ಮಕ್ಕಳ ಅಸಕ್ತಿಗಳನ್ನುಗಮನಿಸಿ,ನಮ್ಮ ಆಸೆಗಳನ್ನು ಅವರ ಮೇಲೆ ಹೇರಬೇಡಿ.

ಮಕ್ಕಳ ಅಸಕ್ತಿಗಳನ್ನುಗಮನಿಸಿ,ನಮ್ಮ ಆಸೆಗಳನ್ನು ಅವರ ಮೇಲೆ ಹೇರಬೇಡಿ.

ಬರಹ

ಮಹತ್ವಾಕಾಂಕ್ಷೆ ,ಜೀವನಕ್ಕೆ ಒಂದು ಅರ್ಥ ಕೊಡುವ ಹಾಗಿದ್ದಲ್ಲಿ ಉಪಯುಕ್ತ ವಾಗುತ್ತದೆ. ಏಲ್ಲರೂ ಆಶಿಸುವುದು ಅದನ್ನೆ !ಏನನ್ನಾದರೂ ಸಾಧಿಸಲೇ ಬೇಕು. ಆದರೆ ಅತಿ ಮಹತ್ವಾಕಾಂಕ್ಷೆ ತರವೆ? ವಿಚಾರಮಾಡಿ. ಇಂದಿನ ಕೆಲವು ತಂದೆ ತಾಯಿಗಳು ಮಾಡುತ್ತಿರುವುದು ಇದನ್ನೆ. ತಮ್ಮ ಮಕ್ಕಳನ್ನು ಅರ್ಹ ವಯಸ್ಸಿಗೆ ಮೊದಲೇ ಶಾಲೆಗಳಿಗೆ ಸೇರಿಸಿ, ತಲೆಗೆ ಹಿಡಿಸಲಾರದಷ್ಟು ವಿದ್ಯಗಳನ್ನು, ಕೌಶಲಗಳನ್ನು ತುರುಕಿ, ಬಾಲ ಪ್ರತಿಭೆಗಳು ಹೆಣಗಾಡಿ ನರಳುವಂತೆ ಮಾಡುತ್ತಾರೆ. ತಾವು ಸಾಧಿಸಲಾಗದ್ದಿದ್ದ ಕ್ಷೇತ್ರಗಳಲ್ಲಿ ತಮ್ಮ ಮಕ್ಕಳು ಸಾಧನೆ ಮಾಡಲಿ ಎಂದು ! ಇದು ಸದುದ್ದೇಶವೇ ! ಮಕ್ಕಳ ಯೋಗ್ಯತೆ ಹಾಗೂ ಅವರ ಆಸಕ್ತಿ ಗಳನ್ನು ಗುರುತಿಸದೆ ಇರುವುದು ತರವಲ್ಲ. ಎಲ್ಲಕ್ಕೂ ಮಿಗಿಲಾಗಿ ಇವೆಲ್ಲವನ್ನೂ ಅತಿಶೀಗ್ರವಾಗಿ ಗ್ರಹಿಸಿ, ಆ ಕ್ಶೇತ್ರಗಳಲ್ಲಿ, ವಿಜಯವನ್ನು ಅವರು ಸಾದಿಸಲೇಬೇಕೆನ್ನುವ ಮೊಂಡು ಹಠ ಬೇಡ ಅಷ್ಟೆ. ಸಾಮಾನ್ಯ ವಾಗಿ ಅತಿಯಾದ ಒತ್ತಡ ಆ ಕಿರಿ ವಯಸ್ಸಿನಲ್ಲಿ ಅವರ ಆರೋಗ್ಯದಮೇಲೆ ದುಷ್ಪರಿಣಾಮಮಾಡುವುದನ್ನು ನಾವು ಕಂಡಿದ್ದೇವೆ. ಜೀವನದಲ್ಲಿ ವೇಗ, ಸ್ಪರ್ಧೆ, ಸಾಹಸ, ಶ್ರಮ ಅತ್ಯಗತ್ಯ. ಇದು ಸರ್ವ ಮಾನ್ಯ. ಸರ್ವ ವಿದಿತ. ಅತಿರೇಕಕ್ಕೆ ಹೋಗದಂತೆ ನೊಡಿಕೊಳ್ಳಬೇಕು ಅಷ್ಟೆ. ಅತಿ ಅವಸರದಲ್ಲಿ ಮಾಡಿದ ಯಾವ ಕಾರ್ಯಗಳೂ ಶ್ರೇಷ್ಟ ವೆನಿಸುವುದು ವಿರಳ. ಆದ್ದರಿಂದ, ಸಹನೆಯಿಂದ ಸಕಾಲಕ್ಕೆ ಕಲಿಯುವ ಪ್ರವ್ರುತ್ತಿ ಯನ್ನೂ ನಾವೂ ಬೆಳೆಸಿಕೊಂಡು ಅವರಲ್ಲೂ ಬೆಳಸಬೇಕು.

ವೆಂ.