ಮೊದಲ ವಾರ್ಷಿಕೋತ್ಸವದ ಸಂಭ್ರಮದಲ್ಲಿ ’ಕಸ್ತೂರಿ’

ಮೊದಲ ವಾರ್ಷಿಕೋತ್ಸವದ ಸಂಭ್ರಮದಲ್ಲಿ ’ಕಸ್ತೂರಿ’

ಕನ್ನಡ ನೆಲದಲ್ಲಿ ಕನ್ನಡಿಗರೇ ಆರಂಭಿಸಿದ ಪ್ರಪ್ರಥಮ ವಾಹಿನಿ ’ಕಸ್ತೂರಿ’. ಮನರಂಜನೆ ಹಾಗೂ ಮಾಹಿತಿಗೆ ಒತ್ತು ಕೊಟ್ಟ ಕಸ್ತೂರಿ ಪ್ರಸಾರ ಆರಂಭಿಸಿದ ಅಲ್ಪ ಆವಧಿಯಲ್ಲಿ ಕನ್ನಡಿಗರ ಮನ ಗೆದ್ದಿದೆ. ಪ್ರಚಲಿತದಲ್ಲಿರುವ ಅನೇಕ ವಾಹಿನಿಗಳಿಗಿಂತ ಪ್ರಸಾರವನ್ನು ಕಸ್ತೂರಿ ಗಟ್ಟಿ ಗೊಳಿಸಿದೆ.
ವ್ಯೆವಿಧ್ಯಮಯ ಕಾರ್ಯಕ್ರಮಗಳಿಂದ ಜನರ ಮನಸ್ಸಿಗೆ ಹತ್ತಿರವಾದ ಕಸ್ತೂರಿ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಾ ಯಶಸ್ಸಿನತ್ತ ದಾಪುಗಾಲು ಹಾಕುತ್ತಿದೆ. ಮನರಂಜನೆಯೇ ಪ್ರಮುಖ ಉದ್ದೇಶವಾದರೂ ಜನತೆಗೆ ನಿಖರ ಮಾಹಿತಿ ನೀಡುತ್ತಿರುವುದು ಕಸ್ತೂರಿಯ ಹೆಜ್ಜೆ ಗುರುತು. ಇದಕ್ಕೆ ಹಿನ್ನೋಟವಾಗಿ ಅದು ನಡೆಸಿದ ಅನೇಕ ಜನಪ್ರಿಯ ನಟರು, ಕಲಾವಿದರು, ಸಾಮಾಜಿಕ ಮನ್ನಣೆ ಪಡೆದ ಚಿಂತಕರು ನಡೆಸಿಕೊಟ್ಟ ಕಾರ್ಯಕ್ರಮಗಳೇ ಉದಾಹರಣೆಯಾಗಿ ನಿಲ್ಲುತ್ತವೆ.
ಕಸ್ತೂರಿ ವಾಹಿನಿಯು ೨೦೦೭ರ ಚಲನಚಿತ್ರಗಳಿಗೆ ಮಾರ್ಚ್ ತಿಂಗಳಿನಲ್ಲಿ ’ಸಿನಿಗಂಧ’ ಚಲನಚಿತ್ರ ಪ್ರಶಸ್ತಿಯನ್ನು ಆದ್ದೂರಿ ಸಮಾರಂಭದಲ್ಲಿ ಪ್ರದಾನ ಮಾಡುವುದರ ಮುಖಾಂತರ ಚಲನಚಿತ್ರ ರಂಗದಲ್ಲಿ ಒಂದು ಸಂಚಲನೆಯನ್ನೇ ಉಂಟು ಮಾಡಿತೆನ್ನಬಹುದು.
