ಹೂತುಹೋದ ಕಹಿ ಸತ್ಯ...!

ಹೂತುಹೋದ ಕಹಿ ಸತ್ಯ...!

ರಾಜ್ಯದಲ್ಲಿ ಅಷ್ಟೇಕೆ ದೇಶದಲ್ಲೆಲ್ಲಾ ಮತಾಂತರದ್ದೇ ಬಿಸಿ ಬಿಸಿ ಚರ್ಚೆ. ಇದೆಲ್ಲಾ ಚರ್ಚ್‌ ಮೇಲಿನ ದಾಳಿ ಕುರಿತ್ತಾಗಿದೆ. ಹೌದು ಕರಾವಳಿಯಿಂದ ರಾಜಧಾನಿಗೂ ಚರ್ಚ್‌ ಮೇಲೆ ದಾಳಿ ವ್ಯಾಪಿಸಿದೆ ಎನ್ನುವ ವಿಚಾರ ತೀರ ಗಹನವಾದುದಾಗಿದೆ. ಕಳೆದ ಭಾನುವಾರ ಎಲ್ಲಾ ವಿದ್ಯುನ್ಮಾನ ಮಾಧ್ಯಮದ ಪ್ರಮುಖಾಂಶ ಚರ್ಚ್‌ ದಾಳಿಯದ್ದೇ ಆಗಿತ್ತು. ಬೆಳಗ್ಗಿನಿಂದ ಸಂಜೆಯವರೆಗೂ ಹೆಬ್ಬಾಳ ಸಮೀಪದ ಮರಿಯಣ್ಣಪಾಳ್ಯದಲ್ಲಿರುವ "ಸಂತ ಜೇಮ್ಸ್ ಚರ್ಚ್" ಮೇಲಿನ ದಾಳಿ ಕುರಿತ ವಿಚಾರ ಪ್ರಸಾರವಾಯಿತು.

ಹಾಗಾದರೆ ಮರಿಯಣ್ಣಪಾಳ್ಯದ ಚರ್ಚ್‌ ಮೇಲೆ ನಿಜವಾಗಲೂ ಭಜರಂಗದಳ ಅಥವಾ ವಿಹೆಚ್‌ಪಿ ಕಾರ್ಯಕರ್ತರಿಂದ ದಾಳಿ ನಡೆಯಿತ್ತಾ ಎಂಬುದು ಮೂಲ ಪ್ರಶ್ನೆ. ಸ್ವತಃ ಮುಖ್ಯಮಂತ್ರಿ ಹಾಗೂ ನಗರದ ಪೊಲೀಸ್ ಆಯುಕ್ತ ಶಂಕರ ಬಿದರಿ ಕೂಡ ಇದನ್ನು ಕಳ್ಳತನದ ಪ್ರಕರಣವೆಂದೇ ಕರೆದರು. ಇದು ನಿಜಕ್ಕೂ ಕಳ್ಳತನದ ಪ್ರಕರಣವೇ..? ಹೌದು ಎಂಬುದು ಅಲ್ಲಿ ನೆರದಿದ್ದ ಅನೇಕ ಜನರ ಅಭಿಪ್ರಾಯ.

ಆದರೆ ಯಾರೇ ಆದರೂ ಈ ವಿಚಾರವನ್ನು ಮುಕ್ತ ಮನಸ್ಸಿನಿಂದ ತನಗನ್ನಸಿದನ್ನು ಹೇಳಲು ಮಾತ್ರ ಹಿಂಜರಿಯುತ್ತಿದದ್ದು ಖೇದನೀಯ ವಿಚಾರ. ಆ ದಿನ ನಾನು ಕೂಡ ಅದೇ ಚರ್ಚ್‌‌ಗೆ ಹೋಗಿ ನೋಡಿದ್ದೇನೆ. ಯಾಕೆಂದ್ರೆ ಅದು ನಮ್ಮ ಪಕ್ಕದೂರು ಅಲ್ಲದೆ ನಾನು ವಿದ್ಯೆ ಕಲಿತ ಕೇಂದ್ರವೂ ಅದೇ. ಅದರ ಪಕ್ಕದಲ್ಲಿರುವ ಹಳೆಯ ಚರ್ಚ್‌‌ನಲ್ಲಿ ನಾನೂ ಹಲವಾರು ಪೂಜೆಗಳಲ್ಲಿ ಭಾಗವಹಿಸಿದ ಅನುಭವವಿದೆ. ಇರಲಿ...

