ಜೀವನ-ಉಪಜೀವನ

ಜೀವನ-ಉಪಜೀವನ

ಅನುಭವಿಗಳ ಪ್ರಕಾರ ಮತ್ತು ಮುಖ್ಯವಾಗಿ ನಮ್ಮ ಹಿಂದೂ ಪದ್ಧತಿಯ ಪ್ರಕಾರ ಮನುಶ್ಯ ಜನ್ಮ ಬರುವುದು ಹಲವಾರು ಬೇರೆ ದೇಹರೂಪದ ಜೀವಗಳನ್ನು ಪಡೆದುಕೊಂಡಮೇಲಂತೆ ಮತ್ತು ಒಂದು ಜನ್ಮಕ್ಕೂ ಇನ್ನೊಂದು ಜನ್ಮಕ್ಕೂ ಬಹಳ ವರ್ಷಗಳಷ್ಟು (ಕೆಲವು ಪುರಾಣಗಳ ವರ್ಣನೆಗಳ ಆಧಾರದಮೇಲೆ ಕೆಲವು ಲಕ್ಷ್ವ ವರ್ಷಗಳೂ ಆಗಬಹುದು) ಅಂತರವಿರಬಹುದಂತೆ. ಹಾಗಾಗಿ ಈ ಮನುಶ್ಯ ಜೀವನದ ಸಾಧನೆಗಳು ಮುಂದಿನ ಜೀವನವನ್ನು ನಿರ್ಧರಿಸುತ್ತದಂತೆ. ಕೆಲವರು ಇದನ್ನು ೩ ಘಂಟೆಯ ಪರೀಕ್ಷಾಸಮಯವನ್ನಾಗಿ ಹೋಲಿಸುವುದೂ ಉಂಟು. ಈ ಸಮಯದಲ್ಲಿ ನಮ್ಮ ನಡವಳಿಕೆ-ಸಾಧನೆ ಗಳೇ ಮುಂದಿನ ಆಗು ಹೋಗುಗಳ ದಿಕ್ಸೂಚಿ. ಇನ್ನು ಮನಸ್ಸು ಮತ್ತು ಆತ್ಮವನ್ನು ಸಂತೋಶಪಡಿಸಬೇಕಾದರೆ ಆಗಬೇಕಾದದು ಜ್ಞಾನ ಸಾಕ್ಷಾತ್ಕಾರ ಮತ್ತು ಆತ್ಮದ ಅನಾವರಣ. ಜ್ಞಾನ ಗಳಿಸಿದಷ್ಟೂ ಆತ್ಮ-ಮನಸ್ಸುಗಳು ಮುದಗೊಳ್ಳುವಷ್ಟು ಇನ್ನ್ಯಾವುದೂ ಕೊಡಲಾರವು. ಅದಕ್ಕಾಗಿಯೇ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಅಕ್ಷ್ರರಾಭ್ಯಾಸ ಶಾಸ್ತ್ರದ ಮೂಲಕ ಶುರು ಮಾಡಿಸುತ್ತಾರೆ ಮತ್ತು ಅಲ್ಲಿ ಜ್ಞಾನ ಗಳಿಸು ಎಂದು ಹರಸುತ್ತಾರೆಯೇ ವಿನ್ಃ ಹಣ ಗಳಿಸು, ರಾಜ್ಯ ಗಳಿಸು ಎಂದು ಹೇಳುವುದಿಲ್ಲ.
ಹಾಗಾಗಿ ನಮ್ಮಲ್ಲಿ ಹೊಟ್ಟೆ-ಬಟ್ಟೆ ಗಳಿಕೆಗಳ ಬಗ್ಗೆ ಉಲ್ಲೇಖಗಳು-ಚಿಂತನೆಗಳು ಕಮ್ಮಿ. ಅದಕ್ಕಿಂತ ಮೇಲ್ಮಟ್ಟದ ಚಿಂತನೆಗಳಿಗೇ ಹೆಚ್ಚು ಒತ್ತು. ಹಾಗಾಗಿ ಜೀವನ ಚಕ್ರದ ಚಿಂತನೆ ಮತ್ತು ಜ್ಞಾನದ ಮೂಲಕ ಪೂರ್ಣಾನಂದ ಪಡೆಯಲು ಮಾಡುವ ಸಾಧನೆ-ಚಿಂತನೆಗಳು ಜೀವನವಾಗಿ ಅಂತಹ ಜೀವನಕ್ಕೆ ಆಧಾರವಾಗುವ ವೃತ್ತಿಮಾಡುವುದು ಕೇವಲ ಉಪ-ಜೀವನ ವಾಗಬೇಕು.

Rating
No votes yet