ಪ್ರವಾಹ: ನಲುಗಿದ ಬದುಕು... ಮಂಕಾದ ಅರಿವಿನ ಮುಗಿಲು

ಪ್ರವಾಹ: ನಲುಗಿದ ಬದುಕು... ಮಂಕಾದ ಅರಿವಿನ ಮುಗಿಲು

ಬರಹ

ಪ್ರವಾಹಗಳು ಬಂದು ಹೋದವು, ಜನಜೀವನ ನಲುಗಿತು. ಮಾಧ್ಯಮಗಳು ಅದನ್ನು ವರದಿ ಮಾಡಿದವು. ಅಲ್ಲಿಗೆ ಮುಗಿಯಿತು! ಇನ್ನು ಮುಂದಿನ ವರ್ಷ ಪ್ರವಾಹದ ಸಮಯದಲ್ಲಿ ಮತ್ತೆ ಮಾಧ್ಯಮವೂ ಚುರುಕು, ಕೋಟಿಗಟ್ಟಲೆ ಅನುದಾನದ ಸುದ್ದಿ, ಪ್ರಾಣ ಹಾನಿಯ ಸುದ್ದಿ ಮತ್ತೆಲ್ಲ. ಪ್ರವಾಹ ಸಮಯ - ಪ್ರಾಣ ಹಾನಿಯಾದ ಸಮಯ ಮಾತ್ರ ಚುರುಕಾಗಿ ಮುಂದಿನ ವರ್ಷ ಹೀಗಾಗದಂತೆ ನೋಡಿಕೊಳ್ಳಲು ಬೇಕಾದ ಕ್ರಮಗಳ ಕುರಿತು ಆಲೋಚಿಸದೆ, ಚರ್ಚೆ ಮಾಡದೆ complacent ಆಗಿಬಿಡುತ್ತಿದ್ದೇವೆಯೆ?
ಈ ಕುರಿತು ಚಿಂತನೆಗಳನ್ನೊಳಗೊಂಡ ಹರ್ಷವರ್ಧನರ ಬರಹ ಇಗೋ ನಿಮ್ಮ ಮುಂದೆ:

Orissa floods

 

ವಾರ್ಷಿಕ ಸರಾಸರಿ ೩೦೦೦ ಮಿಲಿ ಮೀಟರ್ ಮಳೆ ಬೀಳುವ, ೪೪ ನದಿಗಳನ್ನು ಹೊಂದಿರುವ ಕೇರಳ ಇಂದು ಕುಡಿಯುವ ನೀರಿನ ಸಮಸ್ಯೆಯಿಂದ ತೀವ್ರವಾಗಿ ತಲ್ಲಣಿಸುತ್ತಿದೆ. ಕಳೆದ ಚುನಾವಣೆಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದೇ ಎಲ್ಲ ರಾಜಕೀಯ ಪಕ್ಷಗಳ ಪ್ರಣಾಳಿಕೆಯ ಮೊದಲ ಭರವಸೆ ಆಗಿತ್ತು. ಚುನಾವಣೆಯ ಸಂದರ್ಭದಲ್ಲಿ ೧೦,೦೦೦ ಕ್ಕೂ ಹೆಚ್ಚು ನೀರಿನ ಟ್ಯಾಂಕರ್ ಗಳನ್ನು ಕೇರಳದ ಉದ್ದಗಲಕ್ಕೆ ಹರಿದಾಡಿಸಿ ನೀರು ಹಂಚಿದ್ದರು ಮುಂಚೂಣಿ ನಾಯಕರು. ಹಾಗೆಯೇ ೨೦೦೭-೦೮ನೇ ಸಾಲಿನಲ್ಲಿ ಮಳೆಯ ಕೊರತೆಯಿಂದಾಗಿ ೨೮೪೪ ಕೋಟಿ ರೂಪಾಯಿಗಳಷ್ಟು ಕೇರಳ ರಾಜ್ಯ ನಷ್ಟ ಅನುಭವಿಸಿರುವುದಾಗಿ ಅಂದಾಜು ಮಾಡಲಾಗಿತ್ತು. ಇದು ಜಮ್ಮು ಕಾಶ್ಮೀರ ರಾಜ್ಯದ ೧ ವರ್ಷದ ಆಯವ್ಯಯ ಮೊತ್ತಕ್ಕೆ ಸಮ!

ಮುಂದೆ ಓದಿ »