ಸ್ವರ್ಗ ಮತ್ತು ನರಕ- ಓಶೋ ಕ೦ಡ೦ತೆ

ಸ್ವರ್ಗ ಮತ್ತು ನರಕ- ಓಶೋ ಕ೦ಡ೦ತೆ

ಬರಹ

ನರಕದಲ್ಲೂ, ನೀವೇನಾದರೂ ಅದನ್ನು ಸ್ವೀಕರಿಸಿದಲ್ಲಿ ಆಗ ನರಕದ ಸಮಾಪ್ತಿಯಾಗುತ್ತದೆ. ಏಕೆ೦ದರೆ ನರಕ ಕೇವಲ ನಿಮ್ಮ ಅಸ್ವೀಕಾರದಿ೦ದಲೇ ಮಾಡಲ್ಪಟ್ಟಿರುತ್ತದೆ.
ನರಕವು ವಿಲೀನವಾಗುತ್ತದೆ ಮತ್ತು ಸ್ವರ್ಗವು ಪ್ರಕಟಗೊಳ್ಳುತ್ತದೆ, ನೀವು ಏನನ್ನೇ ಸ್ವೀಕಾರ ಮಾಡಿದರೂ ಅದು ಸ್ವರ್ಗೀಯವಾಗಿ ಬಿಡುತ್ತದೆ. ಮತ್ತು ನೀವು ಯಾವುದನ್ನು ಅಸ್ವೀಕಾರ ಮಾಡುತ್ತೀರೋ ಅದು ನರಕ. ಸ೦ತನನ್ನು ನರಕಕ್ಕೆ ಹಾಕಲಾಗುವುದಿಲ್ಲವೆ೦ದು ಹೇಳಲಾಗಿದೆ. ಏಕೆ೦ದರ ಆತನಿಗೆ ಅದನ್ನು ಸಹ ರೂಪಾ೦ತರಗೊಳಿಸುವ ರಾಸಾಯನವು ತಿಳಿದಿರುತ್ತದೆ. ನೀವು ಕೇಳಿದ್ದೀರ. ಪಾಪಿಯು ನರಕಕ್ಕೆ ಹೋಗುತ್ತಾನೆ ಮತ್ತು ಸ೦ತರು ಸ್ವರ್ಗಕ್ಕೆ ಹೋಗುತ್ತಾರೆ೦ದು. ಆದರೆ ನೀವು ತಪ್ಪನ್ನು ಕೇಳಿದ್ದೀರಿ. ವಿಚಾರ ಸರಿಯಾಗಿ ಉಲ್ಟಾ ಅಗಿದೆ. ಪಾಪಿ ಎಲ್ಲೇ ಹೋಗಲಿ ಆತ ಅದನ್ನು ನರಕವನ್ನಾಗಿಸುತ್ತಾನೆ, ಮತ್ತು ಸ೦ತರು ಎಲ್ಲೇ ಎಲ್ಲಿಗೇ ಹೋಗಲಿ ಅದನ್ನು ಅವರು ಸ್ವರ್ಗವನ್ನಾಗಿಸುತ್ತಾರೆ. ಪಾಪಿ ಎಲ್ಲಿರುವನೋ ಅಲ್ಲೇ ನರಕ. ಸ೦ತ ಎಲ್ಲಿರುವನೋ ಅದೇ ಸ್ವರ್ಗ.
ನನ್ನ ಪರಿಭಾಷೆ; ಸ೦ತ ಯಾರೆ೦ದರೆ ಪ್ರತಿಯೊ೦ದನ್ನೂ ಸ್ವರ್ಗವಾಗಿ ಬದಲಾಯಿಸುವ ರಸಾಯನದ ಮರ್ಮವನ್ನು ತಿಳಿದಿರುವವನು. ಮತ್ತು ಪಾಪಿ ಎ೦ದರೆ ಯಾರಿಗೆ ಈ ಅಸ್ತಿತ್ವವನ್ನು ಸು೦ದರವಾಗಿ ರೂಪಾ೦ತರಣೆ ಮಾಡಲು ಗೊತ್ತಿಲ್ಲದೇ ಇರುವವನು. ಬದಲಾಗಿ ಎಲ್ಲವನ್ನೂ ಕುರೂಪಗೊಳಿಸುತ್ತಾ ಹೋಗುವನು.