ವಕ್ರತುಂಡೋಕ್ತಿ-ವಿಜಯಕರ್ನಾಟಕದಿಂದ ಆಯ್ದದ್ದು

ವಕ್ರತುಂಡೋಕ್ತಿ-ವಿಜಯಕರ್ನಾಟಕದಿಂದ ಆಯ್ದದ್ದು

ವಕ್ರತುಂಡೋಕ್ತಿ

ಆಲಸ್ಯವೇ ನಮ್ಮ ದೊಡ್ಡ ವೈರಿ ಎಂದರು ನೆಹರೂ, ನಮ್ಮ ವೈರಿಯನ್ನು ಪ್ರೀತಿಸಬೇಕೆಂದು ಗಾಂಧಿ. ಆದ್ದರಿಂದ ಆಲಸಿಯಾಗಿರುವುದು ತಪ್ಪಲ್ಲ.

ಜೀವನದಲ್ಲಿ ಹಣಕ್ಕಿಂತ ಮುಖ್ಯವಾದದ್ದು ಪ್ರೀತಿ, ಆದರೆ ಎಲ್ಲರೂ ಹಣವನ್ನೇ ಪ್ರೀತಿಸುತ್ತಾರೆ.

ಕಷ್ಟದಲ್ಲಿರುವವನಿಗೆ ಸಹಾಯ ಮಾಡಿದರೆ ಆತ ನೆನಪಿನಲ್ಲಿಟ್ಟುಕೊಳ್ಳುತ್ತಾನೆ ಹಾಗೂ ಮುಂದೊಮ್ಮೆ ಕಷ್ಟ ಬಂದಾಗ ಪುನಃ ನಿಮ್ಮಲ್ಲಿಗೆ ಬರುತ್ತಾನೆ.

ಆಲ್ಕೋಹಾಲು ಸೇವನೆಯಿಂದ ಯಾವ ಸಮಸ್ಯೆಯೂ ಪರಿಹಾರವಾಗುವುದಿಲ್ಲ. ಈ ಮಾತು ಹಾಲಿಗೂ ಅನ್ವಯ.

ಗುಂಪಿನಲ್ಲಿದ್ದಾಗ ಎಷ್ಟು ಜನ ನಿಮ್ಮನ್ನು ನೋಡುತ್ತಾರೆಂಬುದು ನಿಮ್ಮ ತಿಕ್ಕಲು ನಡತೆಯನ್ನು ಆಧರಿಸಿರುತ್ತದೆ.

ಕೆಲವು ನೋವು ಫಿಸಿಕಲ್, ಇನ್ನು ಕೆಲವು ಮೆಂಟಲ್, ಇವೆರಡೂ ಇರುವ ನೋವು ಡೆಂಟಲ್.

ಮೂರ್ಖರಿಗೂ ಜೀವಿಸುವ ಹಕ್ಕಿದೆ, ಕಾರಣ ಅದು ತಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸುತ್ತಾರೆ.

ದುಡ್ಡನ್ನು ಎಣಿಸುವವರು ಶ್ರೀಮಂತರಲ್ಲ. ಪುಸ್ತಕ ಹಿಡಿದಿರುವವರು ಜ್ನಾನಿಗಳಲ್ಲ. ಕ್ಯಾಶಿಯರ್, ಗ್ರಂಥಪಾಲಕರನ್ನು ನೋಡಿದರೆ ಗೊತ್ತಾದೀತು.

ಸೂರ್ಯನ ಸುತ್ತ ಕೇವಲ ಒಂಬತ್ತು ಗ್ರಹಗಳು ಸುತ್ತುತ್ತವೆ. ಆದರೆ ಸೂರ್ಯನಿಗಿಂತಲೂ ಹೆಚ್ಚು ಶಕ್ತಿ ಒಂದು ಸುಂದರ ಹೆಣ್ಣಿಗಿರುತ್ತದೆ.

ಸಮಾಜ ಸೇವಾ ಕ್ಷೇತ್ರ ವಿಶಾಲ ಸಾಗರವಿದ್ದಂತೆ. ಉಪ್ಪುನೀರು ಕುಡಿಯುವ ಸಂದರ್ಭಗಳೇ ಹೆಚ್ಚು.

ಒಂದು ಹಿಟ್ ಸಿನಿಮಾ ಎಲ್ಲರಿಗೂ ಇಷ್ಟ ಆಗಬೇಕೆಂದೇನೂ ಇಲ್ಲ.

ವಿಶ್ವಕೋಶದಲ್ಲಿ ಎಲ್ಲ ಜ್ನಾನವೂ ಇರುತ್ತವೆ. ಓದದಿದ್ದರೆ ಅವು ಅಲ್ಲಿಯೇ ಇರುತ್ತವೆ.

ಕೆಲವರು ದಾಂಪತ್ಯದ ಬಗ್ಗೆ ತೀರಾ ಕಾಳಜಿವಹಿಸುತ್ತಾರೆ. ಹೆಂಡತಿಗಿಂತ ಅತ್ತೆಯನ್ನು ಹೆಚ್ಚಾಗಿ ಪ್ರೀತಿಸುತ್ತಾರೆ.

ಏನೂ ಕೆಲಸವಿಲ್ಲದೆ ಸುಮ್ಮನೆ ಕುಳಿತವನ ಮುಂದೆ ಕತ್ತರಿಯನ್ನು ಇಡಬಾರದು.

