ಇಬ್ಬರು ’ಹೀರೊ’ ಒಂದು ಸಿನಿಮಾ, ”ಸೈಕೊ”

ಇಬ್ಬರು ’ಹೀರೊ’ ಒಂದು ಸಿನಿಮಾ, ”ಸೈಕೊ”

ಬರಹ

ಕನ್ನಡ ಚಿತ್ರರಂಗ ಬದಲಾವಣೆಯ ದಿಕ್ಕಿನಲ್ಲಿ ಹೊರಟಿದಿಯೇ...?

ಈ ಸಿನಿಮಾ ನೋಡಿದ ಕ್ಷಣ ಹಾಗನಿಸುತ್ತದೆ.ಎಷ್ಟೇ ಬೆವರು ಹರಿಸಿದರೂ ಟೈಟಲ್ ಕಾರ್ಡ್ ಗಷ್ಟೇ ಸೀಮಿತವಾಗುವ ತಂತ್ರಜ್ನರು ನಾಯಕ ನಾಯಕಿಗಿಂತ ಹೆಚ್ಚು ನೆನಪಲ್ಲಿ ಉಳಿಯುವಂತಿರುವುದು ಈ ಸಿನಿಮಾದ ಪ್ಲಸ್ ಪಾಯಿಂಟಾಗಿದ್ರು ಅದು ಅನಿವಾರ್ಯವಾಗಿರಬಹುದೇ ಅಥವಾ ಉದ್ದೇಶಪೂರ್ವಕವೆ ಎಂಬ ಸಂದೇಹವು ಮೂಡುತ್ತದೆ.

ಮನೋರೋಗಿಯ ಸಿನಿಮಾ ಮಾಡಬೇಕೆಂದರೆ ಸಿನಿಮಾದ ಪ್ರತಿಯೊಂದು ದ್ರುಶ್ಯವನ್ನು overtonal montage, intellectual montage ಗಳಲ್ಲಿ ತೋರಿಸಲು ಮಾಡಿರುವ ಪ್ರಯತ್ನ ಒಳ್ಳೆಯದಾದರು, ಇದನ್ನು ಕನ್ನಡ ಸಿನಿಮಾ ಪ್ರೇಕ್ಷಕರು ಎಷ್ಟರಮಟ್ಟಿಗೆ ಸ್ವೀಕರಿಸುತ್ತಾರೆ?
ಯಾಕೆಂದರೆ ಸಿನಿಮಾ ಆರಂಬವಾದಾಗಿನಿಂದ ಪ್ರಾರಂಭಿಸಿ ಅಂತ್ಯದವರೆಗೂ ನಿರೂಪಣೆ ಈ ಎರೆಡೇ ತಂತ್ರಗಳನ್ನು ಅವಲಂಬಿಸಿರುವುದು. ಈ ರೀತಿಯ ದ್ರುಶ್ಯಗಳನ್ನು ಹಿಂದಿಯಲ್ಲಿ rgv ಸಿನಿಮಾಗಳಲ್ಲಿ ನಾವು ಹೆಚ್ಚಾಗಿ ನೋಡುತ್ತೇವೆಯಾದರು, ಅದು ಪೂರ್ತಿ ಸಿನಿಮಾ ಕಥೆಯೇ ಹಾಗಿರುವುದರಿಂದ ಅಲ್ಲಿಗೆ ಸಲ್ಲುತ್ತದೆ ಅಥವಾ ದ್ರುಶ್ಯಗಳನ್ನು ಹಾಗೆ ತೋರಿಸಿದರೆ ಮಾತ್ರ ಅದರಲ್ಲಿ ನಿಗೂಢತೆ, ಭಯ ಉಂಟುಮಾಡುತ್ತವೆಯೆಂದು ನಾವು ಮಾನಸಿಕವಾಗಿ ಒಪ್ಪಿರುವುದರಿಂದ rgv ಸಿನಿಮಾಗಳು ಈ ನಿರೂಪಣಾತ್ಮಕ ಅಂಶಗಳ ಅಂಗಳದಲ್ಲೇ ನಿರೂಪಿಸಲ್ಪಡುತ್ತಿರುತ್ತವೆ.
ಆದರೆ ಈ ಸಿನಿಮಾದಲ್ಲಿ ಕಥೆ ಹಾಗಿಲ್ಲ. ಸಿನಿಮಾ ಮನೋರೋಗಿಯನ್ನು ಕುರಿತದ್ದಾದರು ನಮ್ಮ ಇನ್ನಿತರ ಸಿನಿಮಾಗಳಂತೆಯೇ ಇಲ್ಲಿಯು hero heroin ಇದ್ದಾರೆ, ಆದರೆ ಎರೆಡೇ ಬಾರಿ ವಿಬಿನ್ನ ಸಂದರ್ಭಗಳಲ್ಲಿ ಮುಖಾಮುಖಿಯಾಗುವುದು. duet song ಇದ್ದರೂ ಅದು ಅವರೊಳಗಿನ ಕಲ್ಪನೆಯಲ್ಲಿ ಮಾತ್ರ.

