ವಯಸ್ಸು ಪತ್ತೆ ಹಚ್ಚುವ ಮಾಂತ್ರಿಕ ಕಂಪ್ಯೂಟರ್

ವಯಸ್ಸು ಪತ್ತೆ ಹಚ್ಚುವ ಮಾಂತ್ರಿಕ ಕಂಪ್ಯೂಟರ್

ಬರಹ

ವಯಸ್ಸು ಪತ್ತೆ ಹಚ್ಚುವ ಮಾಂತ್ರಿಕ ಕಂಪ್ಯೂಟರ್ ಬರಲಿದೆಯಂತೆ, ಹೀಗೊಂದು ಸುದ್ದಿ ಇಂದಿನ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದಿದೆ. ’ಇಲಿನಾಯ್ಸ್’ ಪ್ರಾಂತ್ಯದ ’ಥಾಮಸ್ ಎಸ್. ಹುವಾಂಗ್’ ಎಂಬುವವರು ವಯಸ್ಸು ಪತ್ತೆ ಹಚ್ಚುವ ಮಾಂತ್ರಿಕ ಕಂಪ್ಯೂಟರ್ ಸಾಪ್ಟವೇರ್ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರಂತೆ, ಇದರಿಂದ ಅನೇಕ ಪ್ರಯೋಜನವಾಗಲಿದೆ. ಮಹಿಳೆಯರೇ ಹುಷಾರ್! ಎಂಬ ವಾಕ್ಯವನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಕೊಡಲಾಗಿದೆ. ಈ ಮಾಂತ್ರಿಕ ಕಂಪ್ಯೂಟರ್ ಮುಂದೆ ನಿಮ್ಮ ಮುಖವನ್ನು ಹಿಡಿದರೆ ಸಾಕು ಅದು ನಿಖರವಾಗಿ ನಿಮ್ಮ ವಯಸ್ಸನ್ನು ತಿಳಿಸುತ್ತದೆಯಂತೆ, ಈ ತಂತ್ರಜ್ಞಾನಕ್ಕೂ ಸಿಗದಂತೆ ಮಹಿಳೆಯರೂ ಪ್ಲಾಸ್ಟಿಕ್ ಸರ್ಜರಿಯಂಥ ಚಿಕಿತ್ಸೆ ಮೂಲಕ ತಮ್ಮ ಮುಖವನ್ನು ಬದಲಿಸಿಕೊಂಡರೆ ಏನು ಮಾಡುತ್ತಾರೆ. ಈ ವಯಸ್ಸು ಪತ್ತೆ ಹಚ್ಚುವ ತಂತ್ರಜ್ಞಾನದ ಮೂಲಕ ಕಿರಿಯ ವಯಸ್ಸಿನವರೂ ಬಾರ್, ವೆಬ್ ಕೆಫೆಯಂಥಹ ಪ್ರದೇಶಗಳಿಗೆ ಪ್ರವೇಶಿಸುವುದನ್ನು, ತಂಬಾಕು ಸೇವನೆ ತಡೆಯಲು ಈ ತಂತ್ರಜ್ಞಾನ ಸೃಷ್ಟಿಯ ಪ್ರಯತ್ನವಂತೆ. ಇದರ ಬದಲೂ ಕೆಲವರೂ ಮನೆಯಲ್ಲೆ ಬಾರ್, ವೆಬ್ ಸೌಲಭ್ಯವಂದಿದರೆ ಏನೂ ಮಾಡಲಾಗದು ಅಲ್ವ