" ಮೆಹೆಂದಿ ಅಂದ್ರೆ ಅದೇನು ಇಷ್ಟಾನೊ ನಿಂಗೆ, ಅಲ್ವಾ ಪುಟ್ಬಂಗಾರ " !

" ಮೆಹೆಂದಿ ಅಂದ್ರೆ ಅದೇನು ಇಷ್ಟಾನೊ ನಿಂಗೆ, ಅಲ್ವಾ ಪುಟ್ಬಂಗಾರ " !

ಬರಹ

ಮೆಹೆಂದಿ ಅಂದ್ರಾಗೋಯ್ತು. ಎಲ್ಲಿದ್ರು ನಮ್ ಹೆಣ್ಮಕ್ಳೆಲ್ಲಾ ಆ ಸಮಯದಲ್ಲಿ ಒಟ್ಗೆ ಸೇರೇ ಸೇರ್ತಾರೆ, ನೋಡಿ. ನಮ್ಮಲೇನೂ ಆಷ್ಟೆ ; ನಿಮ್ಮನೇಲೂ ಕೂಡ. ಅದೇನು ಖುಷಿ ಸಿಗತ್ತೋ ಅದ್ರಲ್ಲಿ. ರಾತ್ರಿಯೆಲ್ಲಾ ಕೈಗಳನ್ನ ಹಾಗೇ ದಿಂಬಿನಪಕ್ಕದಲ್ಲಿ ಇಟ್ಕೊಂಡ್ ಮಲಿಕ್ಕೋ ಬೇಕು. ಅವರ್ನ್ ಕೇಳಿ, ಅದನ್ನೆಲ್ಲಾ ಸಹಿಸೋಕೆ ಅವ್ರು ಸದಾ ಸಿದ್ಧ ! ಇದು ದೊಡ್ಡೋರ್ ಕತೆ ಆದ್ರೆ, ಚಿಕ್ಕೋರ್ ಏನ್ ಕಮ್ಮಿ ಅಂತೀರಾ ?

ಚಿತ್ರದಲ್ಲಿರೋ ಪುಟ್ಟಮರಿಗೆ ಅವರಮ್ಮ ಪಕ್ಕದಲ್ಲಿ ಕೂಡ್ಸ್ಕೊಂಡು ತರಹ ತರಹ ಕತೆಗಳ್ನೆಲ್ಲಾ ಹೇಳಿ ಬಣ್ಣದ ಪೆನ್ಸಿಲ್ (ಕೋನ್) ನಲ್ಲಿ ಸರಿಯಾಗಿ ಅವಳ ಪುಟಾಣಿ-ಕೈ ಅಳತೆಗೆ ಸರಿಯಾಗಿ ಪುಟ್ಟ-ಪುಟ್ಟ ಹೂಗಳು, ಎಲೆಗಳ ಚಿತ್ರಗಳನ್ನು ಹಾಕಬೇಕು. ಒಬ್ಬರ ಕೈನಲಿದ್ದ ತರಹ ಇನ್ನೊಬ್ಬರಿಗೆ ಆಗಲ್ಲ. ಎಲ್ಲರಿಗೂ ತಮ್ಮ-ತಮ್ಮಲ್ಲಿನ ವೈವಿಧ್ಯತೆಗಳನ್ನು ಕಾಪಾಡಿಕೊಂಡು ಬರುವ ಪರಿಪಾಠವಿದೆ. ಇದಕ್ಕೆ ಬರೆದಿಟ್ಟ ನಿಯಮಗಳೇನಿಲ್ಲ.

ಒಟ್ಟಿನಲ್ಲಿ ಪ್ರತಿಯೊಬ್ಬರೂ ಭಿನ್ನ. ಅವರ ಖಯಾಲಿಗಳು, ಆದ್ಯತೆಗಳು ಭಿನ್ನವಲ್ಲವೇ ? ಅದು ಚಿಕ್ಕವಯಸ್ಸಿನಲ್ಲೇ ಗರಿಗೆದರಿ, ಮುಂದೆ ಹೆಮ್ಮರವಾಗಿ ಬೆಳೆದು, ತಮ್ಮಲ್ಲಿ ವಿಶೇಷ ವ್ಯಕ್ತಿತ್ವಗಳನ್ನು ರೂಪಿಸಿ-ರೂಢಿಸಿಕೊಳ್ಳುವಲ್ಲಿ ನೆರವಾಗುವುದಕ್ಕೆ ಈ ಸಂದರ್ಭ ನಾಂದಿ ಹಾಗಿಕೊಡುವುದೇನೋ ಗೊತ್ತಿಲ್ಲ. ನನಗಂತೂ ಅವರ ಮುಖಗಳಮೇಲೆ ಕಾಣಿಸುವ ಮಿಂಚು, ಆಸಕ್ತಿ, ಆನಂದ, ಎಕ್ಸೈಟ್ಮೆಂಟ್ ಗಳನ್ನು ನೋಡಿದಾಗ ಆಗುವ ಮುದ, ಅವರ್ಣನೀಯ ! ನಂಗೊತ್ತು ನಿಮಗೂ ಅಷ್ಟೆ. ಹೌದೋ ಅಲ್ವೋ, ನಿಜ ಹೇಳಿ ? ಈ ವಿಷಯಗಳಲ್ಲಿ ನಾವೆಲ್ಲ ರಸಿಕವೃಂದಕ್ಕೆ ಸೇರುತ್ತೇವೆ !

-ಚಿತ್ರನಾನು ತೆಗೆದದ್ದಲ್ಲ. ಮನೆಯ ಆಲ್ಬಮ್ ನಿಂದ ಎರವಲು ಪಡೆದಿದ್ದೇನೆ.