ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

ಮೊಘಲ್ ರಾಜಕುಮಾರನ ಕನಸಿನಲ್ಲಿ ಶ್ರೀ ರಾಮಚಂದ್ರ!

'ಕಸ್ತೂರಿ' ಮಾಸಪತ್ರಿಕೆಯ ಎಪ್ರಿಲ್ ೨೦೦೬ರ ಸಂಚಿಕೆ ಯುಗಾದಿ ವಿಶೇಷಾಂಕವಾಗಿ ೩೨೦ ಪುಟ (ಬೆಲೆ ೧೨ ರೂ) ಹೊಂದಿ ಬಂದಿದೆ.

ಶ್ರೀ ರಾಮಚಂದ್ರನಿಗೆ ಚಿಕ್ಕವನಿದ್ದಾಗ ತೀರ್ಥಯಾತ್ರೆ ಹೋದಾಗ ವೈರಾಗ್ಯ ಉಂಟಾಗುತ್ತದೆ . ಆಗ ವಸಿಷ್ಠ ಮುನಿಗಳು ಅವನಿಗೆ ಮಾಡಿದ ಉಪದೇಶವೇ ಯೋಗವಾಸಿಷ್ಠ. ಇದಕ್ಕೆ ವಾಸಿಷ್ಠ ರಾಮಾಯಣ ಎಂಬ ಇನ್ನೊಂದು ಹೆಸರೂ ಇದೆ. ಈ ಬಗ್ಗೆ ಒಂದು ಲೇಖನ ಇದೆ. ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದವರು ಇದನ್ನು ನೋಡಬಹುದು. ಮೊಘಲ್ ರಾಜಕುಮಾರ ಅನೇಕ ಉಪನಿಷತ್ತುಗಳ ಜತೆ ಇದನ್ನೂ ಪರ್ಶಿಯನ್ ಭಾಷೆಗೆ ಅನುವಾದಿಸಿದ್ದಾನಂತೆ. ಅವನ ಕನಸಿನಲ್ಲಿ ಶ್ರೀ ರಾಮಚಂದ್ರನೂ ಬಂದಿದ್ದನಂತೆ.

ಚಿದಾನಂದ ಸಾಲಿಯವರ ಗಜ಼ಲ್‍ಗಳು ಈ ಇಲ್ಲಿಯೂ ಏಪ್ರಿಲ್ ತಿಂಗಳ ಮಯೂರದಲ್ಲಿಯೂ ಬಂದಿವೆ ಕವಿ ಕಡೆಯಲ್ಲಿ ತನ್ನನ್ನೇ ಉದ್ದೇಶಿಸಿ ಹೇಳುವ ಸಾಲುಗಳು ಇಲ್ಲಿಯೂ ಇವೆ. ರೋಮ್ಯಾಂಟಿಕ್ ಆಗಿ ಇವೆ.

ಜಿ.ಟಿ.ನಾರಾಯಣರಾವ್ ಅವರ ಒಂದು ವೈಜ್ಞಾನಿಕ ಲೇಖನದಲ್ಲಿ ಒಬ್ಬ ವಿಜ್ಞಾನಿ W, O, B, A, F, G, K, M, R, N, S ಈ ಅಕ್ಷರಗಳನ್ನು ಅದೇ ಕ್ರಮದಲ್ಲಿ ನೆನಪಿಟ್ಟುಕೊಳ್ಳಬೇಕಿತ್ತಂತೆ. ಅವನು ಆ ಅಕ್ಷರಗಳಿಂದ ಪ್ರಾರಂಭವಾಗುವ ಶಬ್ದಗಳ ವಾಕ್ಯವೊಂದನ್ನು ರಚಿಸಿದನಂತೆ. ನಾರಾಯಣರಾವ್ ಅವರು 'ಚೆಲುಗನ್ನಡ'ದಲಿ ಒಂದು ಸೂತ್ರವಾಕ್ಯವನ್ನು ಹೆಣೆದರು . ಓ ನನ್ನ ಬಾಳ ಬೆಳಕೇ ಆಗಮಿಸು ಫೇನಮಯ (?) ಗೋರಸ(ಹಾಲು?)ವ ಕೊಡು ನನಗೆ ಮೃದುಭಾಷಿ ರಸಿಕಮಣಿ ನಗುನಗುತ ಸಾರೆಲೇ! ನಾನೂ ಈ ರೀತಿ ಪ್ರಯತ್ನಿಸಿ ಸೋತೆ. ನೀವು? ಬಹುಶ: ಶ್ರೀವತ್ಸ ಜೋಷಿಯವರು ಯಶಸ್ವಿಯಾಗುವರು!

ಡಾ. ರಂ. ಶ್ರೀ . ಮುಗಳಿಯವರು ಮರಾಠಿಗರ ಮಧ್ಯೆ ಹೇಗೆ ಕನ್ನಡ ಭಾಷೆಯನ್ನುಳಿಸಿಕೊಂಡೇ ಮರಾಠಿಗೆ , ಮರಾಠೀ ಜನರಿಗೆ ಒಗ್ಗಿಕೊಂಡು ಬಾಳಿದರೆಂಬ ಬಗ್ಗೆ ಒಂದು ಲೇಖನ , ಸೂರ್ಯನಾಥ ಕಾಮತರ ಒಂದು ಲೇಖನ 'ಗಣ್ಯ ಸಾಂಸ್ಕೃತಿಕ ಕೇಂದ್ರವಾಗಿ ಧಾರವಾಡ ಬೆಳೆದ ಪರಿ' ಇವೆ- ಕರ್ನಾಟಕದ ಎರಡು ಸಾಂಸ್ಕೃತಿಕ ಕೇಂದ್ರಗಳಲ್ಲಿ ಮೈಸೂರು ರಾಜಾಶ್ರಯದಲ್ಲಿ ಬೆಳೆದರೆ , ಧಾರವಾಡ ಕೇವಲ ಜನಾಶ್ರಯದಿಂದಲೇ ಬೆಳೆಯಿತು. ಪತ್ರ ಸಂಸ್ಕೃತಿ ಬಗ್ಗೆ ಒಂದು ಲೇಖನ ಇದೆ. ಅಂಚೆ ವ್ಯವಸ್ಥೆ ಬರುವ ಮೊದಲು ಜನ ಸಂದೇಶವನ್ನು ಜನರ ಮೂಲಕವಾಗಿಯೆ ಕಳಿಸಬೇಕಾಗುತ್ತಿತ್ತು. ಅಂಚೆ ವ್ಯವಸ್ಥೆ ಬಂದಾಗ ಒಂದು ವಿಳಾಸ ಬರೆದು ಪತ್ರವನ್ನು ಒಂದು ಕೆಂಪು ಡಬ್ಬಿಯಲ್ಲಿ ಹಾಕಿದರೆ ಅದು ವಿಳಾಸದಾರರಿಗೆ ಮುಟ್ಟುವದು ಅಂದಿನ ಜನರಿಗೆ ಬಹಳ ಅದ್ಭುತವೆನಿಸುತ್ತಿತ್ತಂತೆ. ಫೋನು / ಮೊಬೈಲು ಬಂದ ಮೇಲೆ ಪತ್ರ ಸಂಸ್ಕೃತಿ ನಶಿಸುವದು ಸಹಜ ಅಲ್ಲವೇ? .

ಒಂದು ಹೊಸಮಾತನ್ನು ನೋಡಿದೆ- ಅಕ್ಕಿ ನಿನ್ನದು , ಅನ್ನ ನಿನ್ನದೇ?

Rating
No votes yet

Comments