ಅಂತಾರಾಷ್ಟ್ರ್‍ಈಯ ಕರೆಗಳು ಸ್ಪಷ್ಟವಾಗಿ ಕೇಳಿಸುತ್ತವೆ. ಆದರೂ ಎಲ್ಲರೂ ಗಟ್ಟಿಯಾಗಿಯೇ ಮಾತಾಡುತ್ತಾರೆ.

ಕಲ್ಲಿನ ಮನೆಯಲ್ಲಿ ವಾಸಿಸುವವರು ಗಾಜನ್ನು ಎಸೆಯಬಾರದು.

ಬೆಳ್ಳಗಿರುವುದೆಲ್ಲಾ ಹಾಲಲ್ಲ, ಕಪ್ಪಗಿರುವುದೆಲ್ಲಾ ಕೂದಲೂ ಅಲ್ಲ.

ಪ್ರೇಕ್ಷಕರ ಒತ್ತಾಯದಿಂದ ಎರಡನೇ ಸಲ ಹಾಡಿದ ಹಾಡು ಮೊದಲ ಸಲ ಹಾಡಿದ್ದಕ್ಕಿಂತ ಚೆನ್ನಾಗಿರುವುದಿಲ್ಲ.

ಬೇಕಾದರೆ ತರ್ಕಿಸಿ ನೋಡಿ. ಜಗತ್ತಿನಲ್ಲಿ ಅವಾಂತರ-ಅವಘಡಗಳೆಲ್ಲಾ ಸಂಭವಿಸುತ್ತಿರುವುದು ದಿನದಲ್ಲಿ ಕಡಿಮೆ ಸಮಯ ನಿದ್ರಿಸುವುದರಿಂದಲೇ.

ಮುಂದುವರಿದ ರಾಷ್ಟ್ರ್‍ಅಗಳಲ್ಲಿ ಮಹಾತ್ಮರೆಂದಿನೆಸಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಮಹಾತ್ಮನೆನೆಸಿಕೊಳ್ಳಲು ಮಾಡಬೇಕಾದ ಕೆಲಸ ಅಲ್ಲಿರುವುದಿಲ್ಲ. - (ವಿ.ಕ. - ೨೮-೬-೦೫)

ಗಂಡಸರು ಮದುವೆಗಿಂತ ಮುಂಚೆ ಹುಡುಗಿಯ ಕೈ ಹಿಡಿಯುತ್ತಾರೆ ಪ್ರೀತಿಗಾಗಿ.
ಅನಂತರ ಹಿಡಿಯುತ್ತಾರೆ ಆತ್ಮರಕ್ಷಣೆಗಾಗಿ. (ವಿ.ಕ. - ೦೩-೦೭-೨೦೦೫)

ಜಗಳಗಂಟಿ ಹೆಂಡತಿಯೆಂದರೆ ಧೋ ಎಂದು ಸುರಿಯುವ ಮಳೆಯಲ್ಲಿ ತೆರೆದ ನಲ್ಲಿ! (ವಿ.ಕ.೧೦-೭-೨೦೦೫)

ಗಂಡ ಹೆಂಡತಿ ಒಂದು ವಾಹನದ ಎರಡು ಟೈರ್ ಗಳಿದ್ದ ಹಾಗೆ. ಪಂಕ್ಚರ್ ಆಗುವುದೆಂದು ಕೆಲವರು ಸ್ಟೆಪ್ನಿ ಇಟ್ಟುಕೊಳ್ಳುತ್ತಾರೆ. - ವಿ.ಕ. - ೧೧-೭-೨೦೦೫

ಕುಡಿದು ಯಾಕೆ ವಾಹನ ಓಡಿಸಬಾರದೆಂದರೆ ಒಮ್ಮೆ ಡಿಕ್ಕಿಯಾದರೆ ಕುಡಿದಿದ್ದೆಲ್ಲಾ ವ್ಯರ್ಥವಾಗುತ್ತದೆ.- ವಿ.ಕ. - ೧೩-೭-೨೦೦೫

ದಿಡೀರ್ ದುಡ್ಡು ಮಾಡಬೇಕು ಅಂದ್ರೆ ಜೂಜಾಡಲು ಹೋಗಬಾರದು, ಜೂಜು ಆಡಿಸಬೇಕು. - ವಿ.ಕ.- ೧೪-೭-೨೦೦೫

ಜೀವನದಲ್ಲಿ ಮಕ್ಕಳು ತಮ್ಮ ತಂದೆ ತಾಯಿಯಿಂದ ಪಾಠ ಕಲಿಯುವುದಿಲ್ಲ. ಕಲಿತರೆ ಅವರೆಂದೂ ಮದುವೆಯಾಗುವುದಿಲ್ಲ. - ವಿ.ಕ. - ೧೫-೭-೨೦೦೫

ನಾಯಿ ನಿಜಕ್ಕೂ ಬುದ್ಧಿವಂತ ಪ್ರಾಣಿ. ಅದು ಬಾಲವನ್ನು ಮಾತ್ರ ಅಲ್ಲಾಡಿಸುತ್ತದೆ. ಮನುಷ್ಯನ ಹಾಗೆ ದೇಹವನ್ನಲ್ಲ. - ವಿ.ಕ. - ೧೭-೭-೨೦೦೫

ಊಟಕ್ಕಿಂತ ಮೊದಲು ಐಸ್ ಕ್ರೀಂ ಕೊಡುವ ಔತಣಕೂಟವೇ ಮದುವೆ. - ೧೯-೭-೨೦೦೫ - ವಿ.ಕ.