ಮರಿಯಣ್ಣಪಾಳ್ಯ ಸಂತ ಜೇಮ್ಸ್ ಚರ್ಚ್ ಮೇಲೆ ಖಂಡಿತವಾಗಿ ಯಾವುದೇ ಸಂಘಟನೆಯಿಂದ ದಾಳಿ ನಡೆದಿಲ್ಲ. ಅದು ಕಳ್ಳತನದ ರೂಪವಷ್ಟೆ. ಸಂಘಟನೆಯ ಕಾರ್ಯಕರ್ತನಿಗೆ ಕಿಟಕಿ, ಬಾಗಿಲು ಹಾಗೂ ಮೂರ್ತಿಗಳನ್ನು ಧ್ವಂಸ ಮಾಡುವುದು ಅಥವಾ ಮಂದಿರವನ್ನು ಅಪವಿತ್ರಗೊಳಿಸುವ ಯೋಚನೆ ಇರುತ್ತದೆಯೋ ಹೊರತು ದರೋಡೆಯ ಚಿಂತೆ ಅವರಿಗೆ ಇರುವುದಿಲ್ಲ. ಇಲ್ಲಿ ಹಾರೆ (ಗಡಪಾರಿ)ಯಿಂದ ಚರ್ಚ್‌ನ ಹಿಂಬಾಗಿಲನ್ನು ತೆಗೆಯಲು ಪ್ರಯತ್ನಿಸಿರುವ ಕುರುಹುವಿದೆ. ಅಲ್ಲದೆ ಅಲ್ಲಿಂದ ಒಳ ನುಗ್ಗಿರುವ ಕಳ್ಳರು ಅಲ್ಮಾರಗಳನ್ನು ತೆಗೆಯಲು ಕೂಡ ಮೊಣಚು ಹಾರೆಯನ್ನು ಬಳಸಿದ್ದಾರೆ. ಇದರಿಂದಾಗಿ ಮರದ ಬಾಗಿಲು ಹಾಗೂ ಡ್ರಾಯರ್‌ಗಳು ಇದಕ್ಕೆ ಸಾಕ್ಷಿ. ಜೊತೆಗೆ ದೇಗುಳದಲ್ಲಿರುವ ಹುಂಡಿ ಹೊಡೆಯಲು ಪ್ರಯತ್ನಿಸಿ ಸಫಲರಾಗಿದ್ದಾರೆ. ಜೊತೆಗೆ ದೇವರ ಮೇಲಿನ ೨ ಚಿನ್ನ ಲೇಪಿತ ಕಿರೀಟಗಳು ಸೇರಿದಂತೆ ಕೆಲವು ವಸ್ತುಗಳು ದೋಚಿದ್ದಾರೆ.

