ಆಯ್ದ ಸಂಸ್ಕೃತ ಸುಭಾಷಿತಗಳು (31-33)
೩೧.
ಸಮಾರಂಭದಲ್ಲಿ , ದು:ಖದಲ್ಲಿ , ಬರಗಾಲದಲ್ಲಿ , ರಾಜಕೀಯ ಗೊಂದಲದ ಸಮಯದಲ್ಲಿ , ರಾಜನ ಸನ್ನಿಧಿಯಲ್ಲಿ , ಸಾವಿನ ಸಮಯ ಸ್ಮಶಾನದಲ್ಲಿ ಜತೆಯಾಗಿ ಇರುವವನೇ ನಿಜವಾದ ಬಂಧು.
ಮೂಲ :-
ಉತ್ಸವೇ ವ್ಯಸನೇ ಚೈವ ದುರ್ಭಿಕ್ಷೇ ರಾಷ್ಟ್ರ ವಿಪ್ಲವೇ
ರಾಜದ್ವಾರೇ ಸ್ಮಶಾನೇ ಚ ಯಸ್ತಿಷ್ಠತಿ ಸ ಬಾಂಧವ:
೩೨. ಮನೆತನದ ಏಳಿಗೆಗಾಗಿ ಒಬ್ಬ ವ್ಯಕ್ತಿಯನ್ನು ಬಿಡಬೇಕಾಗಿ ಬಂದರೆ ಬಿಡಬೇಕು , ಊರಿಗಾಗಿ ಕುಲವನ್ನು ಬಿಡಬೇಕು , ದೇಶಕ್ಕಾಗಿ ಊರನ್ನು ಬಿಡಬೇಕು , ತನ್ನ ಆತ್ಮಕ್ಕೋಸ್ಕರ ಜಗತ್ತನ್ನೇ ತ್ಯಜಿಸಬೇಕು.
ಮೂಲ:-
ತ್ಯಜೇದೇಕಂ ಕುಲಸ್ಯಾರ್ಥೇ , ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್
ಗ್ರಾಮಂ ಜನಪದಸ್ಯಾರ್ಥೇ , ಸ್ವಾತ್ಮಾರ್ಥೇ ಪೃಥಿವೀಂ ತ್ಯಜೇತ್ ||
೩೩.
ದೇಶದ ಜನರ ಮನಸ್ಸನ್ನು ಶ್ರೀಮಂತನ ಆಸ್ತಿಯನ್ನು , ದುಷ್ಟಜನರ ಮನಸ್ಸಿನ ಆಸೆಗಳನ್ನು , ಸ್ತ್ರೀಯರ ನಡತೆಯನ್ನು ಪುರುಷನ ಅದೃಷ್ಟವನ್ನು ದೇವತೆಗಳೂ ತಿಳಿಯದೇ ಇರುವಾಗ ಹುಲು ಮಾನವರು ಹೇಗೆ ಬಲ್ಲರು ?
ಮೂಲ:-
ರಾಷ್ಟ್ರಸ್ಯ ಚಿತ್ತಂ ಧನಿಕಸ್ಯ ವಿತ್ತಂ ಮನೋರಥಂ ದುರ್ಜನಮಾನುಷಾಣಾಂ
ಸ್ತ್ರೀಯಶ್ಚರಿತ್ರಂ ಪುರುಷಸ್ಯ ಭಾಗ್ಯಂ ದೇವೋ ನ ಜಾನಾತಿ ಕುತೋ ಮನುಷ್ಯ: ||