ಬ್ರಾಹ್ಮಣರೆಂದರೆ ಯಾಕ್ರಿ ಕೆಲವರಿಗೆ ಕಣ್ಣುರಿ, ಹೊಟ್ಟೆ ಉರಿ,

ಬ್ರಾಹ್ಮಣರೆಂದರೆ ಯಾಕ್ರಿ ಕೆಲವರಿಗೆ ಕಣ್ಣುರಿ, ಹೊಟ್ಟೆ ಉರಿ,

ಬರಹ

ಇತ್ತೀಚಿಗೆ ಬ್ರಾಹ್ಮಣತ್ವ, ಪುರೋಹಿತ ಶಾಹಿ, ವೈದಿಕತೆ ಎಂಬೆಲ್ಲಾ ಶಭ್ಧಗಳು ತುಂಬಾ ಕೇಳಿಸುತ್ತಿವೆ ,
ಅದೂ ಈ ವಿಜಯಕರ್ನಾಟಕದಲ್ಲಿ ಮತಾಂತರದ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ , ಸುಮ್ಮ ಸುಮ್ಮನ್ದೆ ಉಗಿಸಿಕೊಳ್ಳುವವರು ಬ್ರಾಹ್ಮಣರೇ, (ಉಗಿಯುತ್ತಿರುವವರಲ್ಲಿ ಕೆಲವರು ಅದೇ ಜಾತಿಯಲ್ಲಿ ಹುಟ್ಟಿದ್ದ್ದು ಮರೆತಂತಹ ಬುದ್ದಿಜೀವಿಗಳೂ ಸೇರಿದ್ದಾರೆ ಅದು ಬೇರೆ ಮಾತು)
ಹಿಂದುತ್ವದ ಪ್ರಶ್ನೆ ಬಂದಾಗಲೆಲ್ಲಾ ಪುರೋಹಿತ ಶಾಹಿ ವ್ಯವಸ್ಥೆ ಅದೂ ಇದೂ ಎಂಬ ದೊಡ್ಡ ದೊಡ್ಡ ಮಾತು ಹೇಳಿ ಚರ್ಚೆಯ ದಿಕ್ಕನ್ನೇ ಬದಲಾಯಿಸುವವರೂ ಇದ್ದಾರೆ
ಬ್ರಾಹ್ಮಣಳಾಗಿ ಹುಟ್ಟಿದ ನನಗೆ ಇಲ್ಲೀವರೆಗೂ ಹಾಗೆ ಹುಟಿದ್ದಕ್ಕೆ ಗ್ರೇಟ್ ಎಂದು ಅನ್ನಿಸುವಂತಹ ಘಟನೆ ನಡೆದಿಲ್ಲ ಮುಂದೆಯೂ ನಡೆಯುವುದಿಲ್ಲ
ಇನ್ನೂ ಕೆಲವೊಮ್ಮೆ ಯಾಕಾದರೂ ಈ ಜಾತಿಯಲ್ಲಿ ಹುಟ್ತಿದ್ದೇನೋ ಎಂಬಷ್ಟು ಬೇಸರ ಮೂಡಿಸುವಂಟಹ ಘಟನೆಗಳೂ ನಡೆದಿವೆ
ಬ್ರಾಹ್ಮಣರು ಯಾರ ತಂಟೆಗೂ ಹೋಗುವವರಲ್ಲ . ಹಾಗೆ ಯಾರಾದರೂ ತಂಟೆಗೆ ಬಂದರೂ ಎದುರಿಸಿ ನಿಲ್ಲುವವರಲ್ಲ. ಒಳ್ಲೆಯ ಮಾತಲ್ಲಿ ಹೇಳಿ ಕೊನೆಗೆ ಸುಮ್ಮನಾಗುವವರು
ಒಳಿತು ಮಾಡಲು ಆಗದಿದ್ದರೂ ಕೇಡನ್ನು ಬಗೆದವರಲ್ಲ.
ಅವರಾಯ್ತು ಅವರ ಓದು, ಕೆಲಸ ಎಂದು ಇರುವವರು
