ಮದುವೆಯ ಈ ಬಂಧ......

ಮದುವೆಯ ಈ ಬಂಧ......

ಎಲ್ಲರಿಗೂ...ಶರಣು.....
ಇದು ನನ್ನ ಮೊದಲ ಬರಹ, ನನ್ನ ಹೆಂಡತಿ ಹೇಳ್ತಾಳೆ ನನಗೆ ಸ್ವಲ್ಪ ಬುದ್ದಿ ಕಮ್ಮಿ, ಸಮಾಧಾನ ಕಮ್ಮಿ, ಹಾಸ್ಯ ಪ್ರಜ್ನೆ ಕಮ್ಮಿ,ಶಾಂತಿ ಕಮ್ಮಿ, ಹೀಗೆ ಇನ್ನು ಎನೇನೊ ಕಮ್ಮಿ ಕಮ್ಮಿ ಕಮ್ಮಿ...
ಅವಳ ಮಾತು ಎಕ್ ಮಾರ್ ದೋ ತುಕುಡ ಥರಹ ..ಯಾವಾಗಲೂ ನೇರ ದಿಟ್ಟ ಹಾಗು ನಿರಂತರ.ಆದರೆ ತಮಾಷೆ ಗೊತ್ತಾ? ಈ ಲೇಖನ ಬರೆದ ಮೇಲೆ ಅವಳಿಗೆ ಮೊದಲು ಹೇಳೊದು" "ಲೈ ಮನೆಯವಳೆ, ಓದೆ" ಅಂಥ, ಬ್ಯುಸಿ ಅಂಥಳೊ; ಒದ್ತಾ ಇದೀನಿ ಅಂಥಳೊ; ಅಥವ ನಾಳೆ ನೋಡಿಕೊಳ್ಳೋಣ ಅಂಥಾಳೊ ಗೊತ್ತಿಲ್ಲ.

ಮದುವೆ ಬಗ್ಗೆ ಬರೆಯೋಣವೋ ಅಥವಾ ಮದುವೆಯ ನಂತರದ ಕಥೆ ಬರೆಯೋಣವೋ ಅಂದರೆ ಮದುವೆ ನಂತರದ್ದೆ ಮಜಾ...
ಮದುವೆಗೆ ಮುಂಚೆ ನನ್ನ ಮನೇಲಿ ನಾನು ಮತ್ತು ಅವಳ ಮನೇಲಿ ಅವಳು, ಸಿಗುವ ಸಂಜೆಗಳಲ್ಲಿ ಜಗಳಕ್ಕೆ ಯಾವತ್ತೂ ರಜೆ ಕೊಡ್ತಾ ಇದ್ವಿ. ಬಿಸಿ ಬಿಸಿ ಮಾತು, ಹೊರಗಡೆ ಸಿಗುವ ಬಿಸಿ ಬಿಸಿ ಊಟ,ಸಮಯ ಕಳೆಯಲು ಕಾಫಿ ಡೇ,ಕೆಲವೊಮ್ಮೆ ಸಿನಿಮಾ, ಪಾರ್ಕ್ ಹೀಗೆ ಜೀವನ ಬಹಳ ಏಕತಾನತೆಯಿಂದ ಕೂಡಿತ್ತು, ಎಲ್ಲರೊಳಗೊಬ್ಬರಂತೆ ಬೆಂಗಳೂರೆಂಬ ಮಾಯಾನಗರಿಯ ಒಡಲೊಳಗೆ ಕಳೆದು ಹೋಗಿದ್ದೆವು.
ಮದುವೆಯೊಂದು ಆಯಿತು, ಮಧುಚಂದ್ರ ಕೂಡ ಮುಗಿಯಿತು....ಒಹ್ ಸಮಯ ೧೨:೨೫.. ಇನ್ನು ಐದು ನಿಮಿಷ ಇದೆ....
ಊಟಕ್ಕೆ ಹೊರಡಲು....ಹೌದು ಸ್ವಾಮಿ ನಾವು ೧೨:೩೦ ಕ್ಕೆ ಊಟಕ್ಕೆ ಹೊರಡ್ತೀವಿ...ಟೆಕ್ಕಿಗಳು ನಾವು ಟೆಕ್ಕಿಗಳು..ಅಂದುಕೋತ...ಊಟದ ನಂತರ ಮತ್ತೆ ಸಿಗೋಣ...

(ಮುಂದುವರೆಯುವುದು......)

Rating
No votes yet