ಬೋಧನೆಯ ವರಸೆ - ಮತ್ತು ಇತರ ಕಥೆಗಳು

ಬೋಧನೆಯ ವರಸೆ - ಮತ್ತು ಇತರ ಕಥೆಗಳು

ಬರಹ

ಗುರು ಸಿಯುಂಗ್ ಸಾನ್ ತನ್ನ ವಿದ್ಯಾರ್ಥಿಗಳಿಗೆ ಯಾವಾಗಲೂ ಹೇಳುತ್ತಿದ್ದ - " ನೀವು ತಿನ್ನುತ್ತಿರುವಾಗ ಕೇವಲ ತಿನ್ನಿ , ಅಷ್ಟೆ . ಪೇಪರ್ ಓದುವಾಗ ಕೇವಲ ಪೇಪರ್ ಓದಿ, ಅಷ್ಟೆ . ನೀವು ಏನು ಮಾಡುತ್ತೀರೋ ಅದಕ್ಕಿಂತ ಹೊರತಾದದ್ದನ್ನು ಮಾಡಬೇಡಿ , ಎರಡೆರಡು ಕಡೆ ಗಮನ ಹರಿಸಬೇಡಿ . " ಒಂದು ದಿನ ಗುರು ಏನನ್ನೋ ತಿನ್ನುತ್ತ ಪೇಪರ್ ಓದುತ್ತಿರುವದನ್ನು ನೋಡಿದ ಶಿಷ್ಯ ಕೇಳಿದ -" ನಿಮ್ಮ ಬೋಧನೆಗೆ ವ್ಯತಿರಿಕ್ತವಾದದ್ದಲ್ಲವೇ ಇದು ? " ಗುರು ಉತ್ತರಿಸಿದ - " ನೀನು ತಿನ್ನುತ್ತ ಪೇಪರ್ ಓದುತ್ತ ಇರುವಾಗ , ಕೇವಲ ತಿನ್ನುತ್ತ ಪೇಪರ್ ಓದು ಅಷ್ಟೇ ".

ಗಮನಿಸಿ:

ನಿನ್ನೆ ತಾನೆ ಐದು ಒಳ್ಳೆಯ ಝೆನ್ ಕಥೆಗಳನ್ನು ಝೆನ್ ಕಥಾಮಾಲಿಕೆಯಲ್ಲಿ ಹಾಕಿದ್ದೆ. ನೀವು ಓದಿರದಿದ್ದರೆ ಈಗ ಓದಬಹುದು.
೧. ಇಬ್ಬರು ಸನ್ಯಾಸಿಗಳು ಮತ್ತು ಒಬ್ಬ ತರುಣಿ 

೨. ತಟ್ಟೆಯ ಮಾತು.

೩. ನಿತ್ಯ ಪವಾಡಗಳು 

. ಪರಿಶುದ್ಧ ಚರಿತ್ರ

೫. ಗಾಳಿ ಮತ್ತು ಧ್ವಜ