ಮನುಷ್ಯನ ಖಾಸಗಿ ಸಂಗತಿಗಳು.( ಚಿಂತನೆ)

ಮನುಷ್ಯನ ಖಾಸಗಿ ಸಂಗತಿಗಳು.( ಚಿಂತನೆ)

ಒಬ್ಬ ಮನುಷ್ಯನ ವ್ಯಕ್ತಿ ವಿಶೇಷದಲ್ಲಿ ಅವನು ಯಾರಿಗೂ ಹೇಳಿಕೊಂಡಿರದ ಹೇಳಬಾರದ ಗುಟ್ಟುಗಳು , ಖಾಸಗಿ ಸಂಗತಿಗಳು ಇರುತ್ತವೆ. . ಈ ಗುಟ್ಟು ಖಾಸಗಿ ಸಂಗತಿಗಳೇ ಅವನ ವ್ಯಕ್ತಿತ್ವ, ಚಹರೆ ಎಲ್ಲವೂ . ಮನೋವಿಜ್ಞಾನಿ ಎರಿಕ್‍ಸನ್ ಪ್ರಕಾರ ಒಬ್ಬ ಮನುಷ್ಯ ವಯಸ್ಸಿಗೆ ಬಂದ ಪ್ರಬುದ್ಧನಾದ ಅಂದರೆ ತನ್ನ ತಪ್ಪುಗಳನ್ನು ಗುಟ್ಟುಗಳನ್ನು ತನ್ನಲ್ಲೇ ಇಟ್ಟುಕೊಂಡು ಆತ್ಮ ವಿಮರ್ಷೆ ಮಾಡಿಕೊಂಡು ಬೆಳೆಯಬಲ್ಲ ಹಂತಕ್ಕೆ ಬಂದ ಎಂದೇ ಅರ್ಥ .ಅದಕ್ಕೇ ಹೇಳುವದು ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಹತ್ತಿರ ಯಾವುದೇ ಸಂದರ್ಭದಲ್ಲೂ confess ಮಾಡಲಾರ , ಮಾಡಬಾರದು. ಆತ್ಮ ನಿವೇದನೆ ಏನಿದ್ದರೂ ಭಗವಂತನ ಹತ್ತಿರ ಮಾತ್ರ. ( ಎಪ್ರಿಲ್ ೨೦೦೬ ಮಯೂರದಿಂದ )

Rating
No votes yet

Comments