ಜೆಡಿಎಸ್ನ ಕನ್ವೆನ್ಷನ್ ಪ್ರಭಾವದಿಂದಾಗಿ ನಗರದ ಈಶಾನ್ಯ ಭಾಗದಲ್ಲಿ ರಸ್ತೆ ಸಂಚಾರ ನಿಶ್ಚಲವಾಯಿತು
ಬರಹ
ನವೆಂಬರ್ ೧೭ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಜೆಡಿಎಸ್ನ ಕನ್ವೆನ್ಷನ್ ನಡೆಯಿತು. ಅದರ ಪ್ರಭಾವದಿಂದಾಗಿ ನಗರದ ಈಶಾನ್ಯ ಭಾಗದಲ್ಲಿ ರಸ್ತೆ ಸಂಚಾರ ನಿಶ್ಚಲವಾಯಿತು. ಈ ಸುದ್ದಿ ಬಹುತೇಕ ಎಲ್ಲಾ ಪತ್ರಿಕೆಗಲ್ಲೂ ಮುಖಪುಟದಲ್ಲಿ ಬಂತು. ಇನ್ನೊಂದು ವಿಷೇಶ ಅಂದರೆ ಆ ಕನ್ವೆನ್ಷನ್ ಬಗ್ಗೆ ಸುದ್ದಿ `ಡೆಕ್ಕನ್ ಹೆರಾಳ್ಡ್'ನಲ್ಲಂತೂ ಒಳಪುಟಕ್ಕೆ ಹೋಯಿತು - ನಾಯಿ ಮನುಷ್ಯನ್ನ ಕಚ್ಚಿದ್ದಕ್ಕಿಂತ ಮನುಷ್ಯ ನಾಯಿ ಕಚ್ಚಿದರೆ ಪ್ರಮುಖ ಸುದ್ದಿ ಎನ್ನುವಂತೆ. ಪ್ರಾಂತೀಯ ಪಕ್ಷಗಳಿಂದಲೇ ಕರ್ನಾಟಕದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಸಾಧ್ಯ ಎಂದು ಕುಮಾರಸ್ವಾಮಿಯವರು ತಮ್ಮ ಭಾಷಣದಲ್ಲಿ ಹೇಳಿದರೆಂದೂ, ಅದಕ್ಕಾಗಿ ಅವರ ಪಕ್ಷವನ್ನು ಬೆಂಬಲಿಸಬೇಕೆಂದು ಜನತೆಗೆ ಕರೆ ಕೊಟ್ಟರೆಂದೂ ವರದಿಯಾಗಿದೆ. ಅಂದರೆ ಜೆಡಿಯೆಸ್ ರಾಷ್ಟ್ರೀಯ ಪಕ್ಷವಲ್ಲ ಅಂತ ಅವರೇ ಒಪ್ಪಿಕೊಂಡಾಯಿತು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