ಹುಬ್ಬಳ್ಳಿಯಲ್ಲಿ "ನೀರ ನಿಶ್ಚಿಂತೆ"

ಹುಬ್ಬಳ್ಳಿಯಲ್ಲಿ "ನೀರ ನಿಶ್ಚಿಂತೆ"

ಹುಬ್ಬಳ್ಳಿಯಲ್ಲಿ ಈ ಭಾನುವಾರ "ನೀರ ನಿಶ್ಚಿಂತೆ!" ಕಾರ್ಯಕ್ರಮ. ಈಗಿನಂತೆ ಇರುವ ನೀರಿನ ಸೆಲೆಗಳನ್ನು ಹೇಗೆ ಚೆನ್ನಾಗಿ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ವಿಸ್ತೃತ ಚರ್ಚೆ.

ಕಾರ್ಯಕ್ರಮದ ವಿವರ ಕೆಳಗಿನಂತಿದೆ:

(ಕಾರ್ಯಕ್ರಮಕ್ಕೆ ಮುನ್ನುಡಿ)
ಮೊದಲನೆಯ ಅವಧಿ: ಕಾರ್ಯಕ್ರಮಕ್ಕೊಂದು ಮುನ್ನುಡಿ, (ಸುಮಾರು ೨೦ ನಿಮಿಷ)
ಎರಡನೆಯ ಅವಧಿ: ಸ್ಥಳೀಯ ಸಮುದಾಯದ ಪರಿಚಯ, ಸ್ಥಳೀಯ ಸಮಸ್ಯೆಗಳತ್ತ ಒಂದು ನೋಟ.
(ಸುಮಾರು ೩೦ ನಿಮಿಷ, ೧೫ ನಿಮಿಷ - ಪ್ರಶ್ನೋತ್ತರ)


(ಸಮುದಾಯ)
ಮೂರನೆಯ ಅವಧಿ: ಆನ್ಲೈನ್ ಸಮುದಾಯದ ಪರಿಚಯ ಹಾಗು ಅದರಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ.
ನಾಲ್ಕನೆಯ ಅವಧಿ: ಕಂಪ್ಯೂಟರಿನಲ್ಲಿ ಕನ್ನಡ ಬಳಸಿ ನೀರ ಸಮಸ್ಯೆಗಳು ಮತ್ತದರ ಪರಿಹಾರಗಳ ಕುರಿತು ಬರೆದು ಅರಿವು ಮೂಡಿಸುವುದರ ಬಗ್ಗೆ ಒಂದು ಪುಟ್ಟ ದೃಶ್ಯಾವಳಿ.

ವಿರಾಮ

(ದೃಶ್ಯಾವಳಿ)
ಐದನೆಯ ಅವಧಿ: "ಕಾಲಿ ಬೇಯ್ನ್" (ಸಾಕ್ಷ್ಯಚಿತ್ರ)
ಮರುಪೂರಣ ಕುರಿತ ದೃಶ್ಯಾವಳಿ

(ಚರ್ಚೆ)
ಆರನೆಯ ಅವಧಿ: ಚರ್ಚೆ.

ಎಲ್ಲರಿಗೂ ಮುಕ್ತ ಆಹ್ವಾನವುಂಟು.

ಸ್ಥಳ:

IMCR, Hubli

ಸಮಯ:

ಬೆಳಿಗ್ಗೆ ಒಂಬತ್ತು ಗಂಟೆ. (26th, October, 2008. 9 AM)

ಹೆಚ್ಚಿನ ಮಾಹಿತಿಗಾಗಿ: kannada@indiawaterportal.org ಗೆ ಒಂದು ಮೇಯ್ಲ್ ಹಾಕಿ.