“ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

“ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ”

[:http://kannada.indiawaterportal.org|ಕನ್ನಡ ವಾಟರ್ ಪೋರ್ಟಲ್ಲಿನಲ್ಲಿ] ಕಾವೇರಿ ಕುರಿತು ಒಂದು ಫೀಚರ್ ರೆಡಿ ಮಾಡುತ್ತ ತಲಕಾಡು ಫೋಟೋಗಳನ್ನು ನೋಡುತ್ತಿರುವಾಗ ಈ ವಿಷಯ ಮತ್ತೆ ನೆನಪಾಯಿತು. ಅಲ್ಲಿ ವಿವರಣೆಗೆಂದು ಇದ್ದ ಈ ವಿಷಯವನ್ನು ನೆನಪಿಸಿದ ಅನುವಾದದ ಸಾಲುಗಳು ಇಲ್ಲಿದೆ ನೋಡಿ:

ತಲಕಾಡು ಮರಳಾದದ್ದೇಕೆ ಎಂಬ ಬಗ್ಗೆ ಸುಂದರವಾದ ಐತಿಹ್ಯವೊಂದಿದೆ. ಏಳನೇ ಶತಮಾನದಲ್ಲಿ ರಂಗಮ್ಮ ಎಂಬ ರಾಣಿಯಿದ್ದಳು. ಮೈಸೂರ ಅರಸರಿಗೂ ಈ ರಾಜ್ಯದವರಿಗೂ ನಡೆದ ಘನ ಘೋರ ಯುದ್ಧದಲ್ಲಿ ಆಕೆಯ ಪತಿ ವೀರ ಸ್ವರ್ಗ ಸೇರಿದ. ಇದರಿಂದ ಮನನೊಂದ ಆಕೆ ತನ್ನ ಸೆರಗಲ್ಲಿ ಮಣ್ಣು ಕಟ್ಟಿಕೊಂಡು, “ಮಾಲಂಗಿ ಮಡುವಾಗಲಿ, ತಲಕಾಡು ಮರಳಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಇರಲಿ” ಎಂದು ಶಪಿಸಿ, ತಾಯಿ ಕಾವೇರಿ ಮಡಿಲಿಗೆ ಧುಮುಕಿದಳಂತೆ. ಇಂದಿಗೂ ಆಕೆಯ ಶಾಪ ಬಾಧಿಸುತ್ತದೆ ಎಂದು ಪ್ರತೀತಿ. ಮೈಸೂರು ಅರಸರಿಗೆ ಇಂದಿಗೂ ನೇರ ಸಂತಾನವಿಲ್ಲ. ಪ್ರತಿ ಬಾರಿ ಉತ್ಖನನ ಮಾಡಿ ಹೊರತೆಗೆದ ಸ್ವಲ್ಪ ದಿನಗಳಿಗೆ ಎಲ್ಲ ದೇವಾಲಯಗಳನ್ನೂ ಮತ್ತೆ ಮರಳು ಆವರಿಸಿಬಿಡುತ್ತದೆ.

ಪುರಾಣ ಕಥೆಗಳಲ್ಲಿ ಇಂತಹ ಹಲವು ಶಾಪ ಕೊಟ್ಟಿರುವ ವ್ಯಾಖ್ಯಾನಗಳನ್ನು ಕೇಳಿರುತ್ತೇವೆ. ಆದರೆ ಸಬೂತಿನ ಸಮೇತ ಇದ್ದಂತಿರುವ ಈ ಶಾಪ ನಿಜವಾಗಲೂ ನಮ್ಮ ನಂಬಿಕೆಗಳನ್ನು ಆಲೋಚನೆಗೆ ಹಚ್ಚಿಸುವಂಥದ್ದು. ಈಗ ತಲಕಾಡು ಮರಳಾಗಿರುವುದು, ಮೈಸೂರು ಅರಸರಿಗೆ ಮಕ್ಕಳಿಲ್ಲದಿರುವುದು ಎಲ್ಲ ಹೊಂದುತ್ತದೆ!

ನಿಮಗೇನನ್ನಿಸುತ್ತದೆ?

(ಇಲ್ಲಿ ರೆಡಿ ಮಾಡುತ್ತಿದ್ದೇನೆ ಎಂದು ತಿಳಿಸಿರುವ ಫೀಚರ್ ನಾಳೆ ನಾಳಿದ್ದರ ಹಾಗೆ ವಾಟರ್ ಪೋರ್ಟಲ್ಲಿನಲ್ಲಿ ಲಭ್ಯವಾಗುವುದು. ಬಹಳ ಒಳ್ಳೆಯ ಫೋಟೋಗಳಿವೆ, ಪೂರಕ ಬರಹವಿದೆ. ನಿರೀಕ್ಷಿಸಿ!)

Rating
Average: 5 (1 vote)

Comments