ಕಸ್ತೂರಿ, ಸುವರ್ಣೋತ್ಸವದ ಹಾದಿಯಲ್ಲಿ.!!
ಕಸ್ತೂರಿ, ಸುವರ್ಣೋತ್ಸವದ ಹಾದಿಯಲ್ಲಿ.!!
ಕನ್ನದ ನಾಡಿನ ಹೆಮ್ಮೆಯ ಮಾಸಪತ್ರಿಕೆ ಕಸ್ತೂರಿ,
ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 50 ವರ್ಷಕ್ಕೆ ಪಾದಾರ್ಪಣೆ ಮಾದುತ್ತಿದೆ. ಈ ಸುದೀರ್ಘ ಸೇವೆ ಸಲ್ಲಿಸಿ, ಕರ್ನಾಟಕದ ನಾಡು ನುಡಿಗೆ ಸೇವೆ ಮಾಡಿರುವ ಪತ್ರಿಕೆ ಶುರುವಾದದ್ದು 1956 ನೇ ವರ್ಷ ಸೆಪ್ಟೆಂಬರ್ ತಿಂಗಳು. ಲೋಕಶಿಕ್ಷಣ ಸಂಸ್ಥೆ ಯ ಹೆಮ್ಮೆಯ ಕೂಸಾದ ಕಸ್ತೂರಿ,ಯನ್ನು ಎತ್ತಿ ಬೆಳೆಸಿದವರು, ಶ್ರಿ. ಮೊಹರೆ ಹನುಮಂತರಾಯರು, ರಂಗನಾಥ ದಿವಾಕರರು, ಮತ್ತು ಪ.ವೆಂ. ಆಚಾರ್ಯ ಅವರು. ಪ.ವೆಂ.ಆಚಾರ್ಯ ಅವರು ದೀರ್ಘ ಕಾಲ ಕಸ್ತೂರಿಯ ಸಂಪಾದಕರಾಗಿ ಅದನ್ನು ಪ್ರಭುದ್ದ ಮಾನಕ್ಕೆ ಕೊಂಡೊಯ್ದರು.ಪ್ರಾರಂಭದ ಸಂಚಿಕೆಯಲ್ಲಿ, 'ನಮ್ಮ-ನಿಮ್ಮೊಳಗೆ' ಎಂಬ ಶೀರ್ಷಿಕೆ ಯಲ್ಲಿ ಪ್ರಕಟವಾದ ವೈಚಾರಿಕ ಲೇಖನಗಳನ್ನು ಹಿರಿಯಪತ್ರಕರ್ತ, ಮತ್ತು ಸಂಸ್ಥಾಪಕ ಮೊಹರೆ ಹನುಮಂತ ರಾಯರೇ ಬರಿಯುತಿದ್ದರು.
ಕಸ್ತೂರಿಯ ಕಂಪು,ನಮ್ಮ ಜೀವನದ ಆಶಾದಾಯಕ ಅಂಶಗಳಬಗ್ಗೆ ಗಮನ ಹೊರಳಿಸಿ ಜೀವನದ ಸೌಂಧರ್ಯ ವನ್ನು ಉಣಬಡಿಸುವಲ್ಲಿ ಸಮರ್ಥವಾಗಿ ಕೆಲಸಮಾಡುತ್ತಿದೆ.
ಮುಂದೆಯೂ ಈ ಗುರಿಗಳನ್ನು ಸಾಧಿಸಲು ಕಂಕಣ ತೊಟ್ಟಿದೆ.