ನಾನು ಯಾರನ್ನು ಪೂಜಿಸಲಿ? ಯಾರನ್ನು ವ೦ದಿಸಲಿ?

ನಾನು ಯಾರನ್ನು ಪೂಜಿಸಲಿ? ಯಾರನ್ನು ವ೦ದಿಸಲಿ?

ಗಾ೦ಧಿ -ಮಾರವಾಡಿಗಳಿಗೆ,
ಅ೦ಬೇಡ್ಕರ್-ದಲಿತರಿಗೆ,
ವ್ಯಾಸ-ಬೆಸ್ತರಿಗೆ,
ವಾಲ್ಮೀಕಿ-ಬೇಡರಿಗೆ,
ಕನಕದಾಸ-ಕುರುಬರಿಗೆ,
ಕೃಷ್ಣ-ಯಾದವರಿಗೆ,
ರಾಮ-ರಜಪೂತರಿಗೆ,
ಪುರ೦ದರದಾಸ-ಶೆಟ್ಟರಿಗೆ
ಬಸವಣ್ಣ-ಲಿ೦ಗಾಯತರಿಗೆ
ಮಾಚಯ್ಯ-ಮಡಿವಾಳರಿಗೆ
ರಾಘವೇ೦ದ್ರ ಸ್ವಾಮಿ-ಬ್ರಾಹ್ಮಣರಿಗೆ
ಬಾಹುಬಲಿ-ಜೈನರಿಗೆ,
ಸೇರುವುದಾದರೆ ಯಾವ ಮಹಾತ್ಮನೂ ಹುಟ್ಟಿ ಬರದಿರುವ ಜಾತಿಯವನಾದ ನನಗೆ ಯಾರು ಸೇರಬೇಕು?
ಯಾರನ್ನು ನಾನು ಪೂಜಿಸಬೇಕು? ಯಾರನ್ನು ವ೦ದಿಸಲಿ?
ವಿ- ಸೂ: ಚಿಕ್ಕವನಿದ್ದಾಗ ನಾನು ಎಲ್ಲ ಮಹಾನುಭಾವರನ್ನು ಮುಗ್ಧನಾಗಿ ಪೂಜಿಸುತ್ತಿದ್ದೆ, ಆರಾಧಿಸುತ್ತಿದ್ದೆ. ಬೆಳೆದ೦ತೆಲ್ಲ ನನಗೆ ಗೊತ್ತಾಯಿತು...ಅವರಿಗೂ ಜಾತಿಯಿದೆ ಎ೦ದು! ನಾನು ಅವರ ಜಾತಿಗೆ ಸೇರಿಲ್ಲವೆ೦ದು!
ನನಗೆ ಅರಿವಾದರೂ ಏಕೆ ಬ೦ತೋ? ಏಕಾದರೂ ದೊಡ್ಡವನಾದೆನೋ ಎನ್ನುವ ಪಶ್ಚಾತ್ತಾಪ ನಿರ೦ತರ......
.

Rating
Average: 5 (1 vote)

Comments