ನವಗ್ರಹ ಚಿತ್ರದ ಬಗ್ಗೆ :ವಿಮರ್ಶೆ/ಅನಿಸಿಕೆ.
ದಿನಕರ ಎರಡನೆಯ ಚಿತ್ರ , ಮೊದಲ ಚಿತ್ರದ ನಂತರದ ನಿರೀಕ್ಷೆನ ಸುಳ್ಳು ಮಾಡಿಲ್ಲ. ಒಳ್ಳೆ ಚಿತ್ರ ಈ ನವಗ್ರಹ.
ಇದು ಅಂಗ್ಲ ಚಿತ್ರ ರೆಸೆರ್ವಿಒರ್ ಡಾಗ್ಸ್, ಹಾಗು ಹಿಂದಿ ಚಿತ್ರ ಕಾಂಟೆ ಯ ನಕಲಂತೆ ಕಾಣುತ್ತೆ. ಆದರು
ದಿನಕರರ ಪ್ರಯತ್ನ ಹಾಗು ನಟರೆಲ್ಲರ ಶ್ರಮ ವ್ಯರ್ಥ ಖಂಡಿತ ಆಗಿಲ್ಲ. ಕನ್ನಡದ ಮಟ್ಟಿಗೆ ಇದು ಹೊಸ ಪ್ರಯತ್ನ ಕೂಡ. ಈ ಚಿತ್ರದಲ್ಲಿ ಎಲ್ಲ ನಟ ನಟಿ ತುಂಬಾನೇ ಚೆನ್ನಾಗಿ ನಟಿಸಿದ್ದಾರೆ. ಅದರಲ್ಲೂ ಆ ಕೀರ್ತಿ ರಾಜ್ ಮಗ ವಂಡರ್ ಬಾಯ್. ಅವನು ಕನ್ನಡ ಚಿತ್ರ ರಂಗದ ಮುಂದಿನ ಸ್ಟಾರ್ ಆಗುವುದರಲ್ಲಿ ಅನುಮಾನವೇ ಇಲ್ಲ , ಸರಿಯಾದ ಅವಕಾಶ ಸಿಕ್ಕರೆ , ಸಿಗಲಿ ಅಂತ ನನ್ನ ಆಸೆ.
ಇನ್ನು ದಿನಕರರ ಬಗ್ಗೆ ನನಗೆ ಅಭಿಮಾನವಿದೆ ಯಾಕಂದೆರೆ? ನಾನು ರೇಡಿಯೋದಲ್ಲಿ ಕಣ್ಣ್ ಕಣ್ಣ ಸಲುಗೆ, ಹಾಡು ಕೇಳಿದಾಗಲೆಲ್ಲ ಬಹುಶ ಇದು ದರ್ಶನ್ ಮತ್ತು ಶರ್ಮಿಲ ನಡುವಿನ ದುಎತ್ ಅನ್ಕೊಂಡಿದ್ದೆ. ಆದ್ರೆ ಎಲ್ಲರ ನಿರೀಕ್ಷೆ,ಅನಿಸಿಕೆ ಸುಳ್ಳು ಮಾಡಿ , ಕೀರ್ತಿ ರಾಜ್ ಮಗನಿಗೆ ಈ ಹಾಡಿನಲ್ಲಿ ಅವಕಾಶ ಮಾಡಿಕೊಟ್ಟು , ಬಹು ತಾರಾಗಣದ ಚಿತ್ರದಲ್ಲಿ ನಿರ್ಮಾಕರ ಸಂಬಂದಿಗಳೇ ಇಲ್ಲಿ, ಹೀಗೆ ನಟಿಸಬೇಕು ಎನ್ನುವ ಸಿದ್ದ ಸಂಪ್ರದಾಯ ಮುರಿದಿದ್ದರ , ಹಾಗು ತನ್ಮೂಲಕ ಕೀರ್ತಿ ರಾಜ್ ಮಗನಿಗೆ ಅವಕಾಶಗಳ ಹೊಳೆ ಹರಿಯೋ ಹಾಗೆ ಮಾಡಿದ್ದಿರ . ಆ ಕೀರ್ತಿ ರಾಜ್ ಮಗ ಚಿತ್ರದ ಅನರ್ಘ್ಯ ಶೋಧ.
ಇನ್ನು ಸಂಗೀತ , ತಿರು ತಿರುಗಿ ಗುನುಗುವಂತೆ ಮಾಡುತ್ತದೆ. ಸಾಹಸ ರೋಮಂಚನವನ್ನುಂಟು ಮಾಡುತ್ತದೆ. ಅದರಲ್ಲೂ ಕ್ಲೈಮ್ಯಾಕ್ಸ್ ತುದಿಗಾಲಲ್ಲಿ ನಿಲ್ಲುವಂತೆ ಮಾಡುವಲ್ಲಿ ಯಶಶ್ವಿಯಾಗಿದೆ .
ಒಟ್ಟಿನಲ್ಲಿ ಸಂಪೂರ್ಣ ಮನೋರಂಜನ ಚಿತ್ರ.
Comments
ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
In reply to ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ. by vinayudupa
ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
In reply to ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ. by vinayudupa
ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
In reply to ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ. by venkatb83
ಉ: ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.