ಓಕಳಿಪುರಂ

ಓಕಳಿಪುರಂ

ನಾನು ಬೆಂಗಳೂರಿನ ಮೊಟ್ಟ ಮೊದಲ ಸಮುದಾಯ ಬಾನುಲಿ ರೇಡಿಯೋ ಆಕ್ಟೀವ್ 90.4 ಸಮುದಾಯ ರೇಡಿಯೋಗೆ ಕಾರ್ಯಕ್ರಮಗಳನ್ನು ಮರ ಸಂಸ್ಥೆಯ ಮುಖಾಂತರ ರೇಡಿಯೋ ಕಾರ್ಯಕ್ರಮವನ್ನು ಮಾಡುತ್ತಿರುತ್ತೇನೆ. ಹಾಗೂ ಇದರ ಜೊತೆಗೆ ಸಮುದಾಯದ ಜನರನ್ನು ಭಾಗವಹಿಸುವಂತೆ ಮಾಡಲು ಸಮುದಾಯದ ಜೊತೆ ಸಹ ಚರ್ಚಿಸಲು ಬೆಂಗಳೂರಿನ ಹಲವಾರು ಏರಿಯಾಗಳಿಗೆ ಹೋಗುತ್ತಾ ಇರುತ್ತೇನೆ. ಅಂತಹದರಲ್ಲಿ ಓಕಳಿಪುರಂ ಒಂದು ಓಕಳಿಪುರಂ ಮೆಜೆಸ್ಟಿಕ್ ಪಕ್ಕ ಇರುವಂತಹ ಒಂದು ಏರಿಯಾ. ಇದನ್ನು ಎಲ್ಲರೂ ಸಹ ಸ್ಲಂ ಎಂದು ಹೇಳುತ್ತಿರುತ್ತಾರೆ, ಓಕಳಿಪುರಂ ಗೆ ಬೇಟಿಯನ್ನು ಮಾಡಿದಾಗ ನನಗೆ ಆಶ್ಚರ್ಯವಾಯಿತು ಕಾರಣ ಎಲ್ಲರು ಸಹ ಸ್ಲಂ ಅಂತಾರೆ ಆದರೆ ಇಲ್ಲಿ ನೋಡಿದರೆ ದೊಡ್ಡ ದೊಡ್ಡ ಮನೆಗಳು, ಅಚ್ಚುಕಟ್ಟಾದ ರಸ್ತೆಗಳು, ಇದು ಸ್ಲಂ ಅಲ್ಲ ಜೊತೆಗೆ ಮುಂದುವರೆದ ಪ್ರದೇಶ.
ನಂತರ ಹಾಗೆ ನಾನು ಮತ್ತೆ ನನ್ನ ಸ್ನೇಹಿತ ಒಂದು ರೌಂಡ್ ಹೊಡೆದಾಗ ಸಾತಿ ಅನ್ನೋ ಒಂದು ಸ್ವಯಂಸೇವಾ ಸಂಸ್ಥೆ ಕಾಣಿಸಿತು ಒಳಗೆ ಹೋಗಿ ಪರಿಚಯ ಮಾಡಿಕೊಂಡೆವು, ಸಾತಿ ಸಂಸ್ಥೆ ಬಗ್ಗೆ ವಿವರಣೆಯನ್ನು ಸಹ ನಮಗೆ ನೀಡಿದರು. (www.sathi-india.org) ಸಾತಿ ಸಂಸ್ಥೆಯು ರೈಲು ನಿಲ್ದಾಣದಲ್ಲಿ ಮನೆ ಬಿಟ್ಟು ಬರುವ ಮಕ್ಕಳನ್ನು ಮತ್ತೆ ಮನೆ ಸೇರಿಸುವ ಕಾರ್ಯವನ್ನು ಮಾಡುತ್ತಿದೆ. ಮಕ್ಕಳು ಹಲವಾರು ಕಾರಣಗಳಿಂದ ಮನೆ ಬಿಟ್ಟು ಬೆಂಗಳೂರು ಬರುತ್ತಾರೆ. ಇವರ ಪ್ರಕಾರ ಮಕ್ಕಳು ಪೋಷಕರ ಜೊತೆ ಇದ್ದರೆ ಮಾತ್ರ ಮಕ್ಕಳು ಚೆನ್ನಾಗಿ ಬೆಳೆಯೋದಕ್ಕೆ ಸಾದ್ಯ, ಮತ್ತೆ ಸಮಾಜದಲ್ಲಿ ಒಳ್ಳೆ ಸ್ಥಾನ ಮಾನ ದೊರಕುತ್ತದೆ ಎಂದರು. ಇದನ್ನು ಕೇಳಿ ಅವರಿಗೆ ರೇಡಿಯೋ ಆಕ್ಟಿವ್ 90.4 ಸಮುದಾಯ ರೇಡಿಯೋದಲ್ಲಿ ಕಾರ್ಯಕ್ರಮಗಳನ್ನು ಮಾಡಿ ಜನರಿಗೆ ಮಕ್ಕಳ ಪೋಷಕರಿಗೆ ತಿಳುವಳಿಕೆ ನೀಡಲು ಅನುಕೂಲವಾಗತ್ತೆ ಎಂದಾಗ ಅವರು ತುಂಬಾ ಉತ್ಸಾಹದಿಂದ ಪ್ರತಿ ಮಗುವಿನ ಒಂದೊಂದು ಕಥೆಯನ್ನು ತೆಗೆದುಕೊಂಡು ರೇಡಿಯೋ ಕಾರ್ಯಕ್ರಮವನ್ನು ಮಾಡಿದಾಗ ಜನರ ಮನಸ್ಸಿಗೆ ನಾಟುತ್ತದೆ ಎಂದರು.