ಒಂದೇ ಹೆಂಗಸನ್ನು ಅನೇಕ ಸಲ ಪ್ರೀತಿಸುವುದೆಂದರೆ ತುರಿಕೆಯಾಗದ ಜಾಗದಲ್ಲಿ ತುರಿಸಿಕೊಂಡಂತೆ. - ೨೦-೭-೨೦೦೫ - ವಿ.ಕ.

ಸುಂದರ ತರುಣಿಯನ್ನು ನೋಡಿದಾಗ ಆಸೆಗಿಂತ ನೆನಪು ಜಾಗೃತವಾಗುವ ಸ್ಥಿತಿಯೇ ವೃದ್ದಾಪ್ಯ. - ೨೧-೭-೨೦೦೫ - ವಿ.ಕ.

ನಿಮ್ಮಲ್ಲಿರುವ ವಸ್ತುವಿಗೆ ಬೆಲೆ ಬರಬೇಕೆನಿಸಿದರೆ ಅದು ದ್ರವ್ಯ ರೂಪದಲ್ಲಿರಬೇಕು ಹಾಗೂ ಅದನ್ನು ಬಾಟಲಿಯಲ್ಲಿ ಹಾಕಿರಬೇಕು. - ೨೨-೭-೨೦೦೫ - ವಿ.ಕ.

ಹೆಂಗಸರ ವಯಸ್ಸನ್ನು ಕೇಳಬಾರದು. ಕಾರಣ ಅದು ಪ್ರತಿ ಸಂದರ್ಭ, ಸನ್ನಿವೇಶಕ್ಕೆ ಬದಲಾಗುತ್ತಿರುತ್ತದೆ. ೨೪-೭-೦೫ - ವಿ.ಕ.

ಜನಪರ ಕಾರ್ಯ ಮಾಡದೆ ಜನಪ್ರಿಯತೆ ಗಳಿಸುವವರನ್ನು ವೃತ್ತಿಪರ ಭಾಷಣಕಾರರು ಎನ್ನಬಹುದು. - ೨೫-೭-೨೦೦೫ - ವಿ.ಕ.

ಹೆಂಡತಿ ಹಾಗೂ ಹೆಂಗಸಿಗಿರುವ ವ್ಯತ್ಯಾಸ ರಾತ್ರಿ ಮತ್ತು ಹಗಲು. ೨೬-೭-೨೦೦೫ - ವಿ.ಕ.

ಜೂಜಾಡಿ ಮನೆಗೆ ಬರುವಾಗ ಸ್ವಲ್ಪವಾದರೂ ಹಣ ಉಳಿಸಬೇಕೆನಿಸಿದರೆ ಹೋಗುವಾಗ ಹೇರಳ ಹಣ ಒಯ್ಯಬೇಕು. - ೨೭-೭-೨೦೦೫ - ವಿ.ಕ.

ತನ್ನ ಉತ್ತರದಿಂದ ಕೇಳಿದ ಪ್ರಶ್ನೆಯೊಂದನ್ನೇ ಮರೆಸುವವನೇ ಉತ್ತಮ ರಾಜಕಾರಣಿ. - ೨೮-೭-೨೦೦೫ - ವಿ.ಕ.

ದೊಡ್ಡ ನಗರಗಳಲ್ಲಿ ಉಳಿದುಕೊಳ್ಳುವ ಒಂದು ಲಾಭವೆಂದರೆ ನಾವು ಹೇಳಿಕೊಳ್ಳದ ಹೊರತು ನಮ್ಮ ಕಷ್ಟಗಳು ಬೇರೆಯವರಿಗೆ ಗೊತ್ತಾಗುವುದಿಲ್ಲ. - ೨೯-೭-೨೦೦೫ - ವಿ.ಕ.

ಪುನರ್ಜನ್ಮದಲ್ಲಿ ನಂಬಿಕೆ ಇರಿಸಿಕೊಳ್ಳುವುದರ ಒಂದು ಲಾಭವೆಂದರೆ ನಮ್ಮೆಲ್ಲಾ ಆಸ್ತಿಗಳನ್ನು ನಮ್ಮ ಹೆಸರಿಗೇ ಬರೆದಿಟ್ಟು ಸಾಯಬಹುದು. - ೦೧-೦೮-೨೦೦೫ - ವಿ.ಕ.

ನಿಮಗೆ ಯಾರ ಮುಖವನ್ನಾದರೂ ನೋಡಲು ಇಷ್ಟವಿಲ್ಲ ಎಂದಾದರೆ, ಅವರಿಗೆ ಸಾಲ ನೀಡಬಹುದು. - ೦೨-೦೮-೨೦೦೫ - ಮಂಗಳವಾರ - ವಿ.ಕ.

ನಿಮ್ಮನ್ನು ಯಾರೂ ಲೆಕ್ಕಿಸುತ್ತಿಲ್ಲ ಎಂದೆನಿಸಿದರೆ ಬ್ಯಾಂಕಿಗೆ ಕಂತು ಕಟ್ಟುವುದನ್ನು ನಿಲ್ಲಿಸಬಹುದು. - ೦೪-೮-೨೦೦೫ - ಗುರುವಾರ - ವಿ.ಕ.

ಆರ್ಥಿಕ ತಜ್ನರೆಲ್ಲ ವ್ಯವಹಾರದಲ್ಲಿ ಬುದ್ಧಿವಂತರಾಗಿದ್ದರೆ, ಅವರು ಶ್ರೀಮಂತರಿಗೆ ಸಲಹೆಗಾರರಾಗುತ್ತಿರಲಿಲ್ಲ. - ೦೫-೦೮-೨೦೦೫ - ಶುಕ್ರವಾರ - ವಿ.ಕ.

ಉಪದೇಶ ಕೊಡುವುದರ ಒಂದು ಸಮಸ್ಯೆಯೆಂದರೆ ಕೊಟ್ಟಿದ್ದನ್ನು ಕೆಲವರು ತೀರಿಸುತ್ತಾರೆ. - ೦೬-೦೮-೨೦೦೫ - ಶನಿವಾರ - ವಿ.ಕ.

ರಾಜಕೀಯದಲ್ಲಿ ಯಶಸ್ಸು ಪಡೆಯಬೇಕಾದರೆ ಕೆಲವೊಮ್ಮೆ ತತ್ವ-ಸಿದ್ದಾಂತಗಳನ್ನು ಮೀರಿ ನಿಲ್ಲಬೇಕಾಗುತ್ತದೆ! - ೦೭-೦೮-೨೦೦೫ - ಭಾನುವಾರ - ವಿ.ಕ.

ಕಚೇರಿಗೆ ಬಂದರೂ ಕರ್ತವ್ಯದಲ್ಲಿರದವರನ್ನು ಸರಕಾರಿ ಉದ್ಯೋಗಿಗಳು ಎನ್ನಬಹುದು. - ೦೮-೦೮-೨೦೦೫ - ಸೋಮವಾರ - ವಿ.ಕ.

ಕೆಲವರಿಗೆ ಹಣ ಬೇಕಾಗುವುದಿಲ್ಲ. ಕಾರಣ ಅವರ ಖರ್ಚನ್ನು ಬೇರೆಯವರೇ ನೋಡಿಕ್ಕೊಳ್ಳುತ್ತಾರೆ. - ೦೯-೦೮-೨೦೦೫ - ಮಂಗಳವಾರ - ವಿ.ಕ.

ಹುಟ್ಟುವುದಕ್ಕಿಂತ ಮೊದಲು ಹಾಗೂ ಸತ್ತ ನಂತರ ತಿನ್ನುವ ಪ್ರಾಣಿಗೆ ಚಿಕನ್ ಎನ್ನಬಹುದು. - ೧೦-೦೮-೨೦೦೫ - ಬುಧವಾರ - ವಿ.ಕ.

ಕೆಲವರ ಸಮಸ್ಯೆಯೇನೆಂದರೆ ಅವರು ಚೆನ್ನಾಗಿ ಕುಡಿದಾಗ ಬಹಳ ಶಾಂತವಾಗಿ ವರ್ತಿಸುತ್ತಾರೆ. - ೧೧-೦೮-೨೦೦೫ - ಗುರುವಾರ - ವಿ.ಕ.

ಯಾವುದೇ ಆಕ್ಷೇಪವಿಲ್ಲದೇ ಸೆನ್ಸಾರ್ ಮಂಡಳಿಯವರು ಓಕೆ ಮಾಡಿದರೆ, ಅವರಿಗೆ ಆ ಸಿನಿಮಾ ಅರ್ಥವಾಗಿಲ್ಲ ಎಂದೇ ಅರ್ಥ. - ೧೨-೦೮-೨೦೦೫ - ಶುಕ್ರವಾರ - ವಿ.ಕ.

ಸಾರ್ವಜನಿಕ ಕಾರ್ಯಕ್ರಮಕ್ಕೆ ಮುಂಚೆ ಪೋಲೀಸ್ ನಾಯಿ ಬಂದು ಹೋದರೆ ಮುಖ್ಯಮಂತ್ರಿ ಬರ್‍ತಾರೆಂಬುದು ಗ್ಯಾರಂಟಿ. - ೧೩-೦೮-೨೦೦೫ - ಶನಿವಾರ - ವಿ.ಕ.

ಜನನ ನಿಯಂತ್ರಣಕ್ಕೆ(ಬರ್ತ್ ಕಂಟ್ರೋಲ್) ಕ್ಕೆ ದೊಡ್ಡ ಲಗಾಮು ಮಕ್ಕಳೇ.

ಪಾರ್ಕು ಮತ್ತು ಪಾರ್ಕಿಂಗ್ ಗೆ ಜಾಗವಿಲ್ಲದ ತಾಣವನ್ನು ಮಹಾನಗರವೆಂದು ಕರೆಯಬಹುದು.
- ಸೋಮವಾರ - ೧೫-೮-೨೦೦೫ - ವಿ.ಕ.

ಇಂಗ್ಲೀಷ್ (ಪಾಪ್, ರಾಕ್) ಹಾಡುಗಾರರಾದರೆ ಎಷ್ಟು ಜೋರಾಗಿ ಬೇಕಾದರೂ ಕಿರುಚಬಹುದು ಹಾಗೂ ತಪ್ಪು ಹಾಡಿದರೂ ಯಾರಿಗೂ ಗೊತ್ತಾಗುವುದಿಲ್ಲ. - ೧೬-೮-೨೦೦೫ - ಮಂಗಳವಾರ - ವಿ.ಕ.

