ಏನ್ರಿ ಇದು ? ನಮ್ಮ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕುಸಿಯುತ್ತಿದೆಯೇ?

ಏನ್ರಿ ಇದು ? ನಮ್ಮ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕುಸಿಯುತ್ತಿದೆಯೇ?

ಪ್ರತಿಸ್ಟಿತವೆಸ್ನಿಸಿಕೊಂಡ ದೊಡ್ಡ ಐಟಿ ಕಂಪೆನಿಯಲ್ಲಿ ಅಲ್ಲಿನ ಉನ್ನತ ಹುದ್ದೆಯಲ್ಲಿನ ಅಧಿಕಾರಿಗಳನ್ನು ಒಂದಷ್ಟು ತಿಂಗಳು ಮನೆಗೆ ಕಳಿಸಿದ್ದಾರಂತೆ. ಯಾರಿಗೂ ಹೇಳಬಾರದೆಂದು ತಾಕಿತು ಸಹ ಮಾಡಿದ್ದಾರೆ. ಹಾಗಾಗಿ ಆ ಕಂಪೆನಿಯ ಹೆಸರನ್ನು ಹಾಕುತ್ತಿಲ್ಲ
ವಿಪ್ರೊದಲ್ಲಿ ಒಂದು ದೊಡ್ಡ ಟೀಮ್ (ಸುಮರು ೩೦೦ ಜನ )ರನ್ನು ಮೂರುತಿಂಗಳ ಮಟ್ಟಿಗೆ ಸಂಬಳ ರಹಿತ ರಜೆ ಕೊಟ್ಟು ಮನೆಗೆ ಕಳಿಸಿದ್ದಾರೆ.
ಸೆನ್ಸೆರಾದಲ್ಲಿ ವಾರಕ್ಕೆ ಮೂರೆ ದಿನ ಕೆಲಸ.
ಬಯೋಕಾನನ ಒಂದು ಘಟಕ ಮುಚ್ಚಾಲಾಗಿದೆ
ಹೀಗೆ ಸುಮಾರು ಕಂಪೆನಿಗಳು ಆರ್ಥಿಕ ಸಂಕಷ್ಟದಿಂದ ಹೊರಬರಲು ಏನೇನೊ ಕಸರತ್ತು ಮಾಡುತ್ತಿವೆ
ನೆನ್ನೆ ಮೊನ್ನೆಯವರೆಗೆ ಖುಶಿಯಿಂದ ಆರಾಮಾವಾಗಿ ಕಂಪ್ಯೂಟರ್ ಕ್ಲಾಸಿಗೆ ಬರುತ್ತಿದ್ದ ಗೃಹಿಣಿ ಭವಾನಿ "ಮೇಡಮ್ ಯಾವುದಾದರೂ ಕೆಲಸ ಕೊಡಿಸಿ " ಎಂದು ಗೋಗರೆಯುತ್ತಿದ್ದಾಳೆ ಕಾರಣ ಅವಳ ಗಂಡನಿಗೆ ಅರ್ಧ ಸಂಬಳ ಮಾಡಿದ್ದಾರೆ.
ಹೀಗೆ ಸುಮಾರು ಘಟನೆಗಳು
ಈ ಆರ್ಥಿಕ ಸಂಕಷ್ಟ ನಮ್ಮ ಸಂಸ್ಥೆಯನ್ನೂ ಬಿಟ್ಟಿಲ್ಲ
ವಿದ್ಯಾರ್ಥಿಗಳಿಂದ ತುಂಬಿರುತ್ತಿದ್ದ ನಮ್ಮ ಸಂಸ್ಥೆ ಬಿಕೋ ಎನುವ ಮಟ್ಟಕ್ಕೆ ಹೋಗಿದೆ
ಬಿ.ಸಿ.ಎಗೆ ಸೇರಿದ್ದ ವಿದ್ಯಾರ್ಥಿಗಳೆಲ್ಲಾ ಈಗಾಗಲೆ ಖಾಲಿಯಾಗತೊಡಗಿದ್ದಾರೆ.
ಓಡುವ ಕುದುರೆ ಬಿಕಾಮ್ ಮಾತ್ರ ನಿರಾಳವಾಗಿದೆ

ಇದರ ಬಿಸಿ ನನ್ನನ್ನು ಆರ್ಥಿಕವಾಗಿ ಕಾಡುವ ಮುನ್ನ ಬೇರೇನಾದರೂ ಮಾಡಬೇಕಿದೆ

ಏನು ಮಾಡಬಹುದು . ಯೋಚಿಸುತ್ತಲೇ ಇದ್ದೇನೆ

ಇನ್ನೂ ಹೊಳೆಯುತ್ತಿಲ್ಲ.

Rating
No votes yet

Comments