ಸಂಡೇ ಜಾಮ್

ಸಂಡೇ ಜಾಮ್

ಎಲ್ಲರಿಗೂ ನಮಸ್ಕಾರ.
ಮರ ಸಂಸ್ಥೆಯು ಗುರು ಸ್ಕೂಲ್ ಜೊತೆಗೂಡಿ ಪ್ರತಿ ತಿಂಗಳ ಮೊದಲನೇ ಬಾನುವಾರದಂದು ನೆಲಮಂಗಲದಲ್ಲಿ ಸಂಡೇ ಜಾಮ್ ನಡೆಸುತ್ತಿದೆ. ಇದರ ಉದ್ದೇಶ ಏನಂದರೆ ಪ್ರತಿಯೊಬ್ಬರಲ್ಲಿ ಇರುವ ಕಲೆಯನ್ನು ಹೊರ ತರುವುದು. ಇದರಲ್ಲಿ ನಾಟಕ, ಸಂಗೀತ, ಕವನ, ಏಕಪಾತ್ರಾಭಿನಯ ಇತ್ಯಾದಿಗಳನ್ನು ಇಲ್ಲಿ ಮಾಡಬಹುದು. ಇದರ ಜೊತೆಗೆ ಕನ್ನಡ ತಂಡಗಳು, ಹಿಂದಿ ತಂಡಗಳು, ಇಂಗ್ಲಿಷ್ ತಂಡಗಳು ಅನ್ನೋ ಬೇದ ಭಾವ ಇಲ್ಲದೆ ಎಲ್ಲರೂ ಸಹ ಒಂದು ಕಡೆ ಸೇರಿ ತಮ್ಮ ಕಲೆಯನ್ನು ಪ್ರದರ್ಶಿಸಲು ಒಂದು ಅವಕಾಶ ಮತ್ತು ಪ್ರತಿಯೊಬ್ಬರಲ್ಲೂ ಸಹ ಸಂಪರ್ಕವನ್ನು ಬೆಳೆಸಲು ಸಾಧ್ಯವಾಗುತ್ತದೆ. ಈಗಾಗಲೇ ಅಕ್ಟೋಬರ್ ತಿಂಗಳ ಮೊದಲ ಸಂಡೇ ಜಾಮ್ ಮಾಡಿದ್ದು ಹಲವಾರು ತಂಡಗಳು ಬಂದು ಭಾಗವಹಿಸಿ ಪ್ರದರ್ಶಿಸಿದವು ಇದು ಎರಡನೇ ಸಂಡೇ ಜಾಮ್ ನಡೆಯುತ್ತಿದೆ. ಇಲ್ಲಿ ಅಭಿನಯಿಸುವವರು ಮಾತ್ರ ಬರಬೇಕಾಗಿಲ್ಲ ಅಭಿನಯವನ್ನು ನೋಡಲು ಸಹ ಬರಬಹುದು ಉಚಿತ ಪ್ರವೇಶವಾಗಿದೆ. ಕಾರ್ಯಕ್ರಮವು ಮದ್ಯಾಹ್ನ 12:30 ಕ್ಕೆ ಪ್ರಾರಂಭವಾಗಿ ಸಂಜೆ 5:00 ಗಂಟೆಗೆ ಮುಕ್ತಾಯವಾಗುತ್ತದೆ. ಕಾರ್ಯಕ್ರಮವು ನೆಲಮಂಗಲದ ಬಳಿ ಸುಮಾರು 5 ಕಿ.ಮೀ ದೂರದಲ್ಲಿರುವ ಗುರು ಸ್ಕೂಲ್ ನಲ್ಲಿ ನಡೆಯುತ್ತದೆ. ಗುರು ಸ್ಕೂಲ್ ವಿಶಾಲವಾದ ಬಯಲು ಪ್ರದೇಶ ಸುತ್ತಲು ನೀರು ಹರಿಯುತ್ತದೆ ಹಸಿರು ಗಿಡ ಮರಗಳು ತುಂಬಾ ಸುಂದರವಾದ ಪ್ರದೇಶ. ಇಲ್ಲಿ ಯಾವುದೇ ತಂಡ ಭಾಗವಹಿಸಬಹುದು, ಒಬ್ಬ ವ್ಯಕ್ತಿ ಭಾಗವಹಿಸಬಹುದು, ಸಮಯ 2 ನಿಮಿಷ ಆಗಬಹುದು, 10 ನಿಮಿಷ ಆಗಬಹುದು, ಯಾವುದೇ ಭಾಷೆ ಆಗಬಹುದು, ನಿಮ್ಮ ಅಭಿನಯವನ್ನು ನೋಡಲು ನಿಮ್ಮ ಹಿಂದೆ ಪ್ರೇಕ್ಷಕರು ಇರುವರು.