ಅಯೋಡೈಸ್ಡ್ ಉಪ್ಪು ದೇಹಕ್ಕೆ ಒಳ್ಳೆಯದಲ್ಲವೇ

ಅಯೋಡೈಸ್ಡ್ ಉಪ್ಪು ದೇಹಕ್ಕೆ ಒಳ್ಳೆಯದಲ್ಲವೇ

೧೯೩೦ಕ್ಕೂ ಮುನ್ನ ನಮ್ಮ ದೇಶದಲ್ಲಿ ಬರಿಯ ಸೈಂಧ್ರ ಲವಣ ಬಳಸುತ್ತಿದ್ದರಂತೆ ಅಡುಗೆಗಳಿಗೆ. ಹಾಗಾಗಿ ಅಧಿಕ ರಕ್ತದೊತ್ತಡ ಇದ್ದ ರೋಗಿಗಳೇ ಇರಲಿಲ್ಲವಂತೆ. ನಂತರ ಸಮುದ್ರದ ಉಪ್ಪು ನಂತರ ಸಮುದ್ರದ ಉಪ್ಪಿಗೆ ಅಯೋಡೀನ್ ಬೆರೆಸಿ ಮಾರಾಟಮಾಡುತ್ತಿರುವುದು ಸಧ್ಯದ ಬೆಳವಣಿಗೆ. ಹೀಗೆ ಅಯೋಡೀನ್ ಬೆರೆಸುವಾಗ ಅಲ್ಯುಮಿನಿಯಂ ಸಿಲಿಕೇಟ್ ಅನ್ನೂ ಬೆರೆಸುವುದರಿಂದ ಅದು ಆರೋಗ್ಯಕ್ಕೆ ಹಾನಿಕರ ಎಂದು ಕೆಲವರ ಅಭಿಪ್ರಾಯ. ಇದು ನಿಜವೇ? ಇದರ ಬಗ್ಗೆ ಇನ್ನೆರಡು ಪ್ರಶ್ನೆಗಳು:
ಅಂಗಡಿಯಲ್ಲಿ ಸಿಗುವ ಹರಳು ಉಪ್ಪು(ಲೂಸ್) ಅಯೋಡೀನೈಸ್ ಆಗಿರುವುದಿಲ್ಲವೇ.
ಸೈಂಧ್ರ ಲವಣ ಮತ್ತು ಬ್ಲಾಕ್ ಸಾಲ್ಟ್ ಅಂದರೆ ಎರಡೂ ಒಂದೇನಾ?

Rating
No votes yet