ವೀಕ್ಷಕರು ಮತ್ತೆ ಮತ್ತೆ ಬಯಸುವ ಅನೇಕ ಮನರಂಜನೆಗಳಿಗೆ ಕಸ್ತೂರಿ ವೇದಿಕೆಯಾಗಿದೆ. ಸಂಗೀತದ ಮೂಲಕ ಪ್ರಚಲಿತ ವಿಚಾರಗಳ ಮೂಲಕ ಜನರಿಗೆ ಬೇಕಾದ ಮಾಹಿತಿಗಳನ್ನು ನಿಖರ ಕಾರ್ಯಕ್ರಮಗಳ ಮೂಲಕ ನೀಡುತ್ತಾ ಬರುತ್ತಿದೆ. ಚಲನಚಿತ್ರದಂತಹ ಪ್ರಭಾವಿ ಮಾಧ್ಯಮಕ್ಕೆ ವಿಶೇಷ ಒತ್ತು ನೀಡಿ ಈ ಕ್ಷೇತ್ರದ ಬೆಳವಣಿಗೆಗೆ ಒತ್ತು ಕೊಟ್ಟಿದೆ. ಹೀಗಾಗಿ ಜನಪ್ರಿಯ ನಟ-ನಟಿಯರ ನೇರ ಪ್ರಸಾರದ ಕಾರ್ಯಕ್ರಮಗಳು, ಹೊಸ ಚಿತ್ರಗಳ ಪ್ರಚಾರಕ್ಕಾಗಿ ನೀಡಿದ ಒತ್ತು ಈ ಸಂದರ್ಭದಲ್ಲಿ ಮಹತ್ವದ್ದು.
ಪ್ರತಿದಿನ ಮುಂಜಾನೆ ಪ್ರಸಾರವಾಗುವ ವಚನಗಳ ಬಗ್ಗೆ ವ್ಯಾಖ್ಯಾನಿಸುವ ಮತ್ತು ಹಾಡುಗಳ ಕಾರ್ಯಕ್ರಮವಾದ ವಚನಾಂಜಲಿ, ಧಾರ್ಮಿಕ ಚಿಂತನೆಗಳನ್ನೊಳಗೊಂಡ ದೈವಬಲ,ಈ ತರಹದ ಧನಾತ್ಮಕ ಅಲೋಚನೆಯಿಂದ ತನ್ನ ಪ್ರಸಾರ ಕಾರ್ಯವನ್ನು ಪ್ರಾರಂಭಿಸುವ ಕಸ್ತೂರಿ, ಜನರಿಗೆ ಅದಷ್ಟೂ ಇಷ್ಟವಾಗುವ ಕಾರ್ಯಕ್ರಮಗಳನ್ನು ಕೊಡಲು ಪ್ರಯತ್ನಿಸುತ್ತಿದೆ.ಪ್ರತಿ ಗಂಟೆಗೊಮ್ಮೆ ಪ್ರಸಾರವಾಗುವ ಕಸ್ತೂರಿ ಈವರೆವಿಗೂ ಮತ್ತು ದಿನದಲ್ಲಿ ಮೂರು ಸಾರಿ ಪ್ರಸಾರವಾಗುವ ವಾರ್ತೆಗಳು ಕಸ್ತೂರಿಯ ಹೈಲೆಟ್ಸ್ ಎಂದರೆ ತಪ್ಪಾಗಲಾರದು.
ಆಧುನಿಕ ಚಿಂತನೆಗಳನ್ನು ಒಳಗೊಂಡ ಮಹಿಳೆಯರ ಆಸಕ್ತಿಯ ಎಲ್ಲಾ ಮಜಲುಗಳನ್ನು ಒಳಗೊಂಡ ಮಹಿಳೆಯರಿಗಾಗಿಯೇ ಮಹಿಳಾ ಸಾಧಕರ ಮಾಲಿಕೆಯೇ ’ಜೀವನ್ಮುಖಿ’ ಕಾರ್ಯಕ್ರಮ. ಜೊತೆಗೆ ಜನಸಾಮಾನ್ಯರ ಬೌದ್ದಿಕ, ಮಾನಸಿಕ ಅಭಿವೃದ್ದಿಗೆ, ಜನರಲ್ಲಿ ಜಾಗೃತಿಯನ್ನು ಮೂಡಿಸುವ ’ಜಾಗೃತಿ’ ಯಾಗಲೀ, ದಿನವೂ ಪ್ರಸಾರವಾಗುವ ಅಂತರ್ಯ, ಸಹಗಮನ, ಮಣ್ಣಿನಋಣ, ಮಹಾಯಾನ, ಕಸ್ತೂರಿ, ನೀ ನೆಡೆವ ಹಾದಿಯಲಿ, ಕಲ್ಲು ಸಕ್ಕರೆ, ಮುಂಬೆಳಗು, ಪಾಯಿಂಟ್ ಪರಿಮಳ , ಧಾರಾವಾಹಿಗಳು ನಿತ್ಯವೂ ಕನ್ನಡಿಗರ ಮನ ಮನೆ ತಲುಪುತ್ತಿವೆ.
