ಎಕ್ಕದಗಿಡದ, ಎಲೆ-ಬೇರುಗಳನ್ನು, ಔಷಧಿಯಾಗಿ ಉಪಯೋಗಿಸಬಹುದೇ ?

ಎಕ್ಕದಗಿಡದ, ಎಲೆ-ಬೇರುಗಳನ್ನು, ಔಷಧಿಯಾಗಿ ಉಪಯೋಗಿಸಬಹುದೇ ?

ಬರಹ

'ಅಪಸ್ಮಾರ' (ಮೂರ್ಛಾರೋಗ)

ಆಯುರ್ವೇದ-ಚಿಕಿತ್ಸೆಯಿಂದ ಏನಾದರೂ ಸಹಾಯವಾದೀತೇ ?

ಮೂರ್ಛಾರೋಗದಲ್ಲಿ, ವಾತಜ, ಪಿತ್ತಜ, ಶ್ಲೇಷ್ಮಜ, ಸನ್ನಿಪಾತಜಗಳೆಂಬ ೪ ಪ್ರಭೇದಗಳಿವೆ. ಹಳ್ಳಿಯಲ್ಲಿ ಕೆಲವರು, ಇದನ್ನು 'ಮಲರೋಗ', 'ಹಂದಿರೋಗ', ಅಥವಾ, 'ಬೀಳುವಜಾಡ್ಯ' ವೆನ್ನುತ್ತಾರೆ. ಆಯುರ್ವೇದದಲ್ಲಿ ಎನ್ನುತ್ತಾರೆ. ಕಣ್ಣುಕತ್ತಲೆ, ಬವಳಿಬರುವಿಕೆ, ಪೂರ್ವರೂಪಗಳು. ಅನುವಂಶಿಕವೆಂತಲೂ ಹೇಳುತ್ತಾರೆ. ಮೆದುಳಿನ ದುರ್ಬಲತೆ, ರಕ್ತದ ಕೊರತೆ, ತೀವ್ರವಾದ ದುಖಃ, ಭಯ, ಕಳವಳ, ಕ್ರಿಮಿಗಳ-ಉಪದ್ರವದಿಂದಲೂ 'ಅಪಸ್ಮಾರ,' ಬರುವುದೆಂದು ತಿಳಿದವರು ಹೇಳುತ್ತಾರೆ. ಸ್ತ್ರೀಯರಿಗೆ, ಗರ್ಭಕೋಶದ ವಿಕಾರದಿಂದಲೂ ಬರುತ್ತದೆ, ಕಣ್ಣುಕತ್ತಲೆಗಟ್ಟಿ ಬೀಳುವಸಾಧ್ಯತೆಯಿರುವ ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುವುದು ಅತಿಮುಖ್ಯ. ರೋಗಬಂದಾಗ ಅವರನ್ನು ಮಲಗಿಸಿ, ತಲೆಗೆಪೆಟ್ಟಾಗದಂತೆ ತಲೆಯಕೆಳಗೆ ದಿಂಬನ್ನು ಕೊಟ್ಟು ತಲೆ ನೆಲಕ್ಕೆ ತಗುಲದಂತೆ, ಗಟ್ಟಿಯಾಗಿ ಒತ್ತಿಹಿಡಿಯಬೇಕು. ನಾಲಿಗೆಯನ್ನು ಕಡಿಯದಂತೆ ಎಚ್ಚರವಹಿಸಬೇಕು. ಹಲ್ಲುಗಳಮಧ್ಯೆ ದಪ್ಪನಾದ ಬಟ್ಟೆಯನ್ನು ಇಡಬೇಕು. ರೋಗಿಗಳು ನಿದ್ದೆಗೆಡುವುದು, ಬಿಸಿಲಿನಲ್ಲಿ ತಿರುಗುವುದು, ವಿಶೇಷಚಿಂತೆ, ದುಶ್ಚಟ, ದುರಭ್ಯಾಸ, ದುರಾಹಾರಗಳು ಅಪಸ್ಮಾರಕ್ಕೆ ಉತ್ತೇಜನಕೊಟ್ಟು ಹೆಚ್ಚುಕಾಲ ನರಳುವಂತೆ ಮಾಡುತ್ತವೆ.

ಎಕ್ಕದ ಎಲೆ, ತಾನಾಗಿಯೇ ಹಣ್ಣಾಗಿ ಬಿದ್ದುದನ್ನು ನೆರಳಿನಲ್ಲಿ ಒಣಗಿಸಿಟ್ಟು, ಬೂದಿಮಾಡಿ ಅದನ್ನು ಪ್ರತಿದಿನ ವಯೋಮಾನಕ್ಕೆ ತಕ್ಕಂತೆ ಎರಡರಿಂದ ೬ ಗುಂಜಿಯವರೆಗೆ ದಿನಕ್ಕೆರಡುಬಾರಿ ಜೇನುತುಪ್ಪದಲ್ಲಿ ಕೊಡುತ್ತಿದ್ದರೆ, ಅಪಸ್ಮಾರ ಪರಿಹಾರವಾಗುತ್ತದೆ.

ಎಕ್ಕದ ಬೇರಿನ ತೊಗಟೆಯನ್ನು ಮೇಕೆಯ ಹಾಲಿನಲ್ಲಿ ತೇದು, ೪-೬ ಹನಿಯನ್ನು ಮೂಗಿನಲ್ಲಿ ಹಿಂಡುವುದರಿಂದ ಅಪಸ್ಮಾರ ಪರಿಹಾರವಾಗುತ್ತದೆ. ರೋಗಬಂದಾಗ ೨-೩ ತಿಂಗಳು ತಪ್ಪದೆ ಉಪಯೋಗಿಸಬೇಕು.

ಕೃಪೆ :

'ಸ್ವಯಂವೈದ್ಯ',

ತಿರುಕ,

ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮ,

ಮಲ್ಲಾಡಿಹಳ್ಳಿ, ಹೊಳಲ್ಕೆರೆ ತಾಲ್ಲೂಕು.

ಚಿತ್ರದುರ್ಗ ಡಿಸ್ಟ್ರಿಕ್ಟ್,

ಕರ್ನಾಟಕ ರಾಜ್ಯ.

ಚಿತ್ರ : ವೆಂಕಟೇಶ.