ಅದರೆ ಚರ್ಚ್‌‌ನ ಪಾದ್ರಿ ಜೋಸೆಫ್ ಮಿನೆಜಸ್ ಮಾತ್ರ ಇದು ಹಿಂದೂ ಸಂಘಟನೆಯ ಕೈವಾಡ ಅಂತಾರೆ. ಅದಕ್ಕೆ ಅವರು ನೀಡುವ ಸಮರ್ಥನೆ ಇದು. ಕಳ್ಳರು ಏಸುವಿನ ರಕ್ತವೆನ್ನುವ "ಪರಮಪ್ರಸಾದ" ಕೆಳಕ್ಕೆ ಹಾಕಿ ಅವಮಾನ ಮಾಡಿದ್ದಾರೆ. ಇರಲಿ, ಚರ್ಚ್‌ನ ಒಳಗಡೆ ಹೋಗಿ ನೋಡಿದ ಯಾರೇ ಆದರು ಒಂದು ವಿಚಾರ ಗಮನಿಸಿರಬಹುದು. ಅದು ಎನಪ್ಪಾ ಅಂದರೆ ಪರಮಪ್ರಸಾದ ಇಟ್ಟಿರುವ ಸ್ಥಳ. ಇದು ಗೋಡೆಯಲ್ಲಿನ ಕಪಾಟುವಿನಂತೆ ರಚಿಸಿರುವ, ಹೊರಗಡೆಯಿಂದ ಬೀಗಹಾಕಬಹುದಾದ ಸ್ಥಳವಿದೆ. ಹಾಗಾಗಿ ಕಳ್ಳರಿಗೆ ಈ ಕಪಾಟಿನಲ್ಲಿ ಕೂಡ ಏನಾದರು ಸಿಗಬಹುದು ಎಂಬ ಆಸೆ ಹುಟ್ಟಿ, ಆ ಕಪಾಟನ್ನು ತೆಗೆದು ನೋಡಿದ್ದಾರೆ. ಇದರಿಂದಾಗಿ ಪರಮಪ್ರಸಾದ ಹೊರ ಬಿದ್ದಿದೆ. ಜೊತೆಗೆ ಪಾದ್ರಿ ಧರಿಸುವ ಬಟ್ಟೆಗಳನ್ನು ಕಪಾಟುಗಳಿಂದ ಹೊರತೆಗೆಯಲಾಗಿದೆ. ಹಾಗೂ ಕಪಾಟುವಿನಲ್ಲಿದ್ದ ಒಂದು ಮೂರ್ತಿ ಕೂಡ ಕೆಳಕ್ಕೆ ಬಿದ್ದಿದೆ. ಅದುದರಿಂದ ಇದು ಸಂಘಟನೆಯ ಕಾರ್ಯನೇ ಅಂತಾರೆ ಪಾದ್ರಿ ಜೋಸೆಫ್.

ಇದಕ್ಕೂ ಮೊದಲು ಒಂದು ವಿಚಾರ ಗಮನಿಸಬೇಕು. ಸುಮಾರು 70 ವರ್ಷಗಳ ಇತಹಾಸವಿದೆ ಮರಿಯಣ್ಣಪಾಳ್ಯದ ಸಂತ ಜೇಮ್ಸ್ ಚಚ್‌ಗೆ. ಹಾಗಾಗಿ ಅಕ್ಕಪಕ್ಕದ ಗ್ರಾಮಗಳಾದ ದಾಸರಹಳ್ಳಿ, ಕೆಂಪಾಪುರ, ಅಮೃತಹಳ್ಳಿ, ಮೇಸ್ತ್ರಿಪಾಳ್ಯ, ವೀರಣ್ಣಪಾಳ್ಯ, ನಾಗನಹಳ್ಳಿ ಹಾಗೂ ಶ್ರೀರಾಮಪುರದ ಅನೇಕ ಜನರಿಗೆ ವಿದ್ಯಾಭ್ಯಾಸ ನೀಡಿ ಪ್ರೋತ್ಸಾಹಿಸಿದ ಸಂಸ್ಥೆಯಾಗಿದೆ ಸಂತ ಜೇಮ್ಸ್ ವಿದ್ಯಾಕೇಂದ್ರ. ಅಲ್ಲದೆ ಮರಿಯಣ್ಣಪಾಳ್ಯದಲ್ಲಿ ನಡೆಯುವ ಜಾತ್ರೆಗಳಲ್ಲೂ ಸಹಬಾಳ್ವೆಯಂತೆ ಜನರು ಭಾಗವಹಿಸಿ ಪುನೀತರಾಗುತ್ತಾರೆ. ಹಾಗಾಗಿ ಈ ಚರ್ಚ್ ಮೇಲೆ ಯಾವೊಬ್ಬ ಹಿಂದೂವಿಗೂ ತಾತ್ಸಾರ ಭಾವನೆ ಇಲ್ಲ. ಇಂದಿಗೂ ಗೌರವದ ಭಾವನೆ ಇಲ್ಲಿನ ಜನತೆಗೆಯಿದೆ.