ನಟ ರಮೇಶ್ ನಡೆಸಿಕೊಡುತ್ತಿರುವ ’ಪ್ರೀತಿಯಿಂದ ರಮೇಶ್’ಕಲಾವಿದರ ಮುಖಾಮುಖಿಯ ಮಹತ್ವದ ಕಾರ್ಯಕ್ರಮ, ಹಾಸ್ಯಮಿಶ್ರಿತ ಗಂಭೀರ ಚಿಂತನೆಯ ಪ್ರಶ್ನೆಗಳು ಈ ಕಾರ್ಯಕ್ರಮದ ಪ್ರಮುಖ ಅಂಶವಾಗಿದೆ.ಶ್ರೀಮತಿ ಸುಧಾ ಬರಗೂರವರು ನಡೆಸಿಕೊಡುತ್ತಿರುವ ’ಜಾಣರಜಗಲಿ’ ಕಾರ್ಯಕ್ರಮದ ಮೂಲಕ ಪ್ರಚಲಿತ ಹಾಗೂ ಸಾಮಾಜಿಕ ಚಿಂತನೆಗಳನ್ನು ಸಾರ್ವಜನಿಕರೆದುರು ತೆರೆದಿಡುವ ಜಾಣ ಜಾಣೆಯರ ಕಾರ್ಯಕ್ರಮವಾಗಿದ್ದು ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಇದರ ಚಿತ್ರೀಕರಣ ನಡೆದಿದೆ.ಜನಪ್ರಿಯ ನಟ ಶ್ರೀನಾಥ್ ಮತ್ತು ಶೈಲಜಾ ಜೋಡಿಯು ದಂಪತಿಗಳಿಗಾಗಿ ನಡೆಸಿಕೊಡುತ್ತಿರುವ ’ಜನುಮದ ಜೋಡಿ’ ಕಾರ್ಯಕ್ರಮವು ಅತ್ಯಂತ ಯಶಸ್ವಿ ಕಾರ್ಯಕ್ರಮವಾಗಿದೆ.
ವೀಕ್ಷಕರು ಸಿನಿಮಾ ಮಂದಿಯ ಕುಟುಂಬದ ಜೊತೆ ನೇರವಾಗಿ ಮಾತನಾಡಲು ಮತ್ತು ಸಿನಿಮಾ ಮಂದಿಯ ಲೋಕಾಭಿರಾಮದ ಮಾತುಕತೆಗಳನ್ನು ವಾಹಿನಿಯ ನೇರ ಪ್ರಸಾರದ ಕಾರ್ಯಕ್ರಮವಾದ ’ಫಿಲ್ಮಿ ಸಂಸಾರ’ಮತ್ತು ಸಿನಿಮಾ ಮಂದಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಇರುವಂತಹ ’ಪಾಪ್ ಕಾರ್ನ್ ಶೋ’ ದಂತಹ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿವೆ.
ನೆನಪಿನಾಳದಿಂದ ಮರೆಯಾಗದ ಮಧುರಗೀತೆಗಳ ಕಾರ್ಯಕ್ರಮ ’ಬೆಳ್ಳಿಚುಕ್ಕಿ’ ಚಿತ್ರನಿರ್ದೇಶಕ, ಗೀತೆರಚನೆಕಾರ,ಸಂಗೀತ ನಿರ್ದೇಶಕ, ನಟ-ನಟಿಯರ ವೈಯಕ್ತಿಕ ಬದುಕಿನ ಪರಿಚಯವೂ ಈ ಕಾರ್ಯಕ್ರಮದ ಉದ್ದೇಶ.
