ಇವು ಏನೂ ಗೊತ್ತಿಲ್ಲ...
- ನೀನು ನನಗೆ ಎಂದೂ ಅರ್ಥವಾಗಿಲ್ಲ.
ಆದ್ರೂ ಪ್ರೀತಿ ಹುಟ್ಟುತ್ತಲೇ ಇದೆ...
- ಕವಿ ಏನಕ್ಕೆ ಬರೆಯುತ್ತಾನೆ ಗೊತ್ತಿಲ್ಲ.
ಆದ್ರೆ, ಆತ ಬರೆದ ಸಾಲುಗಳು ನನಗೆ
ತುಂಬಾ ಇಷ್ಟ. ಹಾಗಂತಾ ನಾನೂ ಕವಿಯಲ್ಲ...
- ನಾಲ್ಕೇ ನಾಲ್ಕು ಸಾಲು ಬರೆಯುವುದು ನನಗಿಷ್ಟ.
ಆದ್ರೆ, ಬರೆದದ್ದು ಏನು ಅಂತಾ ಇನ್ನು ಅರ್ಥವಾಗಿಲ್ಲ.
ಆದರೂ ಸಾಲುಗಳು ಹುಟ್ಟಿಬಿಡುತ್ತವೆ...
- ಬರವಣಿಗೆಯಿಂದ ಹೃದಯ ಭಾರ ಇಳಿಯುತ್ತದೆ.
ಆದ್ರೆ, ಎಷ್ಟೇ, ಬರೆದರೂ ಭಾರ ಹೆಚ್ಚಾಗುತ್ತಲೇ ಇದೆ...
- ಕವಿ ಕಂಡ ಕನಸಿನಲ್ಲಿ ನೀ ಮರೆತು ಹೋಗಿದ್ದೆ.
ಆಗ ಪದ್ಯದಲ್ಲಿಯ ಕೆಲ ಸಾಲುಗಳು ಮಾಸಿ
ಹೋಗಿದ್ದವು...
- ನೀ ನನ್ನ ಪ್ರೀತಿಯ ಆಳ ಕೇಳತಿ.
ಆದ್ರೆ, ಹೇಳಲು ಒಂದೇ ಒಂದು ಹನಿ
ಪ್ರೀತಿಯನ್ನೂ ಬಿಟ್ಟಿಲ್ಲವಲ್ಲೆ...
-ರೇವನ್
Rating
Comments
ಉ: ಇವು ಏನೂ ಗೊತ್ತಿಲ್ಲ...