ಜೀವನ ಕಲೆ ಮತ್ತು ಜೀವನ ಕ್ರಿಯೆ ('ಮಯೂರ' ದ ಓದು)

ಜೀವನ ಕಲೆ ಮತ್ತು ಜೀವನ ಕ್ರಿಯೆ ('ಮಯೂರ' ದ ಓದು)

ಜೀವನವೇ ಒಂದು ಕಲೆ . ಅದನ್ನು ಜೀವಿಸಬೇಕು ಅಷ್ಟೆ. ಅದನ್ನು ಮೈದಾನದಲ್ಲಿ ಆಟಕ್ಕೆ ತರಬೇತಿ ಕೊಡುವ ಹಾಗೆ ಹೇಳಿ ಕೊಡಲು ಸಾಧ್ಯವೇ?

ಈಗ ಬೇಕಾಗಿರುವದು ಜೀವನಕಲೆ ಅಲ್ಲ , ಜೀವನ ಕ್ರಿಯೆಯಾಗಬೇಕು. ಕ್ರಿಯೇಟಿವ್ ಆಗಬೇಕು ಅದು ಆಗ ತನ್ನಷ್ಟಕ್ಕೆ ಕಲೆಯಾಗುತ್ತದೆ. ವಿದ್ಯಾರ್ಥಿ ನೆಮ್ಮದಿಯಲ್ಲಿ ಪ್ರೀತಿಯಲ್ಲಿ ಓದಲು ಸಾಧ್ಯವಾಗಿ ಈ ಓದು ನನ್ನ ಜೀವನ ಎಂದು ಅವನಿಗೆ ಅನ್ನಿಸುವದಾದರೆ , ಪ್ರೇಮಿಗಳು ನಿರುಮ್ಮಳವಾಗಿ ಪ್ರೇಮಿಸಲು ಸಾಧ್ಯವಾಗಿ ಜೀವನ-ಪಾವನ ಎಂಬ ಕ್ಷಣಗಳು ಮೂಡುವದಾದರೆ , ರೈತ ಬೆವರು ಸುರಿಸಿ ದುಡಿದದ್ದಕ್ಕೆ ತಕ್ಕ ಆದಾಯ ಅವನಿಗೆ ದೊರೆತು ಅವನ ಜೀವನ ನಿರಾತಂಕದ ಪ್ರಾಣಾಯಾಮವನ್ನು ( ಪ್ರಾಣಾಯಾಮವೆಂದರೆ ಕ್ರಮಬದ್ಧ ಉಸಿರಾಟ ಅಷ್ಟೇ!) ಅನುಸರಿಸಲು ಸಾಧ್ಯವಾದರೆ ಅರವತ್ತು ದಾಟಿದ ಮನುಷ್ಯನೂ ಒಂದು ಮಗುವನ್ನು ನೋಡಿದಾಗ ಮುದ್ದಿಸಿ , ನಕ್ಕು ನಲಿಯಲು ಸಾಧ್ಯವಾದರೆ ಅದನ್ನು ಜೀವನಕಲೆ ಎನ್ನಲಾಗದೇನು ?

ಈ ವಿಚಾರ ಕೂಡ ಏಪ್ರಿಲ್ ೨೦೦೬ ರ ಮಯೂರದಿಂದಲೇ .

ಮತ್ತು ಇತರ ವಿಶೇಷಗಳು .

೧. ಈ ಮಯೂರದಲ್ಲಿ ಗೋವಿನ ಹಾಡನ್ನು ಮತ್ತೆ ಮುದ್ರಿಸಿದ್ದಾರೆ. ಕತ್ತರಿಸಿಟ್ಟುಕೊಳ್ಳಿ , ನಿಮ್ಮ ಮಕ್ಕಳಿಗೆ ಹೇಳಿ. ಗೋವಿನ ಹಾಡು ಬಗ್ಗೆ ಪಿ.ಲಂಕೇಶ್ ಮತ್ತು ಕೆ.ವಿ.ಸುಬ್ಬಣ್ಣ ಅವರ ಲೇಖನಗಳ ಸಂಗ್ರಹಾನುವಾದ ಇಲ್ಲಿ ಅಥವಾ ಸಂಪದದಲ್ಲಿ ಒಂದು ದಿನ ಪೋಸ್ಟ್ ಮಾಡುವೆ ನಿರೀಕ್ಷಿಸಿ.

೨. ಅಮೆರಿಕದಲ್ಲಿ ಎಂಜಿನೀಯರಿಂಗ ಪ್ರೊಫ಼ೆಸರ್ ಆಗಿರುವ ಶಾಂತಾರಾಮ ಸೋಮಯಾಜಿಯವರ ಕೃತಿ 'ವಾಸ್ತು ಶಾಸ್ತ್ರ, ವಿಜ್ಞಾನ , ವಿನ್ಯಾಸ' ಎಂಬ ಪುಸ್ತಕದ ಬಗ್ಗೆ ಕುತೂಹಲ ಹುಟ್ಟಿಸುವ ಹಾಗೆ ತೋರುಬೆರಳು ಅಂಕಣದಲ್ಲಿ ಬರೆದಿದ್ದಾರೆ . ಅಂಗಡಿಯಲ್ಲಿ ಕೇಳಿ ನೋಡಬಹುದು. ಹಾಗೇ ಬರಗೂರರಿಂದ ಶಬರಿ ಎಂಬ ಕಾದಂಬರಿ ಬಂದಿದೆ.

೩. ಎಂದಿನಂತೆ ಒಂದು ಇಂಗ್ಲೀಷ್ ಕವನ ಮತ್ತು ಕನ್ನಡ ಕವನ , ಜಾಗತಿಕ ಮಟ್ಟದ ಚಿತ್ರವೊಂದರ ಕುರಿತ ವ್ಯಾಖ್ಯಾನಗಳಿವೆ. , ಇಂಗೆಲ್ಸ್ ಲಾರ ಪುಸ್ತಕಗಳ ಬಗ್ಗೆ ಒಳ್ಳೆಯ ಮಾತು ಇದೆ. ಯಥಾ ಪ್ರಕಾರ ಅನೇಕ ಪದ್ಯಗಳು ಇವೆ.

ನಿಜಕ್ಕೂ ಮಯೂರ ಮಾಸ ಪತ್ರಿಕೆ ಬರಿಯ ಏಳು ರೂಪಾಯಿಗೆ ಇಷ್ಟೆಲ್ಲ ಸಾಹಿತ್ಯ ಮತ್ತು ಮಾಹಿತಿ ಕೊಡುವದು ಆಶ್ಚರ್ಯ.

ಮತ್ತು ಕೊನೆಯದಾಗಿ ನನ್ನ ಬ್ಲಾಗಿಗೆ ಈಗಾಗಲೇ ಜಗತ್ತಿನಾದ್ಯಂತ ಇಬ್ಬರು ಓದುಗರು ಇರುವದು ಪ್ರ್‍ಒತ್ಸಾಹದಾಯಕವಾಗಿದೆ! ಸದರಿ ಓದುಗರಿಗೆ ಧನ್ಯವಾದಗಳು.

Rating
No votes yet