ಶಿರಾಡ್ಡಿ ಘ್ಹಾಟ್ ಎಂಬ ನರಕದ ಹಾದಿ.

ಶಿರಾಡ್ಡಿ ಘ್ಹಾಟ್ ಎಂಬ ನರಕದ ಹಾದಿ.

ಮೊನ್ನೆ ಗೆಳೆಯರೊಂದಿಗೆ ಧರ್ಮಸ್ಥಳಕ್ಕೆ ಶಿರಾಡಿ ಮಾರ್ಗದಲ್ಲಿ ಹೋಗಿದ್ದೆ. ಸರಕಾರದ ಹೇತ್ಲಾಂಡಿತನಕ್ಕೆ ಉದಾಹರಣೆಯಂತಿದೆ ಅಲ್ಲಿನ ರಸ್ತೆ. ಟಾರ್ ಹಾಳಾಗೆ ಹೋಗ್ಲಿ ರಸ್ತೇನೆ ಇಲ್ಲದಿದ್ದ್ರೆ ಹೆಂಗ್ರಿ ಪ್ರಯಾಣ ಮಾಡೋದು. ರಾಷ್ಟ್ರದ ಪ್ರಮುಖ ಹೆದ್ದಾರಿಗಳಲ್ಲಿ ಅದು ಒಂದು. ಪ್ರತಿ ನಿತ್ಯ ಸಾವಿರರು ವಾಹನಗಳು ಆ ಮಾರ್ಗವಾಗಿ ಚಲಿಸುತ್ತೆ. ಎರಡುಮೂರು ಅಡಿಗಳಿಗಿಂತಲು ಹೆಚ್ಚಿನ ಆಳದ ಗುಂಡಿಗಳು, ರಸ್ತೆ ತುಂಬ ಕಲ್ಲುಗಳ ರಾಶಿ, ಜೀವ ಕೈಯಲ್ಲಿ ಹಿಡಿದು ಪ್ರಯಣಿಸ ಬೇಕಾದ ಪರಿಸ್ಥಿತಿ ಅಲ್ಲಿದೆ. ಆ ಮಾರ್ಗದ ಜನಪ್ರತಿನಿಧಿಗಳಿಗಾಗಲಿ, ಮಂತ್ರಿಗಳಿಗಾಗಲಿ, ಬಹುಷಃ ಕಣ್ಣುಗಳೆ ಇಲ್ಲ ಅನ್ನಿಸುತ್ತೆ. ಇಂತ ಅಂಧರ ಕೈಗೆ ಸರ್ಕಾರ ಕೋಟ್ಟಿರೋದಕ್ಕೆ ನಮಗೆ ನಾವೆ ಶಾಪ ಹಾಕ್ಕೊ ಬೇಕಾಗಿದೆ. ಮೊನ್ನೆ ತಾನೆ ೪೮ ಕೋಟಿ ಖರ್ಚು ಮಾಡಿ ರಸ್ತೆ ರಿಪೇರಿ ಮಾಡ್ಸಿದ್ದೀವಿಂತ ಪತ್ರಿಕೆಗಳ ಮುಂದೆ ಬಡಾಯಿ ಕೊಚ್ಚಿಕೊಂಡ, ಕೇಂದ್ರ ಸಾರಿಗೆ ಮಂತ್ರಿನ, ಆ ಧರ್ಮಾಸ್ಥಳದ ಮಂಜುನಾಥ ಇನ್ನು ಯಾಕ್ ಅಧಿಕಾರದಲ್ಲಿ ಕೊರಿಸಿದ್ದಾನೊ? ಈ ಜನಕ್ಕೆ ಸ್ವಲ್ಪಾನು ನಾಚಿಕೆನೆ ಇಲ್ಲ ಅನ್ನಿಸುತ್ತೆ. ಒಂದು ನೊರು ಯಂತ್ರಗಳನ್ನ, ಸಾವಿರಾರು ಕಾರ್ಮಿಕರನ್ನ ಕರಕೊಂಡು ಬಂದು ಕೆಲಸ್ ಮಾಡ್ಸಿದ್ರೆ, ಒಂದು ವಾರದಲ್ಲಿ ಹಾಳಾಗಿರೊ ರಸ್ತೆನ ಸರಿ ಮಾಡಬಹುದು, ಕಡೆಪಕ್ಷ ಆ ಗುಂಡಿಗಳನ್ನಾದರು ಮುಚ್ಚಿಸ ಬಹುದು. ಇದ್ಯಾವುದು ಮಾಡದೆ ಇಲ್ಲದ ನೆಪ ಹೇಳ್ಕೊಂಡು ಒಡಾಡ್ತಿರೊ ರಾಜಕಾರಣಿಗಳಿಗೆ, ಯಾವ ರೀತಿ ಶಾಪ ಹಾಕಬೇಕೊ ಗೊತ್ತಾಗ್ತಿಲ್ಲ. ದಯಮಾಡಿ ಆ ಭಾಗದ ಕಡೆ ಪ್ರಯಾಣಿಸೋರಿಗೆ ಒಂದು ಸೊಚನೆ. ನಿಮ್ಮ ಜೀವವಿಮೆಯ ಮೊತ್ತ ಹೆಚ್ಚಿಸ್ಕೊಂಡು ಆ ಮೇಲೆ ಪ್ರಯಾಣ ಮಾಡಿ, ಯಾಕಂದ್ರೆ ಜೀವಂತ ವಾಪಸ್ಸ್ ಬರ್ತಿವಂತ ಬಂದ ಮೇಲೆನೆ ಗೊತ್ತಾಗೊದು.

Rating
No votes yet