ಜೀವನ ಒಂದು ಹೋರಾಟ ಎಂದು ಭಾವಿಸಿದಾಗ ಒಂದು ದಿನ ಊಟ ಬಿಟ್ಟರೆ ಉಪವಾಸ ಸತ್ಯಾಗ್ರಹ ಎಂದು ಹೇಳಬಹುದು. - ೧೭-೮-೨೦೦೫ - ಬುಧವಾರ - ವಿ.ಕ.

ನಿಮ್ಮ ಬಡತನದ ಬಗ್ಗೆ ಸಂಪೂರ್ಣ ಸಮಾಧಾನವಿದ್ದರೆ ನಿಮ್ಮಷ್ಟು ಶ್ರೀಮಂತರು ಯಾರೂ ಇಲ್ಲ. - ೧೮-೮-೨೦೦೫ - ಗುರುವಾರ - ವಿ.ಕ.

ಹೆಂಗಸರ ಜತೆ ವಾದ ಮಾಡಿ ಗೆಲ್ಲಲು ಮೂರು ಮಾರ್ಗಗಳಿವೆ. ಆದರೆ ಅವು ಆಚರಣೆಯಲ್ಲಿ ಏಕಿಲ್ಲವೆಂದರೆ ಅವು ಯಶಸ್ವಿಯಾಗುವುದಿಲ್ಲ. - ೨೦-೮-೨೦೦೫ - ಶನಿವಾರ - ವಿ.ಕ.

ನೀವು ಕುಡಿಯುವುದಿಲ್ಲ, ಸಿಗರೇಟು ಸೇದುವುದಿಲ್ಲ ಅಂದ್ರೆ ತೆರಿಗೆ ಸಂಗ್ರಹಕ್ಕೆ ನೆರವಾಗುತ್ತಿಲ್ಲ ಎಂದರ್ಥ. - ೨೫-೮-೨೦೦೫ - ಗುರುವಾರ - ವಿ.ಕ.

ಮಾದಕ ದೃಶ್ಯಗಳು ಸಿನಿಮಾಕ್ಕಿಂತ ಚೆನ್ನಾಗಿ ಕಾಣುವುದು ಪೋಸ್ಟರಿನಲ್ಲಿ - ೨೭-೮-೨೦೦೫ - ಶನಿವಾರ - ವಿ.ಕ.

ನೀವೆಷ್ಟೇ ಟಾಪ್ ವ್ಯಕ್ತಿಯೇ ಆಗಿರಬಹುದು. ಹೋಟೆಲ್ ವೇಟರ್ ನಿಮ್ಮನ್ನು ಅಳೆಯುವುದು ಟಿಪ್ಸ್ ನಿಂದಲೇ. - ೨೮-೮-೨೦೦೫ - ಭಾನುವಾರ - ವಿ.ಕ.

ಅಲ್ಲಿ ರಾಜಕಾರಣಿ ಯಾವತ್ತೂ ಹಾಜರ್, ಆದರೆ ಆತನಿಗೆ ನಿಮ್ಮ ಅಗತ್ಯವಿರಬೇಕು. - ೨೯-೮-೨೦೦೫ - ಸೋಮವಾರ - ವಿ.ಕ.

ಕೆಟ್ಟ ಊಟ ಮಾಡಿದರೆ ಹೊಟ್ಟೆ ಹಾಳು, ಹೆಂಡತಿ ಜತೆ ಜಗಳವಾಡಿದರೆ ರಾತ್ರಿ ಹಾಳು.! - ೩೦-೮-೨೦೦೫ - ಮಂಗಳವಾರ - ವಿ.ಕ.

ನೀವು ಬಹುನಿರೀಕ್ಷೆಯಿಂದ ಕಾಯುತ್ತಿರುವ ಟಪಾಲಿಗಿಂತ ವೇಗವಾಗಿ ಬರುವುದಕ್ಕೆ ಬಿಲ್ ಎನ್ನಬಹುದು. - ೩೧-೮-೨೦೦೫ - ಬುಧವಾರ - ವಿ.ಕ.

ಪತ್ರಕರ್ತ ಬೀದಿಯಲ್ಲಿ ಕುಡಿದು ತೂರಾಡುತ್ತಾ ಹೋಗುತ್ತಿದ್ದರೆ ಆತನನ್ನು ' ವಾಲ್ ಸ್ಟ್ರೀಟ್ ಜರ್ನಲಿಸ್ಟ್' ಎನ್ನಬಹುದು. - ೦೧-೯-೨೦೦೫ - ಗುರುವಾರ - ವಿ.ಕ.

ಹೊಟ್ಟೆ ಬರುವುದರ ಒಂದು ಹಾನಿಯೆಂದರೆ ಸದಾ ಹೊಟ್ಟೆ ತುಂಬಿರುವಂತೆ ಕಾಣುತ್ತದೆ. - ೦೨-೯-೨೦೦೫ - ಶುಕ್ರವಾರ - ವಿ.ಕ.

