ಮಾಹಿತಿ ನೀಡುವಿರಾ?

ಮಾಹಿತಿ ನೀಡುವಿರಾ?

ಬರಹ

ಮಿತ್ರರೇ,

ಇಂದಿನ ನಾಗಾಲೋಟದ ಯುಗದಲ್ಲಿ ಯುಗಧರ್ಮಕ್ಕೆ ತಕ್ಕಂತೆ ಹೆಜ್ಜೆ ಹಾಕದ್ದಿದರೆ ಹಿಂದೆ ಬೀಳುವುದು ಸಹಜ. ಹಾಗಿರುವಾಗ ನಮ್ಮ ತಾಯಿನುಡಿಯಾದ ಕನ್ನಡ ಭಾಷೆಯನ್ನು ಇಂದಿನ ನವೀನ ಸಾಧ್ಯತೆಗಳಿಗೆ ಒಗ್ಗಿಸುವುದು ಅವಶ್ಯಕ. ಭಾಷೆಯೇ ಕಾಲಕಾಲಕ್ಕೆ ಆ ಬದಲಾವಣೆಗಳನ್ನು ಮಾಡಿಕೊಂಡು ಬಂದಿದೆ. ಆದರೆ ಇಂದು ಕನ್ನಡವನ್ನು ವಿಶ್ವಮಾನ್ಯವನ್ನಾಗಿ ಮಾಡಬೇಕಾದ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ.

ಈ ಹಿನ್ನೆಲೆಯಲ್ಲಿ ಅಂತರಜಾಲದಲ್ಲಿ ಕನ್ನಡದ ಬಳಕೆಯ ಸಾಧ್ಯತೆಗಳ ಕುರಿತು ನಮ್ಮ ಗಣಕ ತಂತ್ರಜ್ಞರ ನಡುವೆ ಸಂವಹನ ಅವಶ್ಯಕತೆ ಇದೆ. ತಾಯಿ ನೆಲದ ನುಡಿಯ ವಿಷಯ ಬಂದಾಗ ಕನ್ನಡಿಗರು ಎಂದು ಹಿಂದೆ ಬಿದ್ದಿಲ್ಲ. ಆದಕಾರಣ ಕೆಲವು ಗಣಕ ತಂತ್ರಜ್ಞರು (ಸಾಫ್ಟ್ ವೇರ್ ಎಂಜಿನಿಯರ್ಸ್) ಸಂಪದ ಬಳಗದಲ್ಲಿದ್ದೀರಿ. ತಾವುಗಳು ಈ ರೀತಿಯ ಸಂವಹನವೇರ್ಪಡಿಸಿ ಅಂತರಜಾಲದಲ್ಲಿ ಕನ್ನಡ ಬಳಕೆಯ ಸಾಧ್ಯತೆಗಳನ್ನು ಇನ್ನಷ್ಟು ಹೆಚ್ಚಿಸಬಹುದೇನೋ ಎಂಬ ಆಸೆ.

ಬೆಂಗಳೂರು ಭಾರತದ ಐ.ಟಿ ರಾಜಧಾನಿ. ಹಲವಾರು ಪರಿಣಿತ ಗಣಕ ತಂತ್ರಜ್ಞರನ್ನು ಕರ್ನಾಟಕ ಜಗತ್ತಿಗೆ ನೀಡಿದೆ. ಹೀಗಿರುವಾಗ ನಮ್ಮ ಸ್ವಲ್ಪ ಶ್ರಮವನ್ನು ಈ ಸೇವೆಗಾಗಿ ನೀಡಿದರೆ ನಮ್ಮ ತಾಯ್ನೆಲದ ಸ್ವಲ್ಪ ಋಣ ತೀರಿಸಿದಂತೆ ಅಲ್ಲವೆ?

ಅದುದರಿಂದ ಅಂತರಜಾಲದಲ್ಲಿ ಕನ್ನಡದ ಬಳಕೆಯ ಪ್ರಮಾಣ ಎಷ್ಟು, ಉಳಿದ ಭಾರತೀಯ ಭಾಷೆಗಳಿಗೆ ಹೋಲಿಸಿದರೆ ಅದರ ಬಳಕೆ ಹೇಗಾಗುತ್ತಿದೆ, ತಾಂತ್ರಿಕವಾಗಿ ಕನ್ನಡವನ್ನು ಅಳವಡಿಸಲು ಇರುವ ಅಡೆತಡೆಗಳು (ನನಗೆ ಗಣಕ ಜ್ಞಾನವಿಲ್ಲದ ಕಾರಣ ಸ್ಪಷ್ಟತೆ ಇಲ್ಲ) ಇತ್ಯಾದಿಗಳ ಕುರಿತು ಒಂದು ಸಂಪದಿಗರ ನಡುವೆಯೇ ಒಂದು ಚರ್ಚೆ ನಡೆದರೆ ಚೆನ್ನ ಎಂಬ ಕಾರಣಕ್ಕೆ ಈ ಮನವಿ.

ಕನ್ನಡಿಗ ಗಣಕ ತಜ್ಞರು ಈ ಚರ್ಚೆಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರೆ ಅಸಕ್ತರಿಗೆ ಮಾಹಿತಿಯಾಗಬಲ್ಲುದು. ನಿಮ್ಮ ಕೆಲ ನಿಮಿಷಗಳನ್ನು ನೀಡಿ. ಪ್ಲೀಸ್...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet