ಎಚ್ಚರ -ಝೆನ್ ಕಥೆ

ಎಚ್ಚರ -ಝೆನ್ ಕಥೆ

ಬರಹ

ಜು‌ಇಗನ್ ಎಂಬ ಒಬ್ಬ ಭಿಕ್ಷು ಪ್ರತಿನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮತ್ತೆಲ್ಲಕ್ಕಿಂತ ಮುಂಚೆ ತನಗೆ ತಾನೇ ಪ್ರಶ್ನೋತ್ತರ ನಡೆಸಿಕೊಳ್ಳುತ್ತಿದ್ದ . ಇಬ್ಬರ ಮಧ್ಯೆ ಅನ್ನುವ ಹಾಗೆ ಪ್ರಶ್ನೆ ಕೇಳಿಕೊಂಡು ಅದಕ್ಕೆ ತಾನೇ ಉತ್ತರ ಕೊಟ್ಟುಕೊಳ್ಳುತ್ತಿದ್ದ. ಹೀಗೆ-
'ಗುರುವೇ , ಇದ್ದೀರಿ ಅಲ್ಲವೇ ?'
'ಹೌದು ಸ್ವಾಮಿ , ಇದ್ದೇನೆ.'
'ಸರಿ , ಜಾಗೃತನಾಗಿರಬೇಕು, ಕಂಡೆಯ ?'
'ಆಗಲಿ ಸ್ವಾಮಿ , ಜಾಗೃತನಾಗಿರುತ್ತೇನೆ.'
'ಸದಾ ಹುಷಾರಾಗಿ ನೋಡಿಕೊಳ್ಳುತ್ತಿರಬೇಕು, ಯಾರೂ ವಂಚಿಸದ ಹಾಗೆ '
'ಇಲ್ಲ, ಇಲ್ಲ. ಅಂಥದಕ್ಕೆಲ್ಲ ಅವಕಾಶ ಕೊಡುವದೇ ಇಲ್ಲ. ಎಚ್ಚರವಾಗಿರುತ್ತೇನೆ, ಸ್ವಾಮಿ'.