ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ

ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ

ಬರಹ

ಸೀನಿ ಸನ್ಯಾಸಿಯಾದುದು - ಜಿ. ಪಿ. ರಾಜರತ್ನಂ ಅವರ ಕತೆ .

ಆಕಾಶವು ಇದ್ದಕ್ಕಿದ್ದಂತೆ ಬರಸಿಡಿಲನ್ನು ಕಕ್ಕಿತು ! ಸೀನಿ ಸನ್ಯಾಸಿಯಾದ ! ಸುಖ ಸಂತೋಷಗಳ ಸಾಗರದಲ್ಲಿ ಹುಟ್ಟಿ ಬೆಳೆದ ಸೀನಿ ಸನ್ಯಾಸಿಯಾದ! ಲೋಕ ಬೆರಗಾಯ್ತು !

ಫೆಬ್ರುವರಿ ೪ ನೇ ತಾರೀಖು ಬೆಳಗ್ಗೆ ಹತ್ತು ಘಂಟೆಗೆ ಸೀನಿ ಅಸ್ವಸ್ಥನಾದ ತನ್ನ ಮಿತ್ರನನ್ನು ಆಸ್ಪತ್ರೆಗೆ ಕರೆದುಕೊಂದು ಹೋದ .
" ಡಾಕ್ಟರ್, ಇವರನ್ನು ಇನ್ ಪೇಷಂಟಾಗಿ ಸೇರಿಸಿಕೊಳ್ಳಬೇಕು . "
" ಯಾರು , ಇವರು ನಮ್ಮ ನಾರಾಯಣಪ್ಪ ಅಲ್ಲವೆ!"
"ಹೌದು , ಅವರೇ ... ಬಂದೆ , ಗಾಡಿ ಬಾಡಿಗೆ ಕೊಟ್ಟು ಬಂದೆ " ಎಂದು ಸೀನಿ ಹೊರಗೆ ಹೋದ.
ಸೀನಿ ಐದು ನಿಮಿಷ ಕಳೆದು ಬಂದು , ತನ್ನ ಸ್ನೇಹಿತ ಅಲ್ಲಿಲ್ಲದಿರುವದನ್ನು ಕಂದು " ಡಾಕ್ಟರ್, ನಾರಾಯಣಪ್ಪ ಎಲ್ಲಿ ? " ಎಂದ. ಡಾಕ್ಟರ್ " ವಾರ್ಡ್ ಬಾಯ್ ಇವರನ್ನು ಪೇಷಂಟ್ ಅರವತ್ಮೂರರ ಹತ್ರ ಕರೆದುಕೊಂದು ಹೋಗು . " ಎಂದರು .
ಪೇಷಂಟ್ ಅರವತ್ಮೂರು!! ಬದುಕಿನ ಬಣ್ಣ ಬಿಟ್ಟಿತು!!
ಸೀನಿ ಹಿಂದೆ ನಾರಾಯಣಪ್ಪನಾಗಿದ್ದ ಪೇಷಂಟ್ ಅರವತ್ಮೂರರ ಬಳಿಗೆ ಹೋದ .
'ಪೇಷಂಟ್ ಅರವತ್ಮೂರು "ಸೀನಿ, ಒಂದು ಕಿತ್ತಿಲೆ ಹಣ್ಣು ತಂದು ಕೊಡೋ " ಎಂದಿತು. ಸೀನಿ ಕಿತ್ತಿಲೆ ಹಣ್ಣು ತರಲು ಹೊರತ .
ಒಂದು ಹತ್ತು ನಿಮಿಷದಲ್ಲಿ ಕಿತ್ತಿಲೆ ಹಣ್ಣು ತಂದ . 'ಪೇಷಂಟ್' ಅರವತ್ಮೂರು ಇದ್ದಕಡೆ ಇರಲಿಲ್ಲ .
"ಡಾಕ್ಟರ್ ! ನಾರಾ - ಅಲ್ಲ 'ಪೇಷಂಟ್ ಅರವತ್ಮೂರು' ಎಲ್ಲಿ ? "
"ವಾರ್ಡ್ ಬಾಯ್ ! ಆ 'ಬಾಡಿ' ಕೊಟ್ಟುಬಿಡು ಇವರಿಗೆ !"
ಆ 'ಬಾಡಿ!!'
ಬಾಳಿನ ಹುರುಳಿಲ್ಲದ ಅಗಾಧವು ಸೀನಿಯ ಕಣ್ಣಿಗೆ ಎದುರಾಯಿತು .
ಸೀನಿ ಸನ್ಯಾಸಿಯಾದ!.
- ಜಿ. ಪಿ. ರಾಜರತ್ನಂ ಅವರ ಕಥೆ