ಸನ್ಯಾಸಿ

ಸನ್ಯಾಸಿ

ಬರಹ

ಸನ್ಯಾಸಿ
''ಸಂಸಾರಿ ನಾನಾದೇ, ಎನ್ನ ಸನ್ಯಾಸಿ ಆಗಿರಬಾರದಿತ್ತೇ".
ಸಂಸಾರದ ಭಾರವನ್ನು ಹೊತ್ತ, ಗಂಡನಿಗೆ
ಹೆಂಡತಿಯ ಕುಳಿನಗತಿ ಇಲ್ಲದಾಯಿತೇ.
ಹೆಂಡತಿಯು ತನ್ನ ಕರ್ತವ್ಯವನ್ನು, "ಅರಿಯದೇ"
ಗಂಡಂದಿರನ್ನು ದೂರುವದೇತಕೆ.
ಕರ್ತವ್ಯವನ್ನು ಅರಿಯದ ಹೆಂಡತಿಗೆ
ಗಂಡಂದಿರು ಬಾಗುವದೇತಕೆ.
ಕಟ್ಟಿಕೊಂಡ ಹೆಂಡತಿಯು ಗಂಡನಿಗೆ
ಕುತ್ತಿಗೆಗೆ ನೇಣು ಹಾಕಿ ಕೊಂಡಗಾಯಿತೇ.
ಸಂಸಾರದ ಭಾರ ನನಗ್ಯಾತಕೇ,
ಹೆಂಡತಿಯ ಕುಳಿನ ಗತಿಇಲ್ಲದಾಗ
ಬಾಳಿನ್ಯಾಗೇ ಬಿರುಗಾಳಿ ಎಬ್ಬಿಸಿದಾಕೆ,
ಮನೆ ನನಗ್ಯಾಕೆ ಅಂದ ಮೇಲೆ ಸೊರಗಾಡಿದಾಕೆ.
ಸಂಸಾರದ ಭಾರ ಹೊತ್ತ ನನಗೆ ದೂರಿದವಳು
ದೂರಿದ ಮಾತು, ಕೇಳದಾಯ್ತು ನನ್ನಿಂದ.
ನಿನ್ನ ಸೊರಗು ಕೇಳಿ, ಕಿವಿ ರೆಪ್ಪೆ ಹಾರಿ ಹೋಯಿತು,
ಕಿವಿಯ ಕೀವು ಕರಗಿಹೊಯಿತು.
ಸಂಸಾರಿ ನಾನಾದೇ, ಎನ್ನ ಸನ್ಯಾಸಿ ಆಗಿರಬಾರದಿತ್ತೇ.
ಸಂಸಾರಿ ನಾನಾದೇ, ಎನ್ನ ಸನ್ಯಾಸಿ ಆಗಿರಬಾರದಿತ್ತೇ
ಶಾಂತಾ. ಪಿ. ಕೊಲ್ಲೆ.