ಕೆಲವರಿಗೆ ಎಷ್ಟೇ ಓದಿದರೂ ತಲೆಗೆ ಹತ್ತುವುದಿಲ್ಲ. ಜಿರಲೆ ಎಷ್ಟೇ ಪುಸ್ತಕ ತಿಂದರೂ ಅದರ ಬುದ್ಧಿ ಬೆಳೆಯುವುದಿಲ್ಲ. - ೦೩-೯-೨೦೦೫ - ಶನಿವಾರ - ವಿ.ಕ.

ಗರ್ಲ್ ಫ್ರೆಂಡ್ಸ್ ಅಂದ್ರೆ ನೆಟ್ ವೈರಸ್ ಇದ್ದ ಹಾಗೆ. ಹೃದಯ ಪ್ರವೇಶಿಸುತ್ತಾರೆ, ಪಾಕೀಟುಗಳನ್ನು ಸ್ಕ್ಯಾನ್ ಮಾಡುತ್ತಾರೆ, ಮನಸ್ಸನ್ನು ಎಡಿಟ್ ಮಾಡ್ತಾರೆ, ಸಮಸ್ಯೆಗಳನ್ನು ಡೌನ್ ಲೋಡ್ ಮಾಡ್ತಾರೆ ಹಾಗೂ ಸಂತಸವನ್ನು ಡಿಲೀಟ್ ಮಾಡಿ ಹೋಗ್ತಾರೆ. - ೦೪-೯-೨೦೦೫ - ಭಾನುವಾರ - ವಿ.ಕ.

ಒಳ್ಳೆಯ ಕೆಲಸ ಮಾಡಬೇಕೆಂದರೆ ತಪ್ಪು ಮಾಡಲೇಬೇಕು. ಇಲ್ಲದಿದ್ದರೆ ಒಳ್ಳೆಯದು ಯಾವುದೆಂದು ಗೊತ್ತಾಗುವುದಿಲ್ಲ. - ೦೫-೯-೨೦೦೫ - ಸೋಮವಾರ - ವಿ.ಕ.

ಯಾವತ್ತೂ ಹೆಚ್ಚು ಸಾಲ ಮಾಡಬೇಕು, ಕಾರಣ ನಮ್ಮ ಯೋಗ್ಯತೆ, ಪಡೆದ ಸಾಲಕ್ಕೆ ಸಮವಾಗಿರುತ್ತದೆ. - ೦೭-೯-೨೦೦೫ - ಬುಧವಾರ - ವಿ.ಕ.

ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಜಾಗವನ್ನು ಭಾರತದ ವಿಶಾಲ ರೈಲ್ವ್ ಟಾಯ್ಲೆಟ್ ಗಳೆಂದು ಕರೆಯಬಹುದು. - ೦೯-೯-೨೦೦೫ - ಶುಕ್ರವಾರ - ವಿ.ಕ.

ಮದುವೆಯಾದ ಗಂಡಸರು ಉತ್ತಮ ಸೇಲ್ಸ್ ಮನ್ ಗಳಾಗಬಲ್ಲರು. ಕಾರಣ ಅವರಿಗೆ ಆರ್ಡರ್ ತೆಗೆದುಕೊಳ್ಳುವುದು ರೂಢಿಯಾಗಿರುತ್ತದೆ. - ೧೧-೯-೨೦೦೫ - ಭಾನುವಾರ - ವಿ.ಕ.

ನಿಮ್ಮ ಪೆನ್ನು ವಾಪಸ್ ಬರಬೇಕೆಂದರೆ ಮುಚ್ಚಳ ತೆಗೆದು ಕೊಡಬೇಕು. ಪೆನ್ ಸಿಗದಿದ್ದರೂ ಮುಚ್ಚಳವಂತೂ ಗ್ಯಾರಂಟಿ. - ೧೨-೯-೨೦೦೫ - ಸೋಮವಾರ - ವಿ.ಕ.

ವಿದ್ಯಾರ್ಥಿಗಳಿಗಿಂತ ಮುಂಚಿತವಾಗಿ ಪಠ್ಯಪುಸ್ತಕ ಓದುವವರನ್ನು ಶಿಕ್ಷಕರೆನ್ನಬಹುದು. - ೧೪-೯-೨೦೦೫ - ಬುಧವಾರ - ವಿ.ಕ.

ನಿಮ್ಮ ಮಾತಿಗೆ ಹೆಂಡತಿಯ ಗಮನ ಸೆಳೆಯಬೇಕಿದ್ದರೆ, ಅದೇ ಮಾತನ್ನು ಪಕ್ಕದಲ್ಲಿರುವ ಮತ್ತೊಬ್ಬಳ ಕಿವಿಯಲ್ಲಿ ಮೆಲ್ಲಗೆ ನುಡಿಯಬೇಕು. - ೧೫-೯-೨೦೦೫ - ಗುರುವಾರ - ವಿ.ಕ.

ಪ್ರತಿಯೊಂದರ ಬೆಲೆ ಗೊತ್ತಿದ್ದರೂ ಮೌಲ್ಯ ಅರಿಯದವನನ್ನು ಸಿನಿಕ ಎನ್ನಬಹುದು. - ೧೭-೯-೨೦೦೫ - ಶನಿವಾರ - ವಿ.ಕ.