ನಂತರ ಅಲ್ಲಿಂದ ಓಕಳಿಪುರಂ ವಾಸಿಗರ ಕ್ಷೆಮಾಬಿವೃದ್ದಿ ಸಂಘದ ಸದಸ್ಯರನ್ನು ಬೇಟಿ ಮಾಡಿದೆವು. ಈ ಸಂಘವು ಹಲವಾರು ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಈ ಓಕಳಿಪುರಂವನ್ನು ಸ್ಲಂ ಎಂದು ಕರೆಯುತ್ತಾರೆ ಮೊಟ್ಟಮೊದಲು ಸ್ಲಂ ಅನ್ನೋದನ್ನ ತೆಗಿಬೆಕು ಅದಕ್ಕಾಗಿ ಹಲವಾರು ಕೆಸಲಗಳನ್ನು ಮಾಡುತ್ತಿದ್ದೇವೆ ಅದರ ಜೊತೆಗೆ ರೇಡಿಯೋದಲ್ಲಿ ಕಾರ್ಯಕ್ರಮವನ್ನು ಮಾಡಲು, ಭಾಗವಹಿಸಲು ಸಿದ್ದ ಎಂದರು. ಇವರು ಸಂಘದ ಮುಖಾಂತರ ವಿದ್ಯುಶ್ಚಕ್ತಿಯ ಸಬ್ ಸ್ಟೇಷನ್, ಉತ್ತಮವಾದ ರಸ್ತೆ, ನೀರಿನ ಸಂಪರ್ಕವನ್ನು ಸಹ ಕಲ್ಪಿಸಿಕೊಂಡಿದ್ದಾರೆ. ಇವರ ಸಂಘದಲ್ಲಿ ೪೦೦ ಜನ ಸದಸ್ಯತ್ವ ಪಡೆದುಕೊಂಡಿದ್ದಾರೆ. ಇವರು ರೇಡಿಯೋ ಕಾರ್ಯಕ್ರಮಗಳ ಮುಖಾಂತರ ಎಲ್ಲಾ ರಾಜಕೀಯ ವ್ಯಕ್ತಿಗಳನ್ನು ಮತ್ತು ಸರ್ಕಾರಿ ಅದಿಕಾರಿಗಳನ್ನು ಕರೆಸಿ ನೇರ ಪೋನ್ ಇನ್ ನಂತಹ ಕಾರ್ಯಕ್ರಮಗಳನ್ನು ಮಾಡಿ ಓಕಳಿಪುರಂಗೆ ಬೇಕಾದಂತಹ ಎಲ್ಲಾ ಸವಲತ್ತುಗಳನ್ನು ಮತ್ತು ಸೌಕರ್ಯಗಳನ್ನು ಮಾಡಿಕೊಳ್ಳಬೇಕು ಅನ್ನೋ ಆಸೆಯನ್ನು ವ್ಯಕ್ತ ಪಡಿಸಿದರು.

Rating
No votes yet