ಕೈಯ್ಯಲ್ಲಿನ ಜಗತ್ತು

ಕೈಯ್ಯಲ್ಲಿನ ಜಗತ್ತು

ಬರಹ

ತಾಂತ್ರಿಕತೆ ಎಂಬುದು ಮುನ್ನಡೆದಂತೆ,ನಮ್ಮ ಅನಿವಾರ್ಯತೆಗಳು ಹೇಗೆ ಬೆಳೆಯುತ್ತವೆ ಅಲ್ಲವೇ? ದೂರವಾಣಿಯನ್ನ ತೆಗೆದುಕೊಳ್ಳೋಣಾ. ಮೊನ್ನೆ ಮೊನ್ನೆಯತನಕ ಎಲ್ಲಾ ಮನೆಗಳಲ್ಲೂ ಆ ವ್ಯವಸ್ಥೆ ಇರಲಿಲ್ಲ,ಅದು ನಿದಾನವಾಗಿ ಎಲ್ಲೆಡೆ ತಳವೂರಿತು.ಈಗ ಮೊಬೈಲ್ ಕಾಲ ಅನ್ನೋತರದಲ್ಲಿ ಮೊಬೈಲ್ ಗ್ರಂಥಾಲಯ,ಮೊಬೈಲ್ ಕೇಫ್ಟೇರಿಯಾ ಹೀಗೆ ಎಲ್ಲವೂ ಚಲಿಸುತ್ತಿರುತ್ತವೆ.ಇಂದು ಮನೆಯ ಪ್ರತಿಯೊಬ್ಬರ ಕೈಗೂ ಒಂದೊಂದು ಚಲಿಸುವ ಫೋನ್ ಗಳು.ಅದು ನಮ್ಮ ದೇಹದ ಮತ್ತೋಂದು ಅಂಗವಾಗಿ ಅಂಟಿಕೊಂಡೇ ಇರಬೇಕು.ಮೊಬೈಲ್ ಫೋನ್ ಗಳು ಈಗ ನಮ್ಮ ಅನಿವಾರ್ಯತೆಗಳಲ್ಲೊಂದಾಗಿಬಿಟ್ಟಿವೆ.

ಜಾಹೀರಾತುಗಳಲಿ ಹೇಳುವಂತೆ,ಇಂದು ಜಗತ್ತು ನಮ್ಮ ಕೈಯ್ಯಲ್ಲಿ.ಜನಸಾಮಾನ್ಯರಿಗೆ ಜಗತ್ತು ಸಣ್ಣದಾಗಿ ಕಾಣಲು ಮೊಬೈಲ್ ಗಳೂ ಮೂಲಕಾರಣವೇನೊ!ಅದೆಲ್ಲಿದ್ದರೂ ಸಂಪರ್ಕಿಸಬಹುದು,ಮನಸ್ಸಾದಾಗ ಮಾತನಾಡಬಹುದು.ಅದಕ್ಕೊಂದು ಉದಾಹರಣೆಯಾಗಿ ಮೊನ್ನೆ ನನಗೊಂದು call ಬಂದಿತ್ತು,ಅವಳ ಮಾತು'ಇಂದೇತಕೋ ಯಾರೊಡನೆಯಾದರೂ ಮನದ ಮಾತನ್ನು ಹಂಚಿಕೊಳ್ಳಬೇಕೆಂದೆನಿಸಿ cellಅನ್ನು ಕೈಯ್ಯಲ್ಲಿ ಹಿಡಿದರೆ ನೆನಪಾದವಳು ನೀನು.ತಕ್ಷಣ ನಿನ್ನ phoneನಂಬರ್ ಅನ್ನು ಹುಡುಕಿ ತೆಗೆದು ನನ್ನ ಮೊಬೈಲ್ ನ ಎದೆಯಮೇಲೆ ಅದನ್ನು ಮೂಡಿಸಿದೆ ಅಷ್ಟೇ,ಈಗ ನಿನ್ನ ಪಕ್ಕದಲ್ಲೇ ಕುಳಿತು ಮಾತನಾದಿದಂತೆನಿಸುತ್ತಿದ." ಮೊಬೈಲ್ ಗಳಿಂದಾಗಿ ನಾವು ಈಗ ಮಾತನಾಡಿದೆವು. ಇದರಿಂದಾಗಿ ಸಂಬಂದಗಳು ಜೀವಂತವಾಗುತ್ತಿವೆ,ಪರಿಚಯಗಳು ಸ್ನೇಹವಾಗುತ್ತಿವೆ.ಅದರಿಂದಲೇ ಏನೋ ಆ ಸರಹೊತ್ತಿನಲ್ಲಿ ಹೀಗೊಬ್ಬಳು ಪರಚಿತಳಲ್ಲದ ಪರಿಚಿತಳು ನನ್ನೊಡನೆ ಮಾತನಾಡಿದಳು.ಅವಳು ಕೆಲವು ಅಂತರಂಗದ ಮಾತುಗಳನ್ನು ಹೇಳಿಕೊಳ್ಳುತ್ತಿದ್ದಾಳೆ,ಅದು ನನ್ನೊಡನೆಯೇ ಎಂಬುದು ಖಚಿತವಾಗಿದೆ,ಒಳ್ಳೆಯ ಗೆಳತಿಯಾಗಿ ಮಾತನಾಡಿದ್ದೇನೆ.ಆದರೆ ನಿಜವಾಗಿಯೂ ಹೇಳುತ್ತೇನೆ ಅವಳು ಯಾರೆಂಬುದು ನನಗೆ ತಿಳಿದಿರಲಿಲ್ಲ.ಕೊನೆಗೆ ಮಾತಿನ ಮಧ್ಯೆ ಆ ದಿನದ ಪಯಣದ ಕುರಿತು ಅವಳೇ ಹೇಳಿದ್ದಾಳೆ,ಆಗ ನೆನಪಾಯಿತು ನೋಡಿ ಅವಳು ಆ ದಿನ ಬಸ್ ನಲ್ಲಿ ಜೊತೆಯಾಗಿದ್ದಳು,ಆದರೂ ಆ ನನ್ನ ಹೊಸ ಸ್ನೇಹಿತೆಯ ಮೊಗ ಇನ್ನೂ ನನಗೆ ನೆನಪಾಗಲಿಲ್ಲ.ಮಾತು ಮುಗಿಸುವಾಗ ಅವಳದನಿಯಲ್ಲಿ ನಿರಾಳತೆ ಇತ್ತು,ಅಷ್ಟು ಸಾಕಲ್ಲವೇ? ಹೀಗೆ ಬೇಕೆನಿಸಿದಾಗ ಬೆನ್ನು ತಟ್ಟಿಸಿಕೊಳ್ಳುವ ಅವಕಾಶವನ್ನು ಮೊಬೈಲ್ ಫೋನ್ ಗಳು ನಮಗೆ ಒದಗಿಸಿಕೊಡುತ್ತವೆ.