ರಾಷ್ಟ್ರಾಭಿಮಾನ, ರಾಜ್ಯಾಭಿಮಾನ, ಸಂಸ್ಕ್ರುತಿಯ ವಿಷಯಕ್ಕೆ ದನಿ ಎತ್ತಿದಾಗಲೆಲ್ಲಾ ತಮ್ಮ ಜಾತಿಯ ವಿಷಯವಾಗಿ ನಗೆಗೀಡಾಗುವವರು
ನಿಜವಾಗಲೂ ಆಗಿನ ಕಾಲ ಗೊತ್ತಿಲ್ಲ ಆದರೆ ಇಂದಿನ ಕಾಲಕ್ಕಂತೊ ದೌರ್ಜನ್ಯಕ್ಕೆ ಒಳಗಾಗುವವರು ಬ್ರಾಹ್ಮಣರೇ ಜಾಸ್ತಿ
ಇನ್ನೂ ಅಸ್ಪೃಶ್ಯತೆಯ ವಿಷಯಕ್ಕೆ ಬಂದರೂ ನಮ್ಮ ಬೆಂಗಳೂರಿನಲ್ಲಂತೂ ಆ ಪದವೇ ಇಲ್ಲ
ನಮ್ಮ ಮನೆಯಲ್ಲಿ ಕೆಲಸ ಮಾಡುವ ಹುಡುಗಿ ಯಾವ ಜಾತಿ ಎಂದು ನಾವು ಕೇಳಿಲ್ಲ . ಅಡುಗೆ ಮನೆಗೆ ಸಲೀಸಾಗಿ ಬರುತ್ತಾಳೆ, ನಮ್ಮಂತೆ ಓಡಾಡುತ್ತಾಳೆ
ನಮ್ಮ ಅಪಾರ್ಟ್ಮೆಂಟ್‍೬ನ ವಾಚಮೆನ್ ಯಾವ ಜಾತಿ ಎಂದು ಕೇಳಿಲ್ಲ ಮನೆಗೆ ಬಂದು ಆರಾಮವಾಗಿ ಕಾಫೀ ಕುಡಿದು ಹೋಗುತ್ತಾನೆ ಅವನಿಗೆಂದು ಯಾವುದೇ ಬೇರೆ ಗ್ಲಾಸ್ ಇಟ್ಟಿಲ್ಲ
ಸುಮ್ಮನೆ ಯಾವುದೋ ಕಾಲದ ಕತೆ ಹೇಳಿಕೊಂಡು ಬ್ರಾಹಮಣರನ್ನು ಹೀಗೆಳೆಯುವುದು ಎಷ್ಟು ಸರಿ?
ಇಂದಿನ ವಿ ಕ ದಲ್ಲಿ ಇಂದೂಧರ್ರವರ ಲೇಖನ ಓದಿ ಮೈ ಕುದಿಯಿತು ಸ್ವಲ್ಪ ಹೆಚ್ಚೇ ಎನ್ನುವಷ್ಟು ವ್ಯಕ್ತಿ ನಿಂದನೆ, ಜಾತಿ ನಿಂದನೆ ಮತಾಂತರ ವೊಂದನ್ನು ಬಿಟ್ಟು ಮತ್ತೆಲ್ಲಾ ವಿಚಾರಗಳೂ ಅಲ್ಲಿವೆ.
ಬೆಳಗ್ಗೆ ಮನೆಯಲ್ಲಿ ಅದೇ ಚರ್ಚೆ ನಡೆಯಿತು ಅದನ್ನೇ ಇಲ್ಲಿ ಬರೆದಿದ್ದೇನೆ ಅಷ್ಟೆ

ಕೊನೆಯದಾಗಿ
ನಮ್ಮ ವಿಷ್ಯವಾಗಿ ಇಲ್ಲಿನ ರೆಡ್ಡಿಗಳೊಬ್ಬರು ಹೇಳಿದ ಮಾತು
"ಅಯ್ನೋರನ್ನು ಗೋಳು ಹಾಕ್ಕೋಬೇಡ , ಅವರು ಏನೂ ಹೇಳೋದಿಲ್ಲ ಆದರೆ ಮನಸಲ್ಲೇ ಕೊರಗ್ತಾರೆ, ಅದೇ ಕೊರಗು ಶಾಪವಾಗಿ ಕಾಡುತ್ತೆ"