"ವಿವಾಹಕ್ಕೆ ಮೊದಲು "ಎಚ್.ಐ.ವಿ ಪರೀಕ್ಷಣಾ ಪತ್ರ" ಲಗತ್ತಿಸ ಬೇಕೆಂಬ ಕಾನೂನು ಮಾಡುವುದು ಒಳ್ಳೆಯದು."

"ವಿವಾಹಕ್ಕೆ ಮೊದಲು "ಎಚ್.ಐ.ವಿ ಪರೀಕ್ಷಣಾ ಪತ್ರ" ಲಗತ್ತಿಸ ಬೇಕೆಂಬ ಕಾನೂನು ಮಾಡುವುದು ಒಳ್ಳೆಯದು."

ಬರಹ

"ವಿವಾಹಕ್ಕೆ ಮೊದಲು "ಎಚ್.ಐ.ವಿ ಪರೀಕ್ಷಣಾ ಪತ್ರ" ಲಗತ್ತಿಸ ಬೇಕೆಂಬ ಕಾನೂನು ಮಾಡುವುದು ಒಳ್ಳೆಯದು."
ಗೋವೆಯ ಆರೋಗ್ಯ ಮಂತ್ರಿ, ಶ್ರಿ.ಡಿ. ನಾರ್ವೇಕರ್ ಘೋಷಿಸಿದರು. ಈಗ ಇದೇ ಒಂದು ಬಿಸಿ ಸುದ್ದಿ, ಗೋವೆ ಯಲ್ಲಿ ಚರ್ಚೆಗೆ ಒಳಗಾಗಿದೆ. ಸದ್ಯದಲ್ಲೇ ಅವರ ಅಸೆಂಬ್ಲಿಯಲ್ಲಿ ಜಾರಿಗೆ ಬರಲೂ ಸಾದ್ಯ !
ಹಂತ ಹಂತ ವಾಗಿ ಕಳೆದ 2 ದಶಕ ಗಳಿಂದ ವಿಶ್ವದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿದ ಎಚ್.ಐ.ವಿ. ಪಿಡಿಗಿನ ಅಲೆಗಳು ನಮ್ಮ ಮನೆಗಳ ಹತ್ತಿರಕ್ಕೂ ಬಂದ್ದಿದ್ದು ಕರೆಗಂಟೆಯನ್ನು ಒತ್ತುವ ಸಿದ್ದತೆಯಲ್ಲಿವೆ.
'ನಮ್ಗ್ಯಾಕ್ ಬಿಡಿ ಸಾರ್' ! ಅನ್ನೋ ಕಾಲ ಹೋಯ್ತು. ಇಂದಿನ ನಾಗರಿಕ ಸೌಲಭ್ಯಗಳನ್ನೇ ತೆಗೆದುಕೊಳ್ಳಿ.
ದೂರದರ್ಶನ, ಕೇಬಲ್ ಟಿ.ವಿ, ದೂರವಾಣಿ, ಮೊಬೈಲ್, ಕಂಪ್ಯೂಟರ್ ತಂತ್ರಜ್ಞಾನ,ಮಾಹಿತಿ ತಂತ್ರಜ್ಞಾನ,ಬಾಹ್ಯಾಕಾಶ ಯಾನ ಮತ್ತು ವಾಯುಯಾನ ಸೇವೆ,(ವೈದ್ಯಕೀಯಕ್ಷೇತ್ರ) ಔಷಧಿಗಳು, ಷಸ್ಟ್ರ ಚಿಕಿತ್ಸೆ, ಶಿಕ್ಷಣ, ವಿಜ್ಞಾನ ಇತ್ಯಾದಿ.ಈ ಎಲ್ಲ ಕೊಡುಗೆಗಳೂ ಮಾನವನಿಗೆ ಸುಖಕರ ಜೀವನದ ಎಲ್ಲ ಸೌಲಭ್ಯಗಳೂ ಸಿಗುವಂತೆ ಮಾಡಿವೆ.
ಇವುಗಳನ್ನು ಸರಿಯಾಗಿಬಳಸದೆ ಕಂಪ್ಯುಟರ್ ಗುಂಡಿ ಒತ್ತಿದರೆ ಸಾಕು, ಅಶ್ಲೀಲ ಚಿತ್ರಗಳು, ಕಾಮ ದಾಹದ ಪ್ರಸಂಗಗಳು ತೆರೆಯ ಮೇಲೆ ಪ್ರತಿಬಂಬಿಸುತ್ತವೆ.ಅತ್ಯಂತ ಪರಿಣಾಮಕಾರಿಯಾದ ಟಿ.ವಿ.ಯಂತಹ ಪ್ರಸಾರ/ಪ್ರಚಾರ ಮಾಧ್ಯಮ ಕುಲಗೆಟ್ಟು ಹೋಗಿರುವುದು ಶೋಚನೀಯ ! ಸರ್ಕಾರದ ಘೋಷಣೆ, ಎಚ್.