ಕಥೆಯಲ್ಲಿ ನಾಯಕಿ ಇದ್ದರು ಸಿನಿಮಾ colourfull ಆಗಲ್ಲ, (ಈ ಸಿನಿಮಾದಲ್ಲಿ ಸಿನಿಮಾ ಇದೆ ಕಥೆ ಇದೆ , ಎರೆಡಕ್ಕೂ ನಿರ್ದಿಷ್ಟ ಅಸ್ತಿತ್ವ ಇದೆ) ನಾಯಕಿ ಮಿಂಚಲ್ಲಿ ಕಂಡರು, ಮಿಂಚಿನ ನಂತರದ ಗಾಢ ಅಂದಕಾರವು ದ್ರುಶ್ಯವನ್ನು ಆಕ್ರಮಿಸುತ್ತದೆ ಅಥವಾ ಗಾಢ ಅಂದಕಾರದಲ್ಲಿ ಮಿಂಚು ಮಿಂಚಿನಂತೆ ಮಿಂಚಿ ಮಾಯವಾಗುತ್ತದೆ.

ಈ ಸಿನಿಮಾದ ಕಥೆಯಲ್ಲಿ, ಹಾಡುಗಳ ದ್ರುಶ್ಯದಲ್ಲಿ , ಸಾಹಿತ್ಯದಲ್ಲಿರುವ freshnessನ್ನು overtonal montage ದ್ರುಶ್ಯಗಳು ಮಬ್ಬಾಗಿಸುತ್ತವೆ ಅಥವಾ ಮಬ್ಬಾಗಿಸುವುದೇ ನಿರ್ದೇಶಕರ ಉದ್ದೇಶವಿರಬೇಕೇನೊ.ಇಡೀ ಸಿನಿಮಾವನ್ನೇ ಈ ರೀತಿಯ ದ್ರುಶ್ಯಗಳು ಆವರಿಸಿವೆ.

ಈ ಸಿನಿಮಾದ ವಿಶೇಷವೆಂದರೆ positiveness ಅಂದರೆ ಮನೋರೋಗಿಗಳನ್ನು ಸಾಮನ್ಯವಾಗಿ ಬಿಂಬಿಸುವ ಅತಿರೇಕಗಳಿಂದ ಹೊರಗಿಟ್ಟು ಮನೋರೋಗದ ಇನ್ನೊಂದು ರೂಪವನ್ನು ತೋರಿಸುವ ಪ್ರಯತ್ನ. positive hope ನೀಡುತ್ತಲೇ negetiveness ಕಡೆಗೆ ವೀಕ್ಷಕನನ್ನು ಎಳೆಯುವ ನಿರ್ದೇಶಕರ ತಂತ್ರ ಮೆಚ್ಚುವಂತದ್ದು. ಮೊದಲಾರ್ಧದವರೆಗೆ ಪ್ರೇಕ್ಷಕನನ್ನು ಹಿಡಿದಿಡುವ ನಿರ್ದೇಶಕರು ಆನಂತರ ಹಿಡಿದಿಡುವುದರಲ್ಲಿ ತುಂಬಾ ಸುಸ್ತಾದವರಂತೆ ಕಾಣುತ್ತಾರೆ. ಮಾಟ ಮಂತ್ರಗಳ ದ್ರುಶ್ಯಗಳಲ್ಲಿ ಹುಟ್ಟುವ ಕಾತುರತೆ ಅದನ್ನು ವಿವರಿಸುವಲ್ಲಿ ಯಾವುದೇ ಹಿಡಿತವಿಲ್ಲದೆ ಸೊರಗುತ್ತದೆ .

ತನ್ನ ’pop’ular ಹಾಡುಗಳ ಮೂಲಕ ಆಗಲೇ ಜನಪ್ರಿಯರಾಗಿರುವ ಸಂಗೀತ ನಿರ್ದೇಶಕರು ಇದೇ ತಂತ್ರವನ್ನು ಹಿನ್ನೆಲೆ ಸಂಗೀತಕ್ಕು ಬಳಸುವ ಬದಲು ಏನಾದರು ಹೊಸತನಕ್ಕೆ ಪ್ರಯತ್ನಿಸಿದ್ದರೆ ಕಥೆ ನಿರೂಪಣೆಗೆ ಇನ್ನಷ್ಟು ಸತ್ವವನ್ನು ನೀಡುತ್ತಿತ್ತೇನೊ, ಆದರೆ ಅದಾಗದೆ ನಿರೂಪಣೆಗೆ ಪೂರಕಗಿಂತ ಮಾರಕವೇ ಹೆಚ್ಚಾಗಿದೆ.ಅದ್ರಲ್ಲೂ pa tho song ನ ಹಿಂದಿನ ಮುಂದಿನ ದ್ರುಶ್ಯಗಳಲ್ಲಿ ದ್ರುಶ್ಯವು ಸಂಗೀತವು ಪರಸ್ಪರ ಮುನಿಸಿಕೊಂಡವರ ರೀತಿಯಲ್ಲಿ ತಾವು ನಡೆದದ್ದೇ ದಾರಿ ಎಂಬಂತೆ ನಡೆಯುತ್ತಿರುತ್ತವೆ.

ಇಡೀ ಚಿತ್ರದಲ್ಲಿ ನಿರ್ದೇಶಕರ ಕಲ್ಪನೆಯು ಕಲ್ಪಿತವಾಗಿ ನಮ್ಮ ಕಣ್ಣಿಗೆ ಕ್ರಿಯೆಯಾಗಿಸುವಲ್ಲಿ ಮಹತ್ವ ಪಾತ್ರವ ವಹಿಸುವುದು ಕ್ಯಾಮೆರಾಮೆನ್ ಕೆಲಸ.ಈ ಮೊದಲೇ ಹೇಳಿದಂತೆ ಸಿನಿಮಾದಲ್ಲಿ hero heroin ಇದ್ದಾರೆ . ಸಾಮಾನ್ಯವಾಗಿ ತಮ್ಮ ಮೊದಲ್ನೇ ಸಿನಿಮಾದಲ್ಲಿ ಎಷ್ಟರ ಮಟ್ಟಿಗೆ ಸಾದ್ಯವೊ ಅಷ್ಟನ್ನು ಮುಟ್ಟಲು ಇವರಿಬ್ಬರಿಗು ಸಾದ್ಯವಾಗದೇ ಹೋದರು ಅದನ್ನು ಗಮನಕ್ಕೆ ಬರದಂತೆ ಕಾಪಾಡಿ, visualization ಮೂಲಕ ಸಿನಿಮಾವನ್ನು ಎತ್ತಿ ಹಿಡಿದಿದ್ದಾರೆ ನಿರ್ದೇಶಕರು ಮತ್ತು ಛಾಯಾಗ್ರಾಹಕರು.

ಸಿನಿಮಾ ಮುಗಿದ ನಂತರ ನಮ್ಮ ನೆನಪಲ್ಲಿ ಉಳಿಯುವುದು ಇಬ್ಬರು heroಗಳೇ ಒಬ್ಬರು ನಿರ್ದೇಶಕರು ಇನ್ನೊಬ್ಬರು ಛಾಯಾಗ್ರಾಹಕರು. ಇವರದು ಚಿತ್ರರಂಗದಲ್ಲಿ ಹೊಸ ಪ್ರಯತ್ನವಲ್ಲದೇ ಹೋದರು ಕನ್ನಡ ಚಿತ್ರರಂಗಕ್ಕಂತೂ ಒಳ್ಳೆಯ ಬೆಳವಣಿಗೆ.