ಚಂದ್ರನೆಡೆಗೆ ನಮ್ಮ ನಡುಗೆ - ಚಂದ್ರಯಾನ-೧
ಅಲ್ನೋಡು ಪುಟ್ಟ "ಚಂದಾಮಾಮ" ಅಂತ ಅಮ್ಮ ನನ್ನ ತಮ್ಮನಿಗೆ ಹೇಳಿ ಮಮ್ಮು ತಿನ್ನಿಸ್ತಿದ್ದ ದಿನಗಳು ಇನ್ನೂ ನೆನಪಿದೆ. ಈಗ ಕಾಲ ಬದಲಾಗಿದೆ. ಅನಾದಿಕಾಲದಿಂದ ಸೋಮನನ್ನ ಅಮ್ಮಂದಿರು ನೀರಿನ ಪ್ರತಿಫಲನದಲ್ಲಿ ಹಿಡಿದು ಮಕ್ಕಳನ್ನ ಸಾವರಿಸುತ್ತ ಇದ್ದಿದ್ದು ಇನ್ಮುಂದೆ ಮ್ಯೂಸಿಯಮ್ ಫೀಸ್ ಕಥೆಯಾಗಿ ಉಳಿಯೋ ಕಾಲ ದೂರಿಲ್ಲ. ಯಾಕಂದ್ರೆ ಕೆರೆಗಳಿಲ್ಲ, ಇದ್ರೂ ಅಲ್ಲಿ ನೀರಿಲ್ಲ. ಇನ್ಮುಂದೆ ಅವರು ಚಂದ್ರನನ್ನ ತೋರಿಸ್ಬೇಕಾದ್ರೆ ಹೇಳೋದು ವಿಜ್ಞಾನದ ಕಥೆಗಳನ್ನ. ಮನುಷ್ಯ ಚಂದ್ರನತ್ತ ಸರಿಯಲಿಕ್ಕೆ ಅಲ್ಲಿ ನೀರಿದೆಯೇ, ಭವಿಷ್ಯದ ಇಂದನ ಹೀಲಿಯಂ ಇದೆಯೇ, ಅದನ್ನ ಹೇಗೆ ಭುವಿಗೆ ಕಳ್ಳಸಾಗಣೆ ಮಾಡೋದು ಅಂತ ತಿಳಿಲಿಕ್ಕೆ ಪಡುತ್ತಿರುವ ಹರಸಾಹಸಗಳ ವಿನೋದದ ಕಥೆಗಳೊ, ಇಲ್ಲಾ ಭಾರತದ ಐತಿಹಾಸಿಕ ಚಂದ್ರಯಾನದ ಚರಿತ್ರೆ, ಅದರ ಹಿಂದಿನ ಬೆನ್ನೆಲುಭಾಗಿರುವ ಭವ್ಯ ಭಾರತದ ವಿಜ್ಞಾನಿಗಳ ಕಥೆಯನ್ನ. ಅಪ್ಪಂದಿರು ಬೆಂಗಳೂರಿನ ಬ್ಯಾಲಳು ಕೇಂದ್ರಕ್ಕೆ ತಮ್ಮ ಮಕ್ಕಳನ್ನ ಪಿಕ್ನಿಕ್ ಗೆ ಕರೆದು ಕೊಂಡು ಹೋದ್ರೂ ಹೋಗ್ಬಹುದು. ಇದು ಸಾಧ್ಯ ಅಲ್ವೇ?
![](http://platonic.techfiz.info/wp-content/uploads/2008/10/about_chandra.jpg)
ಚಂದ್ರಯಾನ-೧: ವಿಶ್ವದ ೬೮ನೇ ಪ್ರಯೋಗ ಆದ್ರೂ, ಭಾರತದ ಮೊದಲ ಅಂತರಿಕ್ಷ ಪ್ರಯೋಗ. ತಾನೇ ಅಭಿವೃದ್ದಿ ಪಡಿಸಿದ ಪಿ.ಎಸ್.ಎಲ್.ವಿ ಉಡಾವಣಾ ವಾಹನವನ್ನ ಉಪಯೋಗಿಸಿ ಕೊಂಡು ಸಮರ್ಪಕವಾಗಿ ಚಂದ್ರಯಾನ ಪ್ರಯೋಗವನ್ನ ಪ್ರಾರಂಭಿಸಿದೆ. ಓದಿ ತಿಳಿದ ಪ್ರಕಾರ ಭಾರತದ ಈ ಪ್ರಯೋಗ ಅತಿ ಕಡಿಮೆ ಖರ್ಚಿನದ್ದು. ಮುಂದೆ ಮಾನವ ಸಹಿತ ಚಂದ್ರಯಾನ ಪ್ರಯೋಗದ ಮಾತೂ ಈಗಾಗ್ಲೇ ಕೇಳಿಬರ್ತಿದೆ.
![](http://platonic.techfiz.info/wp-content/uploads/2008/10/screenshot1.png)
![](http://platonic.techfiz.info/wp-content/uploads/2008/10/pslvc11-on-launch-pad.jpg)
ಚಂದ್ರನತ್ತ ಸರಿಯೋದಕ್ಕೆ ಮುನ್ನ ಭೂಮಿಯತ್ತ ಮುಖಮಾಡಿ ಭೂಮಿಯ ಚಿತ್ರಗಳನ್ನ ತೆಗೆಯಲಿಕ್ಕೆ Spacecraft Control Centre of ISRO Telemetry, Tracking and Command Network (ISTRAC) ನೀಡಿದ ಸಂದೇಶಗಳನ್ನ ಕರಾರುವಕ್ಕಾಗಿ ಪಾಲಿಸಿದ ಟಿ.ಎಮ್.ಸಿ (ಟೆರಿಯನ್ ಮ್ಯಾಪಿಂಗ್ ಕ್ಯಾಮೆರಾ)ತನ್ನ ಕಪ್ಪು/ಬಿಳುಪು ಚಿತ್ರಗಳನ್ನ ಭೂಮಿಗೆ ಅದನ್ನ ನೀವು ಕೆಳಗೆ ಕಾಣಬಹುದು. ಬ್ಯಾಲಳು ಐ.ಡಿ.ಎಸ್.ಎನ್ ಕೇಂದ್ರ ಕ್ಯಾಚ್ ಮಾಡಿದ ಸಂಕೇತಗಳನ್ನ ಮೊದಲ ಚಿತ್ರವನ್ನ Indian Space Science Data Centre (ISSDC) ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದೆ.
ಚಿತ್ರ-೧
ಮೊದಲ ಚಿತ್ರವನ್ನ ೯ಸಾವಿರ ಕಿಲೋಮೀಟರ್ ಗಳ ಎತ್ತರದಿಂದಲೂ, ಎರಡನೆಯದನ್ನ ೭೦ ಸಾವಿರ ಕಿಲೋಮೀಟರುಗಳ ಎತ್ತರದಿಂದಲೂ ತೆಗೆಯಲಾಗಿದೆ. ಆಸ್ಟ್ರೇಲಿಯಾದ ಉತ್ತರ ಮತ್ತು ದಕ್ಷಿಣ ಕರಾವಳಿ ತೀರಪ್ರದೇಶಗಳನ್ನ ನೀವು ಈ ಚಿತ್ರಗಳಲ್ಲಿ ಕಾಣ್ತಿದ್ದೀರ.
ಟಿ.ಎಮ್.ಸಿ ಚಂದ್ರಯಾನದಲ್ಲಿ ಒಯ್ಯುತ್ತಿರುವ ೧೧ ವೈಜ್ಞಾನಿಕ ಉಪಕರಣಗಳಲ್ಲೊಂದು. ಈ ಕ್ಯಾಮೆರಾ ವಸ್ತುವಿನಿಂದ ಪ್ರತಿಫಲಿಸಿದ ಬೆಳಕನ್ನ ಸಂಗ್ರಹಿಸಿ ೫ ಮೀಟರ್ ನಷ್ಟು ವಿಸ್ತಾರದ ರೆಸೆಲ್ಯೂಷನಿನ ಕಪ್ಪು/ಬಿಳುಪು ಚಿತ್ರಗಳನ್ನ ತೆಗೆಯತ್ತೆ.
ಚಂದ್ರಯಾನ ವಸುಂದರೆಯ ಮನಮೋಹಕ ಚಿತ್ರವನ್ನ ಕಳಿಸಿದ್ದಾಯಿತು, ಈಗ ಮುಂದೆ ಅದರಿಂದ ಬರಲಿರುವ ಮಾಹಿತಿಗೆ ಮತ್ತಷ್ಟು ಉತ್ಸಾಹ, ಕಾತುರ. ಕಾದು ನೋಡೋಣ್ವಾ?
ಚಂದ್ರಯಾನದ ಬಗ್ಗೆ ಮತ್ತಷ್ಟು ಮಾಹಿತಿ :