ಡಾ| ಕೆ.ಎಸ್. ಆಚಾರ್ಯರ ಮಹಾಭಾರತದ ಭೀಷ್ಮ.

ಡಾ| ಕೆ.ಎಸ್. ಆಚಾರ್ಯರ ಮಹಾಭಾರತದ ಭೀಷ್ಮ.

ಬರಹ

ಭೀಷ್ಮನ ಪಾತ್ರ ವಿಶ್ಲೇಷಣೆಯಿಂದ ಉನ್ನತಿಕೆಯನ್ನು ಹೆಚ್ಚಿಸುವ ಆತನ ತ್ಯಾಗ, ನಿಃಸ್ಪೃಹತ್ವ, ಕ್ಷತ್ರಿಯನಾಗಿಯೂ ಆಚಾರ್ಯನಾದವನ ಪದವಿಗಳನ್ನೆಲ್ಲಾ ಸುಂದರವಾಗಿ ವಿವೇಚಿಸುತ್ತ ಭೀಷ್ಮ ಎಡಹಿದ ತಾಣಗಳನ್ನು,ಎಸಗಿದ ತಪ್ಪುಗಳನ್ನು, ಅದಕ್ಕಾಗಿ ಆತ ಪರಿತಪಿಸಿ ಪಶ್ಚಾತಾಪಭಾವವನ್ನು ವ್ಯಕ್ತಪಡಿಸುವುದನ್ನು ಮನಕರಗುವಂತೆ ಆಚಾರ್ಯರು ಚಿತ್ರಿಸಿರುವರು. ವ್ಯಾಸರ ಪಾತ್ರ ಸೃಷ್ಟಿಯ ವೈಶಿಷ್ಟವೇ ಇದು- ಎಂತಹ ಆದರ್ಶ, ಉನ್ನತ ವಾತ್ರವಿದ್ದರೂ ಅದರ ಹಿಂದೆ ನೆಳಲಾಗಿ ಬರುವ ಮಾನವೀಯ ದೌರ್ಬಲ್ಯಗಳಿಂದ ಅದನ್ನು ಹೆಚ್ಚು ವಾಸ್ತವಪೂರ್ಣ, ಜೀವಂತ ಎನಿಸುವಂತೆ ಚಿತ್ರಿಸುವುದು.
"ಧರ್ಮವನ್ನು ಧರ್ಮಮಾರ್ಗದಿಂದಲೇ ಸಾಧಿಸಬೇಕೆಂಬ ಬೃಹಸ್ಪತಿ ನೀತಿಯನ್ನು ಅರಿತ ಅಂದಿನ ಮೂವರು ಮಹಾನ್ ವ್ಯಕ್ತಿಗಳಲ್ಲಿ (ಭೀಷ್ಮ, ವಿಧುರ ಮತ್ತು ಉದ್ಧವ) ಇಬ್ಬರು ಕುರುಕುಲ ರಕ್ಷಣೆಯನ್ನು ಹೊತ್ತವರೇ ಆಗಿದ್ದರೆಂದು ನೆನಪಿಸುತ್ತಾರೆ" ಆಚಾರ್ಯರು. "ಧರ್ಮವನ್ನು ಕೆಲವೊಮ್ಮೆ ಅಧರ್ಮಮಾರ್ಗದಿಂದಲಾದರೂ ಸಾಧಿಸಬಹುದೆಂಬ ಶುಕ್ರನೀತಿಯನ್ನು ಭೀಷ್ಮನು ಅಭ್ಯಸಿಸಿದ್ದುಂಟಂತೆ. "ಧರ್ಮವೊ, ಅಧರ್ಮವೊ ಅರಸನು ತನಗೆ ಬೇಕಾದುದನ್ನು ಯಾವ ದಾರಿಯಿಂದಲಾದರೂ ಸಾಧಿಸಬಹುದೆಂಬ" ಶಕುನಿ. ಕಣಿಕರ ನೀತಿ ಮಾತ್ರ ಇಂದು ಪ್ರಸ್ತುತ!

ಇನ್ನೂ ಇದೆ.........