ಇಷ್ಟರ ನಡುವೆಯೂ ಒಮ್ಮೊಮ್ಮೆ ಈ ವ್ಯವಸ್ಥೆ ಅವಸ್ಥೆ ಎನಿಸಿಬಿಡುತ್ತದೆ.ಜಾಸ್ತಿಯಾದರೆ ಅಮ್ರುತವೂ ವಿಷ ಅನ್ನುತ್ತಾರಲ್ಲಾ ಹಾಗೆ. ಈ ಮೊಬೈಲ್ ಫೋನ್ ಗಳು ಬೆಂಬಿಡದ ಬೂತದಂತೆ ಕಾಡಿ ಸುಂದರ ಏಕಾಂತವನ್ನೇ ಕಸಿದು ಕೊಂದುಬಿಡುತ್ತವೆ.ಒಂಟಿತನವನ್ನು ನೀಗುತ್ತದೆ ಎಂಬುದು ಎಷ್ಟು ಸತ್ಯವೋ ಒಮ್ಮೊಮ್ಮೆ ಮನೆಯೊಳಗಿನ ಮನಸಿನೊಳಗೂ ಮಾತುಗಳಿಲ್ಲದಂತೆ ಸಮಯವನ್ನು ನಿರ್ಧಾಕ್ಷಿಣ್ಯವಾಗಿ ನುಂಗಿಬಿಡುವುದೂ ಅಷ್ಟೇ ಸತ್ಯ.ಎಲ್ಲೋ ಒಮ್ಮೊಮ್ಮೆ switch off ಮಾಡಿದರೆ ಕೆಲವು ಪ್ರಮುಖ ಕರೆಗಳು ಸಮಯಕ್ಕೆ ಸಿಗದಂತಾಗುತ್ತವೆ.ಅಬ್ಬಾ ಎಷ್ಟು ಕಿರಿ ಕಿರಿ ಅನ್ನಿಸುತ್ತೆ ಅಲ್ಲವೆ?
ಮೊಬೈಲ್ ಗಳಲ್ಲಿ FM ಸೌಲಭ್ಯ ಒದಗಿಸಿದ ನಂತರವಂತೂ ಕಿವುಡರ ಉಪಕರಣ ಪ್ರತಿಯೊಬ್ಬರ ಕಿವಿಯನ್ನೂ ಸೇರಿದಂತೆನಿಸುತ್ತದೆ.ಸುಮ್ಮನೆ ನಗುವವರು,ಒಬ್ಬೊಬ್ಬರೆ ಮಾತನಾಡುತ್ತಿರುವವರು ಎಲ್ಲೆಡೆ ಕಂಡುಬರುತ್ತಾರೆ.ಇದು ಈಗ ಸದ್ಯಕ್ಕೆ ಪಟ್ಟಣಗಳಲ್ಲಷ್ಟೇ ಹೆಚ್ಚಾಗಿ ಕಂಡು ಬರುತ್ತಿರುವುದರಿಂದ ಹಳ್ಳಿಯವರು ಪಟ್ಟಣಕ್ಕೆ ಕಾಲಿಟ್ಟ ಮೊದಲು ಅವರಿಗೆ ಹುಚ್ಚಾಸ್ಪತ್ರೆಯ ಒಳ ಬಂದಂತಾಗುವುದು ನಿಜ.

ಇಂದು ನಮಗೆ ಅನಿವಾರ್ಯವಾದ ಈ ಮೊಬೈಲ್ ಫೋನ್ ಗಳು ವರವೋ ಶಾಪವೋ ತಿಳಿಯಿತ್ತಿಲ್ಲ.