LTTE ಭಯೋತ್ಪಾದಕ ಸಂಘಟನೆಯಲ್ಲವೇ?

LTTE ಭಯೋತ್ಪಾದಕ ಸಂಘಟನೆಯಲ್ಲವೇ?

ಬರಹ

ಇಂದಿನ ದಿ ಹಿಂದು ತೆರೆದಾಗ ಕಾಣಿಸಿದ ಮೊದಲ ಸುದ್ದಿ - ತಮಿಳುನಾಡಿನ ಎಲ್ಲ ಸಂಸದರ ರಾಜೀನಾಮೆಯ ಬೆದರಿಕೆ. ಅವರ ಬೇಡಿಕೆ ನೋಡಿ- "ಶ್ರೀಲಂಕಾದಲ್ಲಿ ನಡೆಯುತ್ತಿರುವ ತಮಿಳರ ಮೇಲಿನ ಹಲ್ಲೆ, ದೌರ್ಜನ್ಯಗಳನ್ನು ಭಾರತದ ಕೇಂದ್ರ ಸರ್ಕಾರ ನಿಯಂತ್ರಿಸಿ, ಕಡಿಮೆಗೊಳಿಸಬೇಕಂತೆ!!!". ಈ ರೀತಿಯ ಒಂದು ಠರಾವನ್ನು ಬೇರೆ ಅಂಗೀಕರಿಸಲಾಗಿದೆ!!! ಇಲ್ಲಿ ಗಮನಿಸಬೇಕಾದ ಅನೇಕ ಅಂಶಗಳಿವೆ.

ಮೊದಲನೆಯದಾಗಿ, ಇತರರನ್ನು ನಿಯಂತ್ರಿಸುವ ಮನೋಭಾವ. ಇಲ್ಲಿಯವರೆಗೋ ಯಾವುದೇ ದೇಶವನ್ನು, ಇನ್ನೊಂದು ದೇಶ ನಿಯಂತ್ರಿಸುವದನ್ನು ನಾವು ಯಾವಗಲೂ ವಿರೋಧಿಸಿದ್ದೇವೆ. ನಮ್ಮನ್ನು ಬ್ರಿಟೀಷರು ನಿಯಂತ್ರಿಸಿದಾಗ ನಾವು ಪಟ್ಟ ಪಾಡು ನಮಗೆ ಮರೆತು ಹೋಯ್ತೆ?

LTTE ಎಷ್ಟೇ ಅದ್ರೂ ಒಂದು ಉಗ್ರ ಸಂಘಟನೆ. ಅದು ತಮಿಳರ ಹಕ್ಕಿಗಾಗಿ ಹೋರಾಡದೆ, ಶ್ರೀಲಂಕೇಯ ವಿಭಜನೆಗೆ ಪ್ರಯತ್ನಿಸುತ್ತಿರುವುದನ್ನು ನಾವು ಗಮನಿಸಲೇಬೇಕು. ಅಮೇರಿಕೆಯಲ್ಲಿ ಕಪ್ಪು ವರ್ಣೀಯರು ತಮ್ಮ ಹಕ್ಕುಗಳಿಗೆ ಹೋರಾಡಿದರೇ ಹೊರತು, ಅಮೇರಿಕೆಯನ್ನು ಒಡೆಯಲಿಲ್ಲ. (ಈ ಒಂದು ವಿಷಯದಲ್ಲಿ ನಾವು ಅಮೇರಿಕೆಯನ್ನು ಅನುಕರಿಸಬೇಕು). ಯಾವುದೇ ದೇಶವನ್ನು ಒಡೆದಾಗ ಆಗುವ ಆಘಾತಗಳ ಪರಿವು ನಮಗೆ ಇಲ್ಲದೇ ಇಲ್ಲ. ಭಾರತ ಮತ್ತು ಪಾಕಿಸ್ತಾನಗಳ ವಿಭಜನೆಗಿಂತ ಇದಕ್ಕೆ ಬೇರೆ ಸಾಕ್ಷಿ ಬೇಕೆ? ಲಕ್ಷಾಂತರ ಜನ ಸತ್ತರು, ಅನೇಕರು ತಮ್ಮ ತಂದೆ-ತಾಯಂದಿರನ್ನು, ಗಂಡ-ಹೆಂಡಂದಿರನ್ನು, ಪ್ರಿಯಕರ-ಪ್ರೇಯಸಿಯರನ್ನು, ಮಕ್ಕಳನ್ನು ಕಳೆದುಕೊಂಡರು. ಅದರ ಪರಿಣಾಮಗಳನ್ನು ನಾವಿನ್ನೂ ಉಣ್ಣುತ್ತಿದ್ದೇವೆ. ಈಗಿನ LTTE ಒಂದು ರೀತಿಯಲ್ಲಿ ಜಿನ್ನಾರಂತೆ ವರ್ತಿಸುತ್ತಿರುವುದನ್ನು ನಾವು ಗಮನಿಸಲೇಬೇಕು. ಇಂಥ ಹೋರಾಟದಿಂದ ಏನಾದರೂ ಒಂದು ತಮಿಳು ರಾಷ್ಟ್ರ ಹುಟ್ಟಿದರೆ, ಅದು ಎರಡೂ ದೇಶಗಳ ಭವಿಷ್ಯಕ್ಕೂ ಒಳ್ಳೆಯದಲ್ಲ.

ಮೂರನೇಯದಾಗಿ, ಇದು ಶ್ರೀಲಂಕಾದ ಆಂತರಿಕ ವಿಷಯ. ಭಾರತದ ಜಮ್ಮು-ಕಾಶ್ಮೀರಗಳ ವಿಷಯ ಹೇಗೋ ಹಾಗೆ. ಜಗತ್ತಿನ ಯಾವುದೇ ದೇಶ ಹುರಿಯತ್ತಿಗೆ ಹುರಿದುಂಬಿಸಿದರೆ ನಾವು ಸಹಿಸಿಯೇವೇ? ನಾವು ಹುರಿಯತ್ತಿನ ಹೋರಾಟವನ್ನು ಸೆದೆಬಡಿಯಲು ಪ್ರಯತ್ನಿಸುತ್ತಿಲ್ಲವೇ? ಅಲ್ಲಿರುವ ಹಿಂಸಾವಾದಿಗಳನ್ನು ನಾವು ಆತಂಕವಾದಿಗಳು-ಉಗ್ರಗಾಮಿಗಳು ಎನ್ನುತ್ತಿಲ್ಲವೇ? ಹಾಗೆಂದಮೇಲೆ, ಸಿಂಹಳದ ಬಗ್ಗೆ ನಮಗೆ Double Standard ಯಾಕೆ? ಜಾತಿ-ಜನಾಂಗಗಳು ದೇಶೀಯ ಭಾವನೆಗಳನ್ನು ಇಲ್ಲವಾಗಿಸಿದರೆ, ಅದು ಯಾವ ರೀತಿಯ ದೇಶಭ್ಹಕ್ತಿ? ಇದು ದೇಶದ್ರೋಹವಲ್ಲವೇ? ಯುರೋಪಿನ ದೇಶಗಳು ಇಲ್ಲಿ ನಡೆದಿರುವ ಚರ್ಚ್ ಮೇಲಿನ ಹಲ್ಲೆಗಳನ್ನು ಖಂಡಿಸಿರುವುದು ತಪ್ಪೆನಿಸಿದ ನಮಗೆ, ಈ ರೀತಿಯ ಅಸಹ್ಯಕರ ಹೇಳಿಕೆ ಕೊಡಲು ಹೇಗೆ ಸಾಧ್ಯ?