ಓದಿದ್ದು ಕೇಳಿದ್ದು ನೋಡಿದ್ದು-13 ಐಟಿ ಕಂಪೆನಿಗಳ ಡೋಲಾಯಮಾನ ಸ್ಥಿತಿ

ಓದಿದ್ದು ಕೇಳಿದ್ದು ನೋಡಿದ್ದು-13 ಐಟಿ ಕಂಪೆನಿಗಳ ಡೋಲಾಯಮಾನ ಸ್ಥಿತಿ

ಪಶ್ಚಿಮ ಬಂಗಾಳ ಸರಕಾರವು ಸಿಂಗೂರಿನಲ್ಲಿ ಟಾಟಾದ ಕಾರು ಯೋಜನೆಗೆ ಉಂಟಾದ ಅಡ್ಡಿಯನ್ನು ನಿವಾರಿಸುವಲ್ಲಿ ತೋರಿದ ವೈಫಲ್ಯವು ಹಲವಾರು ಕಂಪೆನಿಗಳಿಗೆ ಭಯ ಹುಟ್ಟಿಸಿದೆ.

ಇನ್ಫೋಸಿಸ್ ಕಂಪೆನಿ ಇನ್ನೂರೈವತ್ತು ಕೋಟಿ ವೆಚ್ಚದಲ್ಲಿ ತಂತ್ರಾಂಶ ಅಭಿವೃದ್ಧಿ ಕೇಂದ್ರವನ್ನು ಕೊಲ್ಕತ್ತದ ಹೊರವಲಯದಲ್ಲಿ ಸ್ಥಾಪಿಸಲು ಮುಂದೆ ಬಂದಿತ್ತು. ಸಿಂಗೂರಿನ ಪ್ರಕರಣ,ಅಲ್ಲಿ ಕೋರ್ಟು ಆದೇಶವನ್ನು ಅನುಷ್ಠಾನ ಮಾಡಲೂ ಸರಕಾರದ ವೈಫಲ್ಯದ ನಂತರ ಈಗ ಇನ್ಫೋಸಿಸ್ ತನ್ನ ನಿರ್ಧಾರವನ್ನು ಮರುಪರಿಶೀಲಿಸುತ್ತಿದೆಯಂತೆ.

ಅತ್ತ ವಿಪ್ರೋ ಮೂರುನಾಲ್ಕು ಸಾವಿರ ನೌಕರರ ಕೆಲಸ ಅತೃಪ್ತಿಕರ-ಅದನ್ನು ಸುಧಾರಿಸಿ,ಇಲ್ಲ ನೌಕರಿ ಕಳೆದುಕೊಳ್ಳಲು ಸಿದ್ಧರಾಗಿ ಎಂದು ನೋಟೀಸು ಕೊಟ್ಟಿದೆಯಂತೆ.

ಈ ಹಿನ್ನೆಲೆಯಲ್ಲಿ ನೋಡಿದರೆ, ಇನ್ಫೋಸಿಸ್ ತೀರ್ಮಾನಕ್ಕೆ ಕಾರಣ ಸಿಂಗೂರು ಹಗರಣವೇ ಅಲ್ಲ ಐಟಿ ವಲಯದ ಡೋಲಾಯಮಾನ ಸ್ಥಿತಿಯೇ ಎಂಬ ಶಂಕೆ ಹುಟ್ಟಿದರೆ ಅದು ಸಹಜ!

---------------------------------------------------------------------

federer

ರೋಜರ್ ಫೆಡರರ್ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಐದನೆ ಬಾರಿ ಗೆದ್ದಿದ್ದಾರೆ.

-------------------------------------------------------------------

ಬಿಜೆಪಿ ಸರಕಾರದ ನೂರು ದಿನಗಳ ಸಂಭ್ರಮಾಚರಣೆಯಲ್ಲಿ ಇರುವವರೆಲ್ಲ,ಪಕ್ಷಕ್ಕೆ ಮೂರು ದಿನಗಳ ಹಿಂದೆ ಬಂದಿರೋರು!

(ಪದ್ಮನಾಭರ ವ್ಯಂಗ್ಯಚಿತ್ರದ ಅಡಿಬರಹ)

----------------------------------------------------------------

123

-------------------------------------------------------------------

ಅಮೆರಿಕಾದ ಕಾಂಗ್ರೆಸ್ ಭಾರತ ಮತ್ತು ಅಮೆರಿಕಾ "ಅಣು" ಸಹಕಾರಕ್ಕೆ ಅನುಮತಿ ನೀಡಿದರೆ,ಭಾರತ ಅಣು ಇಂಧನ ಮತ್ತು ರಿಯಾಕ್ಟರ್ ಸಾಧನಗಳ ಆಮದು ಮಾಡಿಕೊಳ್ಳಲು ಹಾದಿ ಸುಗಮವಾಗುತ್ತದೆ. ಭಾರತ ಕೋಟಿಗಟ್ಟಲೆ ವ್ಯಯಿಸಿ, ರಿಯಾಕ್ಟರುಗಳ ಸ್ಥಾಪನೆ ಮಾಡಿದ ನಂತರ, ಅಮೆರಿಕಾ ಏನಾದರೂ ತಗಾದೆ ತೆಗೆದು ಒಪ್ಪಂದದಿಂದ ಹಿಂದೆ ಸರಿಯದ ಹಾಗೆ ಮುನ್ನೆಚರಿಕೆ ತೆಗೆದುಕೊಳ್ಳುವುದು ಸರಕಾರ ಮುಂದಿರುವ ಸವಾಲು ಎಂದು ಹಿಂದು ಸಂಪಾದಕೀಯ ಬರೆದಿದೆ.

------------------------------------------------------

 

ಬ್ಲಾಗ್

Rating
No votes yet