ಆದರೆ ಇದುವರೆಗೂ ಮರಿಯಣ್ಣಪಾಳ್ಯದ ಈ ಕ್ಯಾಥೋಲಿಕ್ ಚರ್ಚ್ ಯಾವುದೇ ಮತಾಂತರಕ್ಕೆ ಮುಂದಾಗಲಿಲ್ಲ ಎಂದು ಘಂಟಾಘೋಷವಾಗಿ ಹೇಳಬಲ್ಲೆ. ನಾನು ಕೂಡ ಅದೇ ಶಾಲೆಯ ವಿದ್ಯಾರ್ಥಿ. ಅಲ್ಲದೆ ನಮ್ಮ ಮನೆತನವೂ ಕೂಡ ಈ ಚರ್ಚ್‌ನೊಂದಿಗೆ ಜೀವ ಸೆಳೆಗಳನ್ನು ಬೆಸೆದು ಕೊಂಡಿದೆ.

ಕಳೆದ ಎರಡು ವರ್ಷಗಳ ಹಿಂದೆಯಷ್ಟೆ ಕ್ಷುಲ್ಲಕ ಕಾರಣಕ್ಕಾಗಿ ಮರಿಯಣ್ಣಪಾಳ್ಯದಲ್ಲಿ ಗಲಾಟೆ ಸಂಬವಿಸಿತ್ತು. ಪ್ರಜಾವಾಣಿಯಲ್ಲೂ ಅದು ಪ್ರಕಟವಾಗಿತ್ತು. ಅದೂ ದಾಸರಹಳ್ಳಿ ಗ್ರಾಮ ಪಂಚಾಯಿತಿ ಜನ ಸಂಪರ್ಕ ಸಭೆಯಲ್ಲಿ. ಇಂದು ಕಾವೇರಿ ಬಡಾವಣೆ, ಸಂತ ಅಂತೋಣಿ ಬಡಾವಣೆ ಅಥವಾ ಕಲ್ವಾರಿ ಬೆಟ್ಟ ಎಂದು ಕರೆಯುವ ಪ್ರದೇಶಕ್ಕೆ ಹೆಸರಿಡುವ ವಿಚಾರದಲ್ಲಿ. ಈ ಎರಡು ಹೆಸರುಳ್ಳ ಬಡಾವಣೆಯ ಜಮೀನು ಸುಮಾರು 17 ವರ್ಷಗಳ ಹಿಂದೆ ಮರಿಯಣ್ಣಪಾಳ್ಯದ ಜನರೇ ಅನುಭವಿಸುತ್ತಿದ್ದರು. ಮಾರಾಟವಾದ ಭೂಮಿ ಬಡಾವಣೆಯ ರೂಪಾಂತರವಾಗಿ ಬಾಲಾಜಿನಗರ ಎಂದಾಯಿತು. ಕ್ರಮೇಣ ಐಶ್ವರ್ಯ ಲೇಔಟ್, ಕಾವೇರಿ ಲೇಔಟ್ ಆಯಿತು. (ಇಂದಿಗೂ ಇಲ್ಲಿನ ಸೈಟಿನ ರಿಜಿಸ್ಟ್ರಿಷನ್ ಇದೇ ಹೆಸರಲ್ಲಿದೆ ಎನ್ನಲಾಗಿದೆ)

ದಾಸರಹಳ್ಳಿ ಪಂಚಾಯಿತಿ ಅಧಿಕೃತವಾಗಿ ಈ ಪ್ರದೇಶಕ್ಕೆ ಹೆಸರಿಡುವ ಸಮಯದಲ್ಲಿ ಅಪಸ್ವರ ತಲೆದೋರಿತು. ಅಲ್ಲೇ ಹುಟ್ಟಿದ್ದು ಮೂಲ ಕಾರಣ.