ತವರಿನಿಂದ ಹೆಂಡತಿ ಫೋನ್ ಮಾಡಿದರೆ ಗಂಡನ ಮೇಲಿನ ಪ್ರೀತಿ ಅಲ್ಲ. ಗಂಡ ಮನೆಯಲ್ಲಿದ್ದಾನ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದಕ್ಕೆ. - ೧೮-೯-೨೦೦೫ - ಭಾನುವಾರ - ವಿ.ಕ.

ಕೆಟ್ಟು ನಿಂತ ವಾಹನವನ್ನು ಐದಾರು ಮಂದಿ ತಳ್ಳುತ್ತಿದ್ದರೆ ನಿಜವಾಗಿ ತಳ್ಳುವವರು ಎರಡೇ ಮಂದಿ. - ೨೦-೯-೨೦೦೫ - ಮಂಗಳವಾರ - ವಿ.ಕ.

ಗಂಡ ಕರೆನ್ಸಿ, ಹೆಂಡತಿ ಸಿಮ್ಮು. ಇವರಿಬ್ಬರ ರೀಚಾರ್ಜ್ ನಿಂದ ಗಂಡು ಹುಟ್ಟಿದರೆ ಇನ್ ಕಮಿಂಗ್, ಹೆಣ್ಣು ಹುಟ್ಟಿದರೆ ಔಟ್ ಗೋಯಿಂಗ್. - ೨೧-೯-೨೦೦೫ - ಬುಧವಾರ - ವಿ.ಕ.

ಹೆಂಡತಿಯಾದವಳು ಗರ್ಲ್ ಫ್ರೆಂಡ್ ಬಗ್ಗೆ ಬೇಸರಿಸಿಕೊಳ್ಳಬಾರದು. ಕಾರಣ ತನ್ನನ್ನು ಬಿಟ್ಟರೆ ಆತನಿಗಿರುವವಳು ಅವಳೊಬ್ಬಳೇ ತಾನೆ? - ೨೨-೯-೨೦೦೫ - ಗುರುವಾರ - ವಿ.ಕ.

ಹೆಂಗಸರು ಎಲೆಅಡಿಕೆ ಹಾಕುವುದು ಬಹಳ ಅಪರೂಪ. ಕಾರಣ ಅಷ್ಟೊತ್ತು ಮಾತನಾಡಲಾಗುವುದಿಲ್ಲ ಎಂಬುದೇ ಅವರ ಚಿಂತೆ. - ೨೩-೯-೨೦೦೫ - ಶುಕ್ರವಾರ - ವಿ.ಕ.

ಹಸಿವಿನಿಂದ ನರಳುತ್ತಿರುವವರ ಬಗ್ಗೆ ಪುಟಗಟ್ಟಲೆ ಬರೆದು ತಮ್ಮ ಮುಂದಿನ ಊಟದ ಬಗ್ಗೆ ಚಿಂತಿಸುವವರನ್ನು ಪತ್ರಕರ್ತರು ಎನ್ನಬಹುದು. - ೨೪-೯-೨೦೦೫ - ಶನಿವಾರ - ವಿ.ಕ.

ಮೊಬೈಲ್ ಇಟ್ಟುಕೊಂಡವರೆಲ್ಲ ಶ್ರ್‍ಈಮಂತರು ಎನ್ನುವುದಾದರೆ ಎಲ್ಲರಿಗೂ ಒಂದು ಮೊಬೈಲ್ ಕೊಟ್ಟು ಬಡತನ ನಿವಾರಿಸಬಹುದು. - ೨೬-೯-೨೦೦೫ - ಸೋಮವಾರ - ವಿ.ಕ.

ಸತ್ಯವನ್ನು ಹೇಳಲೇಬೇಕೆಂದು ನಿರ್ಧರಿಸಿದವರು ಆತ್ಮಚರಿತ್ರೆ (ಆಟೋಬಯಾಗ್ರಫಿ) ಬರೆಯಬಾರದು. - ೨೮-೯-೨೦೦೫ - ಬುಧವಾರ - ವಿ.ಕ.

ಹೆಂಗಸರ ಬಳಿ ಹೇಳಿದ ಗುಟ್ಟು ಬಹಿರಂಗವಾಗಿಲ್ಲವೆಂದರೆ ಅದರ ಅರ್ಥ ಅವರು ಸರಿಯಾಗಿ ಕೇಳಿಸಿಕೊಂಡಿಲ್ಲ. - ೩೦-೯-೨೦೦೫ - ಶುಕ್ರವಾರ - ವಿ.ಕ.

ಇತಿಹಾಸ ಅಂದ್ರೆ ಚಿತ್ರಗಳ ಗ್ಯಾಲರಿ. ಆ ಪೈಕಿ ಕೆಲವು ಮಾತ್ರ ಒರಿಜಿನಲ್. ಉಳಿದವೆಲ್ಲ ಕಾಪಿ. - ೨೬-೧೦-೨೦೦೫ - ಬುಧವಾರ - ವಿ.ಕ.

ಬೆತ್ತಲೆ ಚಿತ್ರಗಳನ್ನು ನೋಡಲು ಯಾರೂ ಇಷ್ಟಪಡುವುದಿಲ್ಲ ಎಂದಲ್ಲ, ಸಾರ್ವಜನಿಕವಾಗಿ ನೋಡಲು ಇಷ್ಟಪಡುವುದಿಲ್ಲ. - ೨೮-೧೦-೨೦೦೫ - ಶುಕ್ರವಾರ - ವಿ.ಕ.