ಐ.ವಿ. ತಡೆಗಟ್ಟುವಲ್ಲಿ, ಎಷ್ಟು ವಿಚಾರ ಶೂನ್ಯವಾಗಿದೆ ! " ಕಂಡಮ್ ಬಳಸಿ ಸುರಕ್ಷಿತರಾಗಿರಿ. ನಿಮ್ಮ ಜೀವನಸಾಥಿಗೆ ವಫಾದಾರರಾಗಿರಿ" ಎಷ್ಟು ಹಾಸ್ಯಾಸ್ಪದ ಅಲ್ವೇ ! ಕಂಡಮ್ ಬಳೆಸಿ ಸಂತಾನ ನಿಯಂತ್ರಿಸಿ.ಚಿಕ್ಕ ಸಂಸಾರ ಚೊಕ್ಕ ಸಂಸಾರ" ಎಂದಿರಬೇಕಾಗಿತ್ತು.ಯುವಜನರಿಗೆ ಇದು ವರದಾನವಾಗಿದೆ.
ವಿದೇಶವನ್ನು ನಾವು ಮೆಚ್ಚುವುದು, ಅವರ ಶಿಸ್ತು, ಕಾರ್ಯಕ್ಷಮತೆ, ಕಷ್ಟಜೀವನ ಹಾಗು ಪ್ರಾಮಾಣಿಕತೆಗೆ !ಅದನ್ನು ಬಿಟ್ಟು ಅವರ, ಸಾಮಾಜಿಕ ಅವ್ಯವಸ್ಥೆ,ವಿವಾಹ ವಿಛ್ಛೇದನ, ಲೈಂಗಿಕತೆ.ಇತ್ಯಾದಿಗಳನ್ನು ನಕಲಿಮಾಡುವುದು ಒಳ್ಳೆಯದಲ್ಲ.
ಇಂದಿನ ಕಾರ್ಪೊರೇಟ್ ಕೆಲಸದ ಮಾದರಿ, ಪ್ರಗತಿಶೀಲ, ನವೀನ ಎಂಬ ಹೆಸರಿನಲ್ಲಿ ನಮ್ಮ ಯುವಕರು ಭಾರತೀಯತೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಚ್.ಐ.ವಿ ತಡೆಗಟ್ಟಲು ಗೋವೆಯ ಹೆಲ್ತ್ ಮಂತ್ರಿ, ಕನೂನು ತರಬೇಕಂದರೆ, ಶ್ರೀಮತಿ. ಗೋಸ್ವಾಮಿ, ಕಾನು ಪರಿಣಾಮಕಾರಿಯಲ್ಲ ಎನ್ನುತ್ತಾರೆ !
ಚಿಕ್ಕ ಪ್ರಾಯ ದಲ್ಲೇ ಗಂಡನನ್ನು ಕಳೆದುಕೊಂಡ ಅವರು
ಎಚ್.ಐ.ವಿ.ಜೊತೆಗೆ ಜೀವಿಸುವುದನ್ನು ಕಲಿತಿದ್ದಾರೆ.ಕಷ್ಟ, ಕೋಟಲೆಗಳ ಜೀವನ ಅವರಲ್ಲಿ ಕೆಚ್ಚು ಮೂಡಿಸಿದೆ .ಸಲಹೆಕಾರರಾಗಿ ಜೀವನ ಸಲ್ಲಿಸುತ್ತಿದ್ದಾರೆ.ಕಾನೂನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವುದು ಸುಲಭಸಾಧ್ಯವಲ್ಲ.
ಶಿಸ್ತು, ಸಂಯಮ ಗಳ ಜೊತೆಗೆ,ಆಧುನಿಕ ತಂತ್ರಜ್ಞಾನ ಬಳಸಿ ಈ ಪಿಡುಗನ್ನು ನಿಯಂತ್ರಿಸಬಹುದು. ವಿದ್ಯೆಯ ಜೊತೆಗೆ ವಿವೇಕವೂ ಬೇಕು.
ಡೊಡ್ದವರು, ಜಾತದ ಜೊತೆಗೆ ಏಡ್ಸ್ ನಿಂದ ಮುಕ್ತನೇ (ಳೇ),ಎನ್ನುವುದು ಖಾತ್ರಿ ಮಾಡಿಕೊಳ್ಳುವುದು ಈಗಿನ ಚರ್ಚೆಯ ವಿಷಯ !