವುದು GM ನಿರ್ಮಿತ Cadillac ಕಾರನ್ನೇ!

2007ರ ವರೆಗೂ ವಿಶ್ವದ ಕಾರು ಉತ್ಪಾದನೆಯಲ್ಲಿ ಶೇಕಡಾ 15 ರಷ್ಟನ್ನು GM ಒಂದೇ ಉತ್ಪಾದಿಸುತ್ತಿತ್ತು. ಆದರೆ ಹಲವಾರು ವರುಷಗಳವರೆಗೂ Fortune 500 ಕಂಪನಿಗಳ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ರಾರಜಿಸಿದ ಪ್ರತಿಷ್ಠಿತ ಈ ಕಂಪನಿ, ಸುಮಾರು ಮೂರು ಲಕ್ಷ ಜನ ತನ್ನ ನೌಕರರಿಗೆ ಪ್ರತ್ಯಕ್ಷವಾಗಿ ಮತ್ತು ಒಂಬತ್ತು ಲಕ್ಷಕ್ಕೂ ಹೆಚ್ಚು ಜನರಿಗೆ ಪರೋಕ್ಷವಾಗಿ ಅನ್ನ ನೀಡುತ್ತಿದ್ದ ಈ ಕಂಪನಿ, 1955ರಲ್ಲಿ ವರುಷದ ವ್ಯವಹಾರದಲ್ಲಿ ಒಂದು ಬಿಲಿಯನ್ ಆದಾಯಗಳಿಸಿದ ವಿಶ್ವದ ಪ್ರಥಮ ಕಂಪನಿ ಎಂಬ ಖ್ಯಾತಿ ಪಡೆಕೊಂಡ ಈ ಕಂಪನಿ, ಗಾದೆ ಮಾತಿನಂತೆ ಎಷ್ಟೇ ದೊಡ್ಡ ಸಾಮ್ರಾಜ್ಯವಾಗಲಿ, ಎಷ್ಟೇ ದೊಡ್ಡ ನಟನಾಗಲಿ, ಎಷ್ಟೇ ದೊಡ್ಡ ಖ್ಯಾತಿ, ಯಶಸ್ಸುಗಳಿಸಿಕೊಂಡಿರಲಿ ಕಾಲಚಕ್ರ ಕಳೆದ ಹಾಗೆ ಯಶಸ್ಸಿನ ಓಟ ಕುಂಟಿತವಾಗುತ್ತಾ ಬರುವುದು ನಿಜ. GMನ ಯಶಸ್ಸಿನ ಓಟವು ಇದಕ್ಕೆ ಹೊರತಾಗಿಲ್ಲ. ಅಷ್ಟೊಂದು ಯಶಸ್ಸು, ಪ್ರಸಿದ್ದಿ, ಆದಾಯಗಳಿಸುತ್ತಿದ್ದ GM 1990ರ ಹೊತ್ತಿಗೆ ಸಂಕಷ್ಟದ ಹಾದಿಯನ್ನು ಹಿಡಿದಿತ್ತು. 2005ರಲ್ಲಿ ಪನರ್ ರಚನೆಯಾಯಿತು (Re Structuring). ಆದರೂ ಸಾಲದ ಸುಳಿವಿನಿಂದ ಹೊರಬರಲಾರದ GMನ ನಷ್ಟ 2007ರ ಹೊತ್ತಿಗೆ ಸುಮಾರು 39 ಬಿಲಿಯನ್ ಡಾಲರನಷ್ಟು ಇತ್ತು.

ಇದಕ್ಕಿರುವ ಕಾರಣಗಳು ಹಲವಾರು, ಏಷ್ಯನ್ ಕಾರು ಕಂಪೆನಿಗಳ ಅದರಲ್ಲೂ ವಿಶೇಷವಾಗಿ ಜಪಾನಿನ, ಕೊರೀಯಾದ ಕಾರು ತಯಾರಿಕ ಕಂಪನಿಗಳಿಂದ ತೀವ್ರ, ತೀವ್ರತರವಾದ ಪೈಪೋಟಿ ಹಾಗೂ ಉತ್ಪಾದಕ ಗುಣಮಟ್ಟವನ್ನು ಕಾಯ್ದುಕೊಂಡು ಬರಲು ಎಡವಿದ್ದು, ಸ್ಪಾರ್ಧತ್ಮಕ ಉತ್ಪಾದನೆ ಶೈಲಿಯನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಲು ವಿಪಲವಾದುದ್ದು ಇವೆಲ್ಲ ಕಾರಣಗಳು GMನ ಯಶಸ್ಸಿನ ಓಟಕ್ಕೆ ಅಂಕುಶ ಹಾಕಿದವು. ನಿಜಕ್ಕೂ GMನ ಯಶಸ್ಸು, ಪ್ರಸಿದ್ದಿ ಎಲ್ಲಾವೂ ಅಲೆಕ್ಸಾ೦ಡರ್ ಕಥೆ, ಟೈಟಾನಿಕ್ ಹಡಗಿನ ವ್ಯಥೆ ಯಂತೆ!
-ಸುನಿಲ್ ಮಲ್ಲೇನಹಳ್ಳಿ

ಹಡಗು ಎಷ್ಟೇ ದೊಡ್ದದಾದರೇನು? ತನ್ನೊಳಗೆ ಏನಾದರೂ

ನನಗೊಂತು GM ಅಪಾರವಾದ ಅಭಿಮಾನ ಹಾಗೂ ಗೌರವವಿದೆ.
ಇಂಜಿನಿಯರಿಂಗ್ ಓದುತ್ತಿರುವಾಗ ನಮ್ಮ ಲೆಕ್ಚರರ್ ಶಶಿಕಾಂತ (NSK) ಅವರ ರೂಮಿಗೆ ಹೋದಾಗಲೆಲ್ಲ ಹೇಳ್ತಿದ್ರು ನನ್ನ ಸ್ನೇಹಿತನೊಬ್ಬ ಗಿ ಎಂ ನಲ್ಲಿ ಕೆಲಸ ಮಾಡ್ತಿದ್ದಾನೆ ಅಂತ. ಆದ್ರೆ ನಾನು ಇಲ್ಲಿ ಲೆಕ್ಚರರ್ ಆಗಿದ್ದೀನಿ. ಆ ದಿನಗಳಲ್ಲಿ ಗಂ ಬಗ್ಗೆ ನನ್ನನೊಳಗೆ ಹೊಸದಾದ ಕನಸೊಂದು ಕುಡಿ ಒಡೆಯಿತು. ನಮ್ಮ ಇಂಜಿನಿಯರಿಂಗ್ ಪದವಿ ಮುಗಿಸೋ ಹೊತ್ತಿಗೆ ಆಗಲೇ GMTC-I (General Motors Tech Center-India) ಬೆಂಗಳೊರಿ ನಲ್ಲಿ ತಮ್ಮ ಇಂಜಿನಿಯರಿಂಗ್ ಸೆಂಟರ್ ಅನ್ನು ತೆರೆದಿದ್ದರು. ಆಗ ತಾನೇ ಇಂಜಿನಿಯರಿಂಗ್ ಮುಗಿಸಿದ್ದರಿಂದ ಅಲ್ಲಿ ಕೆಲಸ ಸಿಗುವ ಖಾತ್ರಿಯಿರಲಿಲ್ಲ.

.

Rating
No votes yet