ವಿಪರ್ಯಾಸ

ವಿಪರ್ಯಾಸ

1

ದಾರಾಸಿಂಘ್ ಪ್ಯಾರಾಚೂಟ್ ಪರಿಣಿತ ಟ್ರೈನರ್. ಆ ದಿನ ಆತ ಇದಿಲ್ಲದೇ ಹಾರಿದರೆ ಎಷ್ಟು ಅಪಾಯ ಎಂಬುದನ್ನು ವಿವರಿಸಲು ತಾನೇ ಅಷ್ಟು ದೊಡ್ಡ ಬೆಟ್ಟದ ನೆತ್ತಿಯಿಂದ ಕೆಳಗೆ ಹಾರಿದ. ಮಾರನೆಯ ದಿನದಿಂದ ಹೊಸ ಟ್ರೈನರ್ ದಾರಸಿಂಘನ ಉದಾಹರಣೆ ಕೊಡುತ್ತಿದ್ದ.

2

ಜೀವ ಪ್ರೀತಿಯಲ್ಲಿ ಸೋಲು ಕಂಡಿದ್ದ. ಆತ ಪ್ರೀತಿವ್ಯಕ್ತ ಪಡಿಸಿ ಪಡಿಸಿ ಸೋಲುತ್ತಿದ್ದ. ಕೊನೆಗೆ ಬೇಸತ್ತು ಮದುವೆಯಾದ.

3

ಕಡಿದಾದ ಬೆಟ್ಟದ ನೆತ್ತಿಯಲ್ಲಿ ನಿಂತಿದ್ದ ಆತ ಜೀವನದಲ್ಲಿ ಜಿಗುಪ್ಸೆಹೊಂದಿದ್ದ. ಜೀವನದಲ್ಲಿ ಇನ್ನೇನೂ ಉಳಿದಿಲ್ಲವೆಂದುಕೊಂಡ ನೀಳವಾದ ಉಸಿರು ತೆಗೆದುಕೊಂಡು ಅಲ್ಲಿಂದ ಕೆಳಗೆ ಹಾರಿದ. ಎಚ್ಚರಾಗಿ ಹಾಸಿಗೆಯಿಂದ ಎದ್ದು ಕುಳಿತ.

Rating
No votes yet