ನಶ್ವರತೆ-ಝೆನ್ ಕಥೆ
ಬರಹ
ಗುರುವಿನ ಹತ್ತಿರ ಒಂದು ಬೆಲೆಬಾಳುವ ಪಿಂಗಾಣಿ ಬಟ್ಟಲು ಇತ್ತು . ಶಿಷ್ಯ ಇಕ್ಯೂ ಒಂದು ದಿನ ಅಕಸ್ಮಾತ್ತಾಗಿ ಒಡೆದುಬಿಟ್ಟ . ಗುರು ಅತ್ತಲೇ ಬರುವದು ಕಂಡಿತು . ಬಟ್ಟಲಿನ ಚೂರುಗಳನ್ನು ಮರೆ ಮಾಡಿಟ್ಟ .
ಗುರು ಕಾಣಿಸಿಕೊಂಡ ಕೂಡಲೇ ಅವನನ್ನು ಪ್ರಶ್ನಿಸಿದ. "ಗುರುಗಳೇ , ಯಾವುದೇ ವಸ್ತು ನಾಶವಾಗುವದು ಏತಕ್ಕೆ ?"
ಗುರು ಹೇಳಿದ - " ಜಗತ್ತಿನಲ್ಲಿ ಎಲ್ಲವೂ ನಶ್ವರವಾದದ್ದು . ಪ್ರತಿ ವಸ್ತುವಿಗೂ ಅದರ ಸಮಯ ತುಂಬಿ ಬಂದಾಗ ನಾಶವಾಗುತ್ತದೆ" .
ಶಿಷ್ಯ ಒಡೆದ ಬಟ್ಟಲಿನ ಚೂರುಗಳನ್ನು ತೋರಿಸಿ ಹೇಳಿದ - "ಗುರುಗಳೇ , ನಿಮ್ಮ ಬಟ್ಟಲಿಗೆ ಸಮಯ ತುಂಬಿ ಬಂದಿತ್ತು" .