ಪ್ರೀತಿ ಒಂದು ಅದ್ಭುತ, ಸುಂದರ, ಅನನ್ಯ ಎಂದೆಲ್ಲಾ ಅನಿಸುವುದು ಪ್ರೀತಿಸುತ್ತಿರುವವಳು ನಮ್ಮ ಮಗಳು ಅಥವಾ ಅಕ್ಕ-ತಂಗಿ ಅಲ್ಲದಿದ್ದಾಗ ಮಾತ್ರ. - ೩೧-೧೦-೨೦೦೫ - ಸೋಮವಾರ - ವಿ.ಕ.

ಮದುವೆ ಸಂದರ್ಭದಲ್ಲಿ ಗಂಡು-ಹೆಣ್ಣು ಕೈ ಹಿಡಿದುಕೊಳ್ಳುತ್ತಾರೆ. ತಪ್ಪಿಲ್ಲ ಬಿಡಿ. ಬಾಕ್ಕ್ಸಿಂಗ್ ಆರಂಭಕ್ಕೆ ಮೊದಲು ಇಬ್ಬರು ಆಟಗಾರರು ಕೈ ಕುಲುಕುವುದಿಲ್ಲವೇ ಹಾಗೆ. - ೧೧-೧೧-೨೦೦೫ - ಶುಕ್ರವಾರ - ವಿ.ಕ.

ತಮ್ಮ ವಯಸ್ಸನ್ನು ಒಪ್ಪಿಕೊಳ್ಳುವ ಹೆಂಗಸರು ವಿರಳ. ವಯಸ್ಸಿಗೆ ತಕ್ಕಂತೆ ವರ್ತಿಸುವ ಗಂಡಸರ ಸಂಖ್ಯೆಯೂ ವಿರಳ. - ೨೮-೧೧-೨೦೦೫ - ಸೋಮವಾರ - ವಿ.ಕ.

ಜೀವನದಲ್ಲಿ ಸಣ್ಣ ಸಂಗತಿಗಳೇ ಹೆಚ್ಚು ನೋವನ್ನುಂಟು ಮಾಡುತ್ತವೆ. ನಾವು ಪರ್ವತವೇರಿ ಕುಳಿತುಕೊಳ್ಳಬಹುದು. ಆದರೆ ಸೂಜಿ ಮೊನೆ ಮೇಲೆ ಕೂರಲಾಗುವುದಿಲ್ಲ. - ೦೧-೧೨-೨೦೦೫ - ಗುರುವಾರ - ವಿ.ಕ.

ಮದುವೆಯಲ್ಲಿ ವರನಿಗೆ ಕುದುರೆ ಸವಾರಿ ಮಾಡಿಸುತ್ತಾರೆ. ಕಾರಣ ಆತನಿಗೆ ಪರಾರಿಯಾಗುವ ಕೊನೆಯ ಅವಕಾಶವಾದರೂ ಸಿಗಲಿ ಎಂದು. - ೨೬-೧೨-೨೦೦೫ - ಸೋಮವಾರ - ವಿ.ಕ.

ಬಿಸಿ ಕಾಫಿ ಕುಡಿಯುವಾಗ ಬಾಸ್ ಕರೆದರೆ, ಅದು ಪೂರ್ತಿ ತಣ್ಣಗಾಗುವ ತನಕ ಅಲ್ಲಿಂದ ಹೊರಬರಲಾಗುವುದಿಲ್ಲ. - ೨೮-೧೨-೨೦೦೫ - ಬುಧವಾರ - ವಿ.ಕ.

ಮುಂದಿನ ಬಾಗಿಲನ್ನು ಹೆಂಡತಿ ಬಡಿಯುತ್ತಿದ್ದರೆ, ಹಿಂದಿನಿಂದ ನಾಯಿ ಒದರುತ್ತಿದ್ದರೆ ಹಿಂದಿನ ಬಾಗಿಲನ್ನು ತೆರೆಯಬೇಕು. ಕಾರಣ ಒಳಬಂದ ಬಳಿಕ ನಾಯಿ ಒದರುವುದಿಲ್ಲ. - ೦೪-೧-೨೦೦೬ - ಬುಧವಾರ - ವಿ.ಕ.

ಡೈರಿ ಬರೆಯುವ ಅಭ್ಯಾಸವಿದ್ದರೆ ನಾವೇನು ಮಾಡುತ್ತೇವೆ ಎನ್ನುವುದು ನಮ್ಮಷ್ಟೇ ಬೇರೆಯವರಿಗೂ ಗೊತ್ತಾಗುತ್ತದೆ. - ೦೫-೧-೨೦೦೬ - ಗುರುವಾರ - ವಿ.ಕ.

ಜಿಪ್ ಏರಿಸಲು ಮರೆಯುವುದು ಹೇಗೋ, ಜಿಪ್ ಇಳಿಸಲು ಮರೆಯುವುದೂ ವೃದ್ಧಾಪ್ಯವೇ. - ೦೭-೧-೨೦೦೬ - ಶನಿವಾರ - ವಿ.ಕ.

My Blogspot : ಆರೋಗ್ಯ.blogspot.ಕಾಮ್

ನೋಡಿ.

Satyaprakash.H.K.
98863 34667
arogyasathya@yahoo.co.in
satyaprakash.hk@gmail.com
satya.prakash@rhm.co.in

Rating
Average: 5 (1 vote)

Comments