ನಂತರ ಇದರಿಂದ ರೊಚ್ಚಿಗೆದ್ದ ಈ ಬಡಾವಣೆಯ ಹಿಂದೂಗಳು ಕಾವೇರಿ ಬಡಾವಣೆ ಎಂದು ನಾಮಕರಣ ಮಾಡಿದರು. ಅದಕ್ಕೆ ವಿರುದ್ದವಾಗಿ ಸಂತ ಅಂತೋಣಿ ಬಡಾವಣೆ ಎಂದು ಕ್ರಿಶ್ಚಿಯನ್ನರು ನಾಮಕರಣ ಮಾಡಿದರು. (ವಾಸ್ರವವಾಗಿ ಈ ಪ್ರದೇಶದಲ್ಲಿ ಕ್ರಿಶ್ಚಿಯನ್ನರೇ ಇಲ್ಲ) ಆಗ ಅಲ್ಲಿ ಸ್ಥಳೀಯ ಮುಖಂಡನಾದ ಕೊಡಗು ಮೂಲದ ಚಿಟ್ಟಿಯಪ್ಪ, ಕಾವೇರಿ ಬಡಾವಣೆ ಎಂದೇ ಗೋಡೆಗಳ ಮೇಲೆ ಬರಹಗಳನ್ನು ಬರೆಸಿದನು. ಆಗ ಅವನಿಗೆ ಸಹಾಯಕ್ಕೆ ನಿಂತವರೆ ಆರ್‌ಎಸ್‌ಎಸ್ ಕಾರ್ಯಕರ್ತರು. ಇದರಿಂದಾಗಿ ನಿರೀಕ್ಷೆಯಂತೆ ಜಯಶೀಲನಾದನು ಚಿಟ್ಟಿಯಪ್ಪ. ಮತ್ತೆ ಕೆಲ ದಿನಗಳ ನಂತರ ಮರಿಯಣ್ಣಪಾಳ್ಯದ ಜನತೆ ಕಾವೇರಿ ಬಡಾವಣೆ ಎಂಬ ಬರಹದ ಮೇಲೆ ಸಂತ ಅಂತೋಣಿ ಬಡಾವಣೆ ಎಂದು ನಮೂದಿಸಲಾರಂಭಿಸಿದರು. ಮತ್ತೊಮ್ಮೆ ಚಿಟ್ಟಿಯಪ್ಪ ಇದೇ ಸಂಘಟನೆಯ ಸಹಾಯದಿಂದ ಕಾವೇರಿ ಬಡಾವಣೆ ಎಂದು ಬದಲಾಯಿಸಿದನು. ಈ ವಿಚಾರದಲ್ಲಿ ಗಲಾಟೆಯು ಕೂಡ ಆಯಿತು. ಚಿಟ್ಟಿಯಪ್ಪನ ಕೈ ಮೇಲಾಯಿತು. ಬಳಿಕ ಈ ಸಮಸ್ಯೆ ತಾತ್ಕಾಲಿಕ ಶಮನವಾಯಿತು.

ಈ ಸಮಯದಲ್ಲೇ ಚಿಟ್ಟಿಯಪ್ಪ ಹಾಗೂ ಅವನ ಕೆಲವು ಬೆಂಬಲಿಗರು ಸಮೀಪದ ಆರ್‌ಎಸ್‌ಎಸ್ ಸಂಘಟನೆಗೆ ಸೇರ್ಪಡೆಯಾದರು. ಇದೀಗ ಈ ಸಂಘಟನೆ ಚುರುಕಾಗಿದೆ. ಆದರೆ ಚರ್ಚ್ ಕಳ್ಳತನ ನಡೆಯುವ 14 ನೇ ತಾರೀಖಿನಂದು ಶಾಖೆಯ ಕಾರ್ಯಕರ್ತರು ಮರಿಯಣ್ಣಪಾಳ್ಯ ರಸ್ತೆಯೂ ಸೇರಿದಂತೆ ಅನೇಕ ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದ್ದಾರೆ.

ಈ ಪಥ ಸಂಚಲನ ಕಣ್ಮಂದೆ ಇದ್ದಾಗಲೇ ಚರ್ಚ್ ಪ್ರಕರಣ ನಡೆದು ಹೋಯಿತು. ಹಾಗಾಗಿ ಮರಿಯಣ್ಣಪಾಳ್ಯದ ಜನತೆಗೆ ತಕ್ಷಣ ನೆನಪಾಗಿದ್ದು ಮಂಗಳೂರು ಚರ್ಚ್ ಮೇಲಿನ ದಾಳಿಗೂ ನಮ್ಮ ಚರ್ಚ್ ಮೇಲಿನ ದಾಳಿಗೂ ಇದೇ ಕಾರಣ ಎಂಬುದು. ಇದರ ಪರಿಣಾಮವೇ ಮರಿಯಣ್ಣಪಾಳ್ಯ ಕಳೆದ 21 ರ ಭಾನುವಾರದ ಘಟನೆಗೆ ಸಾಕ್ಷಿಯಾಯಿತು.

ದುರಾದೃಷ್ಟವೆಂದರೆ ಅಂದು ಬೆಳಿಗ್ಗೆ ಶಂಕಿತರೆನ್ನಲಾದ ಚಿಟ್ಟಿಯಪ್ಪ ಸೇರಿದಂತೆ 7 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂದು ಸಂಜೆ ವೇಳೆಗೆ ಚಿಟ್ಟಿಯಪ್ಪ ಕುಟುಂಬ ಮನೆಯಲ್ಲಿಲ್ಲದ್ದಾಗ ಕೆಲ ಕಿಡಿಗೇಡಿಗಳು ಮನೆಯ ಕಿಟಕಿ ಬಾಗಿಲುಗಳ ಗಾಜುಗಳನ್ನು ಧ್ವಂಸ ಮಾಡಿದ್ದಾರೆ.

ಒಟ್ಟಿನಲ್ಲಿ ಈ ವಿಚಾರ ಆರ್‌ಎಸ್‌ಎಸ್ ಸಂಘಟನೆ ಈ ಭಾಗದಲ್ಲಿ ಖ್ಯಾತಿ ಹಾಗೂ ಪ್ರಬಲವಾಗಲು ಕಾರಣವಾಯಿತು.

ಆದರೆ ಯಾವುದೇ ಮನಸ್ತಾಪವಿಲ್ಲದೆ ಸಹಬಾಳ್ವೆಯಿಂದ ವಿದ್ಯಾರ್ಜನೆ ನಡೆಸುತ್ತಿದ್ದ ಸಂತ ಜೇಮ್ಸ್ ಶಾಲೆಗೂ ಕಳಂಕವಾಯಿತೆನ್ನಬಹುದು. ಜೊತೆಗೆ ಸಾಮಾನ್ಯವಾಗಿ ಧರ್ಮಗಳ ಸಂಯಮದಲ್ಲಿದ್ದ ವಿದ್ಯಾರ್ಥಿಗಳಲ್ಲೂ ಈ ಘಟನೆ ಕೆಟ್ಟ ಪರಿಣಾಮ ಬೀರಿರುವುದು ದುರದೃಷ್ಟಕರ.

ಪ್ರಚಲಿತ

- ಬಾಲರಾಜ್ ಡಿ.ಕೆ

Rating
No votes yet

Comments