ಇಬ್ಬರು ಸನ್ಯಾಸಿಗಳು ಮತ್ತು ಒಬ್ಬ ತರುಣಿ

ಇಬ್ಬರು ಸನ್ಯಾಸಿಗಳು ಮತ್ತು ಒಬ್ಬ ತರುಣಿ

ಬರಹ

ಇಬ್ಬರು ಸನ್ಯಾಸಿಗಳು ಒಂದು ತುಂಬಿ ಹರಿಯುತ್ತಿರುವ ಹೊಳೆಯನ್ನು ದಾಟುತ್ತಿರುವಾಗ ಒಬ್ಬ ಹರೆಯದ ಸುಂದರ ತರುಣಿ ಹೊಳೆಯನ್ನು ದಾಟಲು ಅವರ ಸಹಾಯ ಕೇಳಿದಳು. ಅವರಲ್ಲೊಬ್ಬ ಸಹಾಯ ಮಾಡಲು ಒಪ್ಪಿ ಅವಳನ್ನು ಹೊತ್ತುಕೊಂಡು ನದಿಯನ್ನು ದಾಟಿಸಿ ಅವಳನ್ನು ಇಳಿಸಿದ.
ಅವರು ಮುಂದೆ ಹೊರಟರು . ಎರಡನೇ ಸನ್ಯಾಸಿ ಏನನ್ನೋ ಯೋಚಿಸುತ್ತಿದ್ದ. ಹೀಗಾಗಿ ಅವರು ಮೌನವಾಗಿ ಸ್ವಲ್ಪ ದೂರ ಸಾಗಿದ ನಂತರ ಎರಡನೇ ಸನ್ಯಾಸಿ ಮೊದಲನೇಯವನನ್ನು ಕೇಳಿದ. - "ನೀನು ಮಾಡಿದ್ದು ತಪ್ಪಲ್ಲವೆ? " . ಮೊದಲನೇಯವನಿಗೆ ಪ್ರಶ್ನೆ ಅರ್ಥವಾಗದೆ "ಯಾವದು? " ಎಂದ.
ಎರಡನೇಯವನು - " ಅದೇ ನಾವು ಸನ್ಯಾಸಿಗಳು ಸ್ತ್ರೀಂiಯನ್ನು ಸ್ಪರ್ಶಿಸಬಾರದಲ್ಲವೆ? ನೀನು ಅವಳನ್ನು ಹೊತ್ತುಕೊಂಡೆ? ! "
ಅದಕ್ಕೆ ಮೊದಲನೇಯವನು ಹೇಳಿದ- " ನಾನು ಅವಳನ್ನು ಹೊತ್ತುಕೊಂಡದ್ದು ನಿಜ; ಆದರೆ ನಾನು ಅವಳನ್ನು ಅಲ್ಲೇ ಇಳಿಸಿದೆ, ನೀನು ಇನ್ನೂ ಅವಳನ್ನು ಮನಸ್ಸಿನಲ್ಲಿ ಹೊತ್ತುಕೊಂಡಿದ್ದೀಯ! ".