ಹೀಗೂ ಒಂದು ಯೋಚನೆ!!!!

ಹೀಗೂ ಒಂದು ಯೋಚನೆ!!!!

ಬಹುಶಃ ಕೆಲವು ತಿಂಗಳ ಹಿಂದೆ ನೀವು ಅವ್ಯಾಹತವಾಗಿ ಫಾರ್ವರ್ಡ್ ಮಾಡಲಾದ ಲೇಖನವನ್ನು ಓದಿರಬಹುದು.. ಕನ್ನಡ ಬರುತ್ತಾ ಅಂತ. ಅದರ ಮೂಲ ಯಾರದ್ದು ಅಂತ ಗೊತ್ತಾಗ್ಲಿಲ್ಲ ಆದ್ರೆ ತುಂಬ ಮನ ಮುಟ್ಟುವ ಹಾಗೆ ಬರೆದಿದ್ರು. ಅದನ್ನು ಓದಿ ಘಂಟೆಗಳ ಕಾಲ ಕಳೆದಿದ್ರು ಸಹ ನಂಗೆ ತಲೇಲಿ ಒಂದೇ ವಿಚಾರ? ಪರಿಸ್ಥಿತಿ ಆ ವಿಕೋಪಕ್ಕೆ ಹದಗೆಟ್ಟಿದ್ಯ ಅಂತ!! ಬೆಂಗಳೂರಲ್ಲಿ ಕೆಲವು ಕಡೆ ಬೆಂಗಳೂರೇ ಅನ್ಸೋಲ್ಲ ಅದು ನಿಜ ಆದ್ರೆ ಅದೇ ಜಾಗಗಳು ಬೆಂಗಳೂರು ಅಂತ ಕರೆಸಿಕೊಳ್ಳೋಲ್ಲ ಅಲ್ವ? ಒಂದು ಊರು ಅಂದ್ ಮೇಲೆ ಹೊಲೆಗೇರಿ ಇರೋದು ನಿಜ ಆದ್ರೆ ಹೊಲೆಗೇರಿಗೆ ಹೋಗಿ, ಇದೆ ಊರಾ!!! ಅಂತ ಆಶ್ಚರ್ಯ ಪಟ್ರೆ ಅದು ಸರಿನಾ? ನಂಗೆ ಅನ್ಸೋದು ಏನು ಅಂದ್ರೆ ಕನ್ನಡ ಬರುತ್ತಾ ಅಂತ ಕೇಳ್ಕೊಂಡು ಓಡಾಡೋದು ತಪ್ಪು ಕನ್ನಡ ಬರೋಲ್ವಾ? ಅಂತ ಆಶ್ಚರ್ಯ ವ್ಯಕ್ತ ಪಡಿಸಿಕೊಂಡು ಓಡಾಡಬೇಕು ಅಂತ. ಲೋಟ ಅರ್ಧ ಖಾಲಿ ಇದೆ ಅನ್ನೋದಕ್ಕಿಂತ ಲೋಟ ಅರ್ಧ ತುಂಬಿದೆ ಅಂತ ಹೇಳಿಕೊಂಡು ಸಕಾರಾತ್ಮಕ ಆಲೋಚನೆ ಬೆಳಸಿಕೊಬೇಕು ಅಂತ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಅನ್ನೋದು ಕೇವಲ ಘೋಷಣೆ ಆಗದೆ ಅದು ವಾಸ್ತವ ಆದ್ರೆ ಅದಕ್ಕಿಂತ ಬೇರೆನು ಬೇಕು? ಇದು ಆಗ್ಬೇಕು ಅಂದ್ರೆ ನಮ್ಮ ಆಲೋಚನೆ ಬದಲಾಗಬೇಕು, ಕನ್ನಡವನ್ನೇ ಬಳಸಬೇಕು ಕನ್ನಡವನ್ನೇ ಬೆಳೆಸಬೇಕು... ನಾನು ಆನ್ಲೈನ್ ಸಿಕ್ಕ ಹಲವಾರು ಮಂದಿಯನ್ನು ವೈಯಕ್ತಿಕವಾಗಿ ಚಾಟ್ ನಲ್ಲಿ ಮಾತಾಡಿಸುವಾಗ ಅವರು ಆಂಗ್ಲವನ್ನೇ ಬಳಸುವುದು? ಈ ಥರ ಯಾಕೆ? ಎಲ್ಲರ ಮುಂದೆ ಕನ್ನಡ ಕನ್ನಡ ಅನ್ನೋದು ನಂತರ ವೈಯಕ್ತಿಕವಾದ ಮಾತುಕತೆಗೆ ಅದು ಕನ್ನಡಿಗನೊಂದಿಗೆ ಆಂಗ್ಲಕ್ಕೆ ಪರಿವರ್ತನೆಗೊಳ್ಳುತ್ತದೆ.. ಧಟ್ಟು, ಧಿಸ್ಸು, ಕಂ ಯಾ, ಗೋ ಯಾ, ನೋ ಪಾ, ಎಸ್ ಪಾ ಅನ್ನೋದು ಬೇರೆ :-) . ಕನ್ನಡ ಬೆಳೆಸೋಕ್ಕೆ ಉಳಿಸೋಕ್ಕೆ ಅನ್ಯಭಾಷೆಯ ವಧೆ ಮಾಡಬೇಕಿಲ್ಲ ಅಚ್ಚ ಹಾಗು ಸ್ವಚ್ಛ ಕನ್ನಡ ಮಾತಾಡಿದರೆ ಸಾಕು. ಬೇರೆ ಭಾಷೆ ಕಲಿತರೆ, ಮಾತಾಡಿದರೆ ತಪ್ಪಲ್ಲ ಆದರೆ ನಮ್ಮತನವನ್ನು ಉಳಿಸಿಕೊಳ್ಳಬೇಕಾದುದು ಮುಖ್ಯ. ಅನ್ಯ ಭಾಷೆ ಜರೆದರೆ ನಮ್ಮ ಭಾಷೆಗೆ ಮೆರುಗು ಬರಲು ಸಾಧ್ಯಾನ? ಕೆಲವು ಯಾಹೂ ಗುಂಪುಗಳಲ್ಲಿ ನೋಡಿದ್ರೆ ಯಪ್ಪಾ ಕಣ್ಣು ಮುಚ್ಕೊಬೇಕು ಆ ಥರ ವಾದ ವಿವಾದ ನಡೆಯುತ್ತೆ... ಯಾವನೋ ಒಬ್ಬ ತಲೆಕೆಟ್ಟು ಕನ್ನಡದ ಬಗ್ಗೆ ಕೆಟ್ಟದಾಗಿ ಬರೆಯುವುದು ಅದಕ್ಕೆ ಪ್ರತ್ಯುತ್ತರವಾಗಿ ಅದಕ್ಕಿಂತಲೂ ಕೀಳಾಗಿ ಅವನಿಗೆ ಅವನ ಭಾಷೆಗೆ ಬೈಯ್ಯುವುದು. ಇಂತಹ ಕೆಸರೆರೆಚಾಟದಿಂದ ನಮಗೆ ಏನು ಲಾಭವಿಲ್ಲದಿದ್ದರೂ ಸಹ ಶುರು ಮಾಡಿದವನು ಮಜಾ ತೊಗೋಳೋದು ಖಂಡಿತ.. ಯಾಕಂದ್ರೆ ಹಂದಿ ಜೊತೆ ಕೆಸರಲ್ಲಿ ಗುದ್ದಾಟಕ್ಕೆ ಇಳಿದಾಗ ಸೋತರು ಗೆದ್ರು ಹಂದಿಗೆ ತಾನೆ ಮಜಾ, ಹಾಗೆ ಇಂಥಹ ವಿಚಾರ ಕೂಡ.... ನಾವು ಇಡಿ ಕರ್ನಾಟಕದಲ್ಲಿ ಯಾವುದೇ ಜಾಗಕ್ಕೆ ಹೋದರು ಸಹ ಕನ್ನಡದಲ್ಲೆ ಶುರು ಮಾಡಿ ಅಪ್ಪಿ ತಪ್ಪಿ ಅವರು ಪರಭಾಷೆಯಿಂದ ಶುರು ಮಾಡಿದರೆ ಕನ್ನಡ ಬರೋಲ್ವಾ!!! ಅಂತಾನೆ ಕೇಳಬೇಕು. ನಾವು ಕೇಳುವ ಶೈಲಿ ಅವನಿಗೆ ಕನ್ನಡ ಮಾತನಾಡದೇ ಇದ್ದಿದ್ದಕ್ಕೆ ಕೀಳರಿಮೆ ಉಂಟಾಗಿ ಕನ್ನಡದಲ್ಲೆ ಶುರು ಮಾಡಬೇಕು... ನಮ್ಮ ನಾಡಿನಲ್ಲೇ ನಾವು, ಮಾತು ಶುರು ಮಾಡೋ ಮೊದಲೇ ಭಿಕ್ಷೆ ಬೇಡುವವರ ಥರ "ಕನ್ನಡ ಬರುತ್ತಾ??" ಅಂತ ಕೇಳೋದ್ದಕ್ಕಿಂತ "ಕನ್ನಡ ಬರೋಲ್ವಾ!!" ಅಂತ ಘರ್ಜಿಸಿದರೆ ವ್ಯತ್ಯಾಸ ಕಾಣುತ್ತೆ ಅಲ್ವ.. ಕೇಳಿಸಿಕೊಂಡವನಿಗು ಒಮ್ಮೆ ಮನಸ್ಸಿಗೆ ತಟ್ಟಿರಬೇಕು...

Rating
No votes yet

Comments