ಖ್ಯಾತ ಗೀತೆ ರಚನೆಕಾರರು ತಾವು ಗೀತೆ ರಚಿಸಿದ ಸಂದರ್ಭ, ಹಿನ್ನೆಲೆ, ವಿವರಿಸುವ ವಿಶಿಷ್ಟವಾದ ಸಂದರ್ಶನ ಕಾರ್ಯಕ್ರಮವೇ ’ಕಾವ್ಯಧಾರೆ’. ಅ ಸಂದರ್ಭದಲ್ಲಿ ರಚಿಸಿದ ಹಾಡುಗಳನ್ನು ಇದರಲ್ಲಿ ವೀಕ್ಷಕರಿಗಾಗಿ ಪ್ರಸಾರ ಮಾಡಲಾಗುತ್ತದೆ.
ಮಕ್ಕಳಲ್ಲಿ ಹುದುಗಿರುವ ಸುಪ್ತ ಗಾಯನ ಪ್ರತಿಭೆಯನ್ನು ವೇದಿಕೆ ಮೇಲೆ ಪ್ರಸುತ್ತಪಡಿಸುವ ಕಾರ್ಯಕ್ರಮ ’ಸಪ್ತಸ್ವರ-೨’, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳಿಗೆ ಗುರುಕುಲ ಪದ್ದತಿಯಲ್ಲಿ ಸಂಗೀತಾಭ್ಯಾಸವನ್ನು ಮಾಡಿಸುವುದು ಈ ಕಾರ್ಯಕ್ರಮದ ವೈಶಿಷ್ಟ.
ಮನೆಯಲ್ಲಿಯೇ ಟಿ.ವಿ. ನೋಡುತ್ತಾ ಭರತನಾಟ್ಯ ಮತ್ತು ಪಾಶ್ಚಿಮಾತ್ಯ ನೃತ್ಯವನ್ನು ಅಭ್ಯಾಸ ಮಾಡುವ ಕಾರ್ಯಕ್ರಮವಾದ ’ಹೆಜ್ಜೆ ಮೇಲೆ ಹೆಜ್ಜೆ’, ಮನೆಯಲ್ಲಿಯೇ ಕುಳಿತು ಟಿ.ವಿ.ನೋಡುತ್ತಾ ವಿವಿಧ ಸಂಗೀತಾ ವಾದ್ಯಗಳನ್ನು ಕಲಿಯುವ ಕಾರ್ಯಕ್ರಮವಾದ ’ಮ್ಯೂಸಿಕ್ ಥಿಯರಿ’, ಮತ್ತು ಒಂದು ಚಿತ್ರದ ಚಿತ್ರನಿರ್ದೇಶಕ, ಗೀತೆರಚನೆಕಾರ,ಸಂಗೀತ ನಿರ್ದೇಶಕ, ನಟ-ನಟಿಯರು,ನೃತ್ಯ ನಿರ್ದೇಶಕರು ಒಂದೇ ವೇದಿಕೆಯಲ್ಲಿ ಒಟ್ಟಾಗಿ ಸೇರಿ ಜನಪ್ರಿಯವಾದ ಹಾಡುಗಳ ಬಗ್ಗೆ ಸವಿನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮ ’ಕು-ಕ್ಕು-ಕ್ಕೂ-ಕೋಗಿಲೆ’, ಯಂತಹ ವಿಭಿನ್ನ ಪರಿಕಲ್ಪನೆಯ ಕಾರ್ಯಕ್ರಮಗಳಾಗಲೀ,ಮನುಷ್ಯನ ಬೌದ್ದಿಕ ಚಾಕಚಕ್ಯತೆಯನ್ನು ಓರೆಗೆ ಹಚ್ಚುವ ವಿಭಿನ್ನ ಕಾರ್ಯಕ್ರಮವಾದ ಲೈಫ್ ಬೊಂಬಾಟ್, ವಿರಹ ಹಾಗೂ ನೋವಿನ ಸುಮಧುರ ಗೀತೆಗಳ ಸಂಮಿಶ್ರಣವಾದ ’ಗಾನ ಸ್ಮರಣೆ’ಯಾಗಲಿ, ಮನುಷ್ಯನ ಭವಿಷ್ಯ ಮತ್ತು ಬದುಕಿನ ಸುತ್ತಾ ನೇಯ್ದ ಕಾರ್ಯಕ್ರಮ ’ಬ್ರಹ್ಮಾಂಡ’ವಾಗಲಿ , ಭವಿಷ್ಯದ ಬಗ್ಗೆ ವೀಕ್ಷಕರು ಕೇಳುವ ಪ್ರಶ್ನೆಗಳಿಗೆ ನೇರ ಸಂವಾದದ ಮೂಲಕ ಶ್ರೀ ನರೇಂದ್ರಬಾಬು ಶರ್ಮ ರವರು ಉತ್ತರಿಸಲಿದ್ದಾರೆ. ಮನುಷ್ಯನ ನಂಬಿಕೆ ಸುತ್ತಾ ಹೆಣೆದ ಒಂದು ವಿಶಿಷ್ಟವಾದ ವಿಸ್ಮಯ ಮತ್ತು ಆಗೋಚರವಾದ ವಿಷಯಗಳನ್ನು ಜನತೆಗೆ ವಾಸ್ತವ ತಿಳಿಸುತ್ತಲೇ ಕೌತುಕದ ದೃಶ್ಯಗಳನ್ನು ಸೆರೆಹಿಡಿಯುವ ಜನಪ್ರಿಯ ಕಾರ್ಯಕ್ರಮವೇ ’ಆಗೋಚರ’.
ಹಿಂದೆ ಪ್ರಸಾರವಾಗುತ್ತಿದ್ದ ನಿಸರ್ಗ ಚಿಕಿತ್ಸೆ,ಮತ್ತು ಮಕ್ಕಳಿಗೆಂದೇ ಮೀಸಲಾದ ಕಾಮನ ಬಿಲ್ಲು, ತರ್‍ಲೆ, ಇಂಗ್ಲೀಷಾ ಇಟ್ಸ್ ಈಸಿ, ಮಹಿಳೆಯರಿಗಾಗಿ ಪ್ರಸಾರವಾಗುತ್ತಿದ್ದ ಆಡುಗೆ ಆಕ್ಷಯ, ಮತ್ತು ಊರು ಟೂರು, ಕೃಷಿ ಕಸ್ತೂರಿಯಂತಹ ರೈತರಿಗೆ ನೆರವಾಗುವಂತಹ ಕಾರ್ಯಕ್ರಮಗಳು ಜನಮನಸೂರೆಗೊಂಡಂತಹ ಈ ತರಹದ ವೈವಿಧ್ಯಮಯ ಕಾರ್ಯಕ್ರಮಗಳ ಅಗರವಾಗಿದೆ ಕಸ್ತೂರಿ.
ಇಷ್ಟೆಲ್ಲಾ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕನ್ನಡಿಗರಿಗೆ ನೀಡುತ್ತಾ ಕನ್ನಡಿಗರ ಮನದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಕನ್ನಡಿಗರ ಹೆಮ್ಮೆಯ ಪ್ರತೀಕವಾದ ಕಸ್ತೂರಿ ವಾಹಿನಿಯು ಇದೇ ಸೆಪ್ಟಂಬರ್ ೨೬ಕ್ಕೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿ ವೀಕ್ಷಕರಿಗೆ ಮುಂಬರುವ ದಿನಗಳಲ್ಲಿಇನ್ನೂಹೆಚ್ಚಿನ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವ ಭರವಸೆಯೊಂದಿಗೆ ತನ್ನ ಮುಂದಿನ ಪಯಣದ ಈ ಸಂದರ್ಭದಲ್ಲಿ ಶುಭ ಹಾರೈಸುತ್ತೇವೆ.